{[c]}/{(xxx-larger)}
೧೬ ಕುರುಕ್ಷೇತ್ರ !
ಉದಾತ್ತ ವಿಚಾರದ ಸ್ವಾಮಿನಿಷ್ಠ ಜಾಟನ ಈ ಸಮಂಜಸ ಮಾತು ನಡಿಸುವ ಸುಬುದ್ಧಿಯು ಆ ತರುಣ ಮದಾಂಧಮರಾಟನಿಗೆ ಆಗಲಿಲ್ಲ ಜಾಟನ ಮಾತಿನಿಂದ ಭಾವುಸಾಹೇಬ, ಮೇಹೆಂದಳೆ ಮೊದಲಾದವರ ಬಾಯಲ್ಲಿ ಮತ್ತಷ್ಟು ನೀರುಒಡೆದವು. ತಗಡು ಉಚ್ಚಿಸಿದರೆ ಇದಕ್ಕೂ ಹೆಚ್ಚು ಉತ್ಪನ್ನರಾಗುವದೆಂಬ ದುರಾಶೆಗೆ ಅವರು ಒಳ ಗಾದರು. ಕಡೆಗೆ ಹಟಮಾರಿ ಭಾವುಸಾಹೇಬನು ದ್ರವ್ಯಲೋಭದಿಂದ ಛತ್ತಿನ ತಗಡು ಉಚಿಸಿದರು. ಆಶ್ಚರ್ಯದ ಸಂಗತಿಯೇನಂದರೆ, ತಗಡಿನ ಬೆಲೆಯು ಮೂರುಲಕ್ಷ ಕ್ಕಿಂತ ಹೆಚ್ಚು ಆಗಲಿಲ್ಲ.ಆಗ ಮತ್ತೆ ಸುರಜಮಲ್ಲನು ಭಾವುಸಾಹೇಬನಿಗೆ -ಭಾವುಸಾಹೇಬ, ನಾವು ಬಳಿಯಲ್ಲಿರುತ್ತಿರಲು , ಸಿಂಹಾಸನದ ವಿದ್ವಾಂಸಮಾಡಿಸಿದಿರಿ. ಇದ ರಿಂದ ನಮಗೆ ಕಲಂಕವುಂಟಾಯಿತು. ನಮ್ಮ ವಿನಂತಿಯನೆಲ್ಲ ಸಾಬರವರು ಅಲ್ಲ ಗಳೆದುಬಿಡುವಿರಿ! ಹಿಂದುಧರ್ಮವ ಮುಣಗಿಸಬೇಕೆಂದು ನಮ್ಮ ಮನಸ್ಸಿನಲ್ಲಿರುವದಿಲ್ಲ. ರಾಜ್ಯದಲ್ಲಿ ಸ್ವಾಸ್ಥ್ಯವುಂಟಾಗಬೇಕೆಂದು ನಮ್ಮ ಮನಸ್ಸಿನಲ್ಲಿರುತ್ತದೆ . ಯಮು ನೆಯ ಉದಕವನ್ನು ಹಿಡಿದು ನಾವೂ, ನೀವೂ ಮಿತ್ರತ್ವದ ಶಪಥವಹಿಸಿದ್ದರ ಪರಿಣಾಮವು ಇದೇಯೋ! ಈಗಾದರೂ ನಮ್ಮ ಮಾತು ಕೇಳುವಹಾಗಿದ್ದರೆ , ಛತ್ತಿನ ತಗಡನ್ನು ಪುನಃ ಮೊದಲಿನಂತೆ ಕೂಡಿಸಿರಿ. ಅದರಿಂದ ನಿಮಗೆ ನಿಶ್ಚಯವಾಗಿ ಜಯಪ್ರಾಪ್ತಿಯಾಗು ವದು. ಸಾಹೇಬ, ನನ್ನ ಮತ್ತೊಂದು ವಿನಂತಿಯೇನಂದರೆ, ಗಾಜುದ್ದಿನನ ವಜೀರಿಯ ಪದವಿಯನ್ನು ಪುನಃ ಗಾಜುದ್ದೀನನಿಗೆ ಕೊಡಬೇಕು. ಈ ಸಂಬಂಧದಿಂದ ಸಿಂದೆ-ಹೋಳ ಕರರು, ಹಾಗು ನಾನು ಪ್ರಮಾಣದಬದ್ದ ರಾಗಿರುವೆವು. ಮುಂದೆ ನಮ್ಮ ಸಣ-ಪುಟ್ಟ ವಿನಂ ತಿಗಳನ್ನು ಮನ್ನಿಸುತ್ತಹೋದರೆ, ನಾವು ಸರ್ವಾಂಶದಿಂದ ನಿಮ್ಮವರೇ ಇರುವೆವು. ನಿಮಗೆ ಹತ್ತುವಷ್ಟು ಕಾಳು-ಕಡಿ ಮೊದಲಾದ ಸಾಹಿತ್ಯಗಳನ್ನು ಒದಗಿಸುವೆವು, ನೀವು ದಿಲ್ಲಿಯನ್ನು ಬಿಟ್ಟು ಮುಂದಕ್ಕೆ ಹೋಗಬೇಡಿರಿ. ಇಲ್ಲಿಯೇ ಇದ್ದು ಎಲ್ಲ ಕಾರಭಾ ರವನ್ನೂ, ಮಸಲತ್ತುಗಳನ್ನೂ ನಡಿಸಿ ನಮಗೆ ಅಪ್ಪಣೆ ಕೊಡುತ್ತಹೋಗಿರಿ. ಕದಾ ಚಿತ್, ಕುಂಜಪರದವರ ಪರಿಪತ್ಯ ಮಾಡುವದು ನಿಮ್ಮ ಮನಸ್ಸಿನಲ್ಲಿದ್ದರೆ, ಇಲ್ಲಿಯೇ ಇದು ಹಲವು ಪ್ರಕಾರದಿಂದ ಮಾಡಿರಿ; ಆದರೆ ನೀವು ವೈರಿಗಳ ಅಳವಿನಲ್ಲಿ ಸಿಗಬೇಡಿರಿ. ಎಂದು ಉತ್ತಮಪ್ರಕಾರದ ಆಲೋಚನೆಯನ್ನು ಹೇಳಿದನು; ಆದರೆ ಗರ್ವಿಷ್ಠನಾದ ಭಾವುಸಾಹೇಬನು ಅವಿಚಾರದಿಂದ ಸರಳಹೃದಯದ ಚಾಟನಿಗೆ ಪ್ರತ್ಯುತ್ತರವಾಗಿ“ನಾವು ನಿಮ್ಮ ಬಲವನ್ನು ನಂಬಿ ದಕ್ಷಿಣವನ್ನು ಬಿಟ್ಟು ಬಂದಿರುವದಿಲ್ಲ. ನಮ್ಮ ಮನ ಸ್ಸಿಗೆ ಬಂದಂತೆ ನಾವು ಮಾಡುವೆವು. ಅದನ್ನು ನೋಡುವದು ನಿಮ್ಮಿಂದಾದರೆ ಇಲ್ಲಿ ಇರಬೇಕು, ಆಗದಿದ್ದರೆ ನಿಮ್ಮ ಸ್ನಾನಕ್ಕೆ ನೀವು ಹೊರಟುಹೋಗಬೇಕು. ಅಬದಾಲಿಯ ಪಾರಿಪತ್ಯವಾದಬಳಿಕ ನಾವೂ, ನೀವೂ ನೋಡಿಕೊಳ್ಳೋಣವಂತೆ!” ಎಂದನು. ಪ್ರಿಯ ವಾಚಕರೇ, ಬುದ್ಧಿ ಹೇಳುವವರಕಡ ಗುದ್ದಾಡುವ ಈ ರೀತಿಯನ್ನು ನೋಡಿದಿರಾ? ಎಂಥ ಅವಿಚಾರವಿದು ! ಭಾವುವಿಗಾದರೂ ಏಕೆ ಅನ್ನಬೇಕು ? ಭವಿತ್ಯನವನ್ನು ತಪ್ಪಿಸು ವದು ಬಹ್ಮಾದಿಗಳಿಂದಲೂ ಆಗದು!_