ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೆ.ಪ್ರಸರಣ--- ಸಿನರಿತಲ್ಪನೆ. - ಪ್ರಿಯವಾಚಕರೇ, ದಂಡಿನ ಪಾಳಯಗಳು ಯಾರು? ಬೈರಾಗಿಣಿಯು ಯಾರ ಪಾಳದಕಡೆಗೆ ಹೊರಟಿದಳು? ಎಂಬದನ್ನರಿತುಕೊಳ್ಳುವ ಇಚ್ಛೆಯು ನಿಮಗಾಗಿರ ಬಹದಾದ್ದರಿಂದ, ಅವನ್ನು ಇಲ್ಲಿ ಹೇಳುವೆವು. ನಿಮ್ಮಲ್ಲಿ ಬಹುಜನರು ಇತಿಹಾಸ ಓದಿ ದವರಿರಬಹುದು. ಇತಿಹಾಸ ಓದದೆಯಿದವರಿಗೂ ಅದು ತಿಳಿಯುವಹಾಗೆ ನಾವು ಸ್ವಲ್ಪ ದರಲ್ಲಿ ಹೇಳಬೇಕೆಂದು ಮಾಡಿದ್ದೇವೆ. ಕೌರವ-ಪಾಂಡವರ ಹೆಸರನ್ನು ಕೇಳದೆಯಿದ್ದ ಜನರು ನಮ್ಮಲ್ಲಿ ಇಲ್ಲವಷ್ಟೆ ? ಆ ಪ್ರತಾಸಿಗಳ ಕಾಲದಲ್ಲಿ ನಮ್ಮ ದೇಶವು ಸುಖ-ಸಂಪನ್ನ ವಾಗಿದ್ದು, ಅದು ಸ್ವಾತಂತ್ರ್ಯದ ಸೌಖ್ಯವನ್ನಾದರೂ ಸಂಪೂರ್ಣವಾಗಿ ಭೋಗಿಸುತ್ತಿತ್ತು: ಆದರೆ ಸುಖದುಂದೆ ದುಃಖವೂ, ಸ್ವಾತಂತ್ರದ ಮುಂದೆ ಪಾರತಂತ್ರವೂ ಕಟ್ಟ ಇಟ್ಟಿ ರುವವೆಂದು ಹೇಳಬಹುದಾಗಿದೆ. ಆರ್ಯಧರ್ಮದ ನಾವು ಒರಬರುತ್ತ ಸುಖಲೋಲುಪ ರಾಗಿ ಮೊದಲು ವಿಷಾಧೀನರಾಗಲು, ನವಲಿ ದೌರ್ಬಲ್ಯವು ಸೇರಿ ಮೆಲ್ಲ ಮೆಲ್ಲನೆ ಪರಾಧೀನತಯು ನನ್ನ ಬಳಿಗೆ ಬರತೊಡಗಿತು. ಆಗ ಗ್ರೀಕರು, ಶಕರು, ಮುಸಲಾ ನರು, ಇಂಗ್ಲೀಷರು ಕ್ರಮವಾಗಿ ನಮ್ಮ ದೇಶಕ್ಕೆ ಬಂದು ನಮ್ಮ ತಲೆಗೇರಿದ ವಿಷಯ ಲೋಲುಪತೆಯ ನಂಜನ್ನು ಇಳಿಸಿ, ನಮಗೆ ಪರಾಧೀನತೆಯ ಅನುಭವವನ್ನು ತಂದುಕೊಡ ಹತ್ತಿದರು, ಈಗ ನಾವು ಬರೆಯುವ ಕಾದಂಬರಿಯು, ನಮ್ಮ ದೇಶದೊಳಗಿನ ಮುಸ ಲಾನರ ಇಳಿಕೆಯ ಕಾಲದ ಪ್ರಸಂಗವಾಗಿರುತ್ತದೆ. ಮುಸಲ್ಮಾನರೊಳಗಿನ ಅಕಬರ, ಔರಂಗಜೇಬರೆಂಬ ಬಾದಶಹರ ಹೆಸರನ್ನು ಕೇಳದೆಯಿದ್ದ ಹಿಂದೂಜನರು ಕಡಿಮೆಯೆಂದು ಹೇಳಬಹುದು. ನಮ್ಮ ದೇಶಕ್ಕೆ ಮುಸ ಲ್ಮಾನರು ಬರಹದ ಬಳಿಕ ಸರಾಸರಿ ಸಾವಿರವರ್ಷಗಳಾದ ಮೇಲೆ ಈ ಬಾದಶಹ ದಿಲ್ಲಿಯಲ್ಲಿ ಆಳಿದರು. ಅವರು ಆಳಿದಕಾಲವು ಮುಸಲ್ಮಾನರ ಅತ್ಯುತ್ಕರ್ಷದ ಕಾಲ ವಾಗಿತ್ತು. ನಮ್ಮ ಈ ಕಾದಂಬರಿಯ ಕಾಲದಲ್ಲಿ, ಅಂದರೆ ಸನ್ ೧೭೬೧ನೆಯ ಇಸವಿ ಯಲ್ಲಿ ಔರಂಗಜೇಬನು ತೀರಿಹೋಗಿ, ಅವನ ಮಕ್ಕಳು, ಮೊಮ್ಮಕ್ಕಳು ದಿಲ್ಲಿಯಲ್ಲಿ ಆಳುತ್ತಿದ್ದರು. ಮುಸಲ್ಮಾನರಲ್ಲಿ ಅಕಬರಬಾದಶಹನಂಥ ಒಳ್ಳೆಯ ಅರಸರೂ ಆದರು, ಔರಂಗಜೇಬನಂಥ ದುಷ್ಠ ಅರಸರೂ ಆದರು; ಆದರೆ ಒಟ್ಟಿನಮೇಲೆ 'ಮುಸಲ್ಮಾನರು ಧರ್ಮಾಭಿಮಾನದಿಂದ ಹಿಂದೂಜನರನ್ನು ಪರಿಪರಿಯಾಗಿ ಹಿಂಸಿಸಿದರೆಂದು ಹೇಳಲಿಕ್ಕೆ ಬಾಧೆ ಯಿಲ್ಲ, ಅವರಲ್ಲಿ ಔರಂಗಜೇಬನಂತು ಈ ಧಾರ್ಮಿಕಹಿಂಸೆಗೆ ಕಳಸವಿಟ್ಟನೆಂದು ಹೆಳ ಬಹುದು, ಇಂಥ ಬಗೆಬಗೆಯ ಹಿಂಸೆಯಿಂದ ಹಿಂದೂಜನರು ಜರ್ಜರರಾಗಿ, ಆಗಾಗ್ಗೆ ದೇವ ರಿಗೆ ಮೊರೆಯಿಡುವರು. ಆಗ ಶಿವಾಜಿಯಂಥ ಎಷ್ಟೋ ತೇಜಸ್ಸಿಗಳು ತಲೆಯೆತ್ತಿ ಮುಸ ಲಾನರಿಗೆ ಬಗ್ಗದೆ ಸ್ವರಾಜ್ಯಗಳನ್ನು ಸ್ಥಾಪಿಸುವರು. ಮುಸಲಾ ನರ ಉಪಟಲದ ಕಾಲದಲ್ಲಾದ ಇಂಥ ಸ್ವರಾಜ್ಯಗಳಲ್ಲಿ ದಕ್ಷಿಣದೊಳಗಿನ ವಿಜನಗರದ ರಾಜವೂ, ಮರಾಟರ ರಾಜ್ಯವೂ ಹೆಸರಾದವುಗಳು ,