ವಿಪರೀತಕಲ್ಪನೆ.
ಸಾಹೇಬನಂತು ಅದನ್ನು ಓದಿಸಿ ಕೇಳಿ ನಖಶಿಖಾಂತವಾಗಿ ಉರಿಯಹತ್ತಿದನು. ಆದರೆ ತನಗಾದ ಸಂತಾನವನ್ನು ಆತನು ಹೊರಗೆಡವದೆ (ಇದರ ಉತ್ತರವನ್ನು ಬೇಗನೆ ನಮ್ಮ ವಕೀಲರ ಮುಖಾಂತರವಾಗಿ ಕಳಿಸುವೆನೆಂದು ಹೇಳಿ, ಬಂದ ವಕೀಲರನ್ನು ಮರ್ಯಾದೆಯಿಂದ ಕಳಿಸಿಕೊಟ್ಟನು. ಆಮೇಲೆ ಮಸಲತ್ತಿಗೆ ಆರಂಭವಾಯಿತು. ಅಬುದಾಲಿಯ ಕರಾರು ಗಳಿಗೆ ಒಪ್ಪಿಕೊಳ್ಳದೆ ಆತನನ್ನು ಯುದ್ಧದಿಂದಲೇ ಹಣ್ಣಿಗೆ ತರಬೇಕೆಂದು ಭಾವೂಸಾಹೆಬನಾ, ಮೇಹೇಂದಳೆಯೂ ಅಭಿಪ್ರಾಯಪಟ್ಟರು; ಆದರೆ ಆ ಮಾತು ಜೋಳಕರನ ಮನಸ್ಸಿಗೆ ಬರಲಿಲ್ಲ. ಆತನು-ಭಾವುಸಾಹೇಬ, ದುರಾಣಿಗಳು ಗುಡ್ಡಗಾಡ ಜನರು. ಅವರೊಡನೆ ಕಾದಿ ನಾವು ತಡೆಯಲಾರೆವು. ಸದ್ಯಕ್ಕೆ ನನ್ನ ಸ್ಥಿತಿಯು ತೀರ ದುರ್ಬಲವಾಗಿ ರುವದು, ಹಟಮಾರಿತನವು ನೆಟ್ಟಗಲ್ಲ. ಈಗ ಆತನ ಕರಾರುಗಳಿಗೆ ಒಪ್ಪಿಕೊಂಡು ಮರ್ಯಾದೆಯಿಂದ ಹಿಂದಕ್ಕೆ ಸರಿದುಹೋಗುವದು ನನಗೆ ನೆಟ್ಟಗೆ ಕಾಣುತ್ತದೆ. ಈ ವರ್ಷ ಉಜ್ಜಯಿನಿಯಲ್ಲಿ ಸೈನ್ಯದ ಬೀಡು ಬಿಟ್ಟುಕೊಂಡು ಇರೋಣ. ಮುಂದಿನ ವರ್ಷ ಈ ಅಬದಾಲಿಯನ್ನು ನೋಡಿಕೊಳ್ಳೋಣವಂತೆ. ಪುಣೆಗೆ ಹೋಗುವದು ಮನಸ್ಸಿಗೆ ಬಾರ ದಿದ್ದರೆ, ಇತ್ತ ಕಡೆಯಲ್ಲಿ ಸರ್ವರೂ ಕ್ಷಿಪ್ರಾನದಿಯ ದಂಡೆಯಲ್ಲಿ ಇರೋಣವಂತೆ. ಮದ್ದು, ಗುಂಡು, ಆನೆ, ಕುದುರೆ, ಒಂಟೆ, ಎತ್ತು, ತೋಫಖಾನೆ, ಇವು ತಿಂದುಂಡು ಪರಿಪುಷ್ಟವಾ ದವೆಂದರೆ, ಮುಂದಿನ ವರ್ಷ ಬಯ ಅದಾಲಿಯದೇಏಕೆ, ರೋಮ-ರಾಮದೇಶಗಳ ಸಮಾಚಾರವನ್ನೂ ತೆಗೆದುಕೊಳ್ತಾಣವಂತೆ . ಧ ವೂಸಾಹೇಬ, ಪ್ರಸಂಗಬಂದರೆ, ಹಿಂದು ಗಳು ಹೋಗಿ ಮುಸಲ್ಮಾನರಾಗಾಣ; ಆದರೆ ಛತ್ರವತಿಯ ಮಾನವನ್ನು ಕಾಯ್ದುಕೊಳ್ಳೋಣ ! ಈ ಮೂತಿನಲ್ಲಿ ಎಷ್ಟು ಮೂತ್ರವೂ ಅಂತರವಾಗದು. ನಿಮ್ಮ ಸೇವೆಯಲ್ಲಿಯೇ ಕರಿಯ ಕೂದಲುಗಳು ಬೆಳ್ಳಗಾಗಿರುವ ನನ್ನಂಥ ಮುದುಕ ಮುದುಕ ಸರದಾರರು ಹಲವರು ಇರುವರು. ಅವರ ಮೂತನ್ನು ತಾವು ಕೇಳಲೇಬೇಕು. ನಿಮ್ಮ ಹಟವನ್ನೇ ನಡಿಸಿದರೆ ಸ್ವರಾಜ್ಯಕ್ಕೆ ಹಾನಿತತು . ಹಿಂದಕ್ಕೆ ನಿಮ್ಮ ಹಿರಿಯರಾದ ಅಪ್ಪಾಸಾಹೇಬರವರು (ಚಿಮಣಾಜೆ ಅಪ್ಪಾ) ವಸಯಿಕಾಟಿಯನ್ನು ಸ್ವಾಧೀನಪಡಿಸಿಕೊಳ್ಳುವದಕ್ಕಾಗಿ ಭೀಷ್ಮ ಪ್ರತಿಜ್ಞೆಯಂಥ ಘೋರಪ್ರತಿಜ್ಞೆಯನ್ನು ಮೂಡಿದ್ದರು; ಆಗ್ಗೆ ಅವರು ನನ್ನ ಮಾತು ಕೇಳಿ ದ್ದರಿಂದ ಈ ದಿವಸಗಳನ್ನು ನಾವು ನೋಡಿದೆವು. ಅದರಂತೆ, ಈಗ ನೀವಾದರೂ ನನ ಕೂತು ನಡಿಸಬೇಕೆಂದು ಈ ಬುಜರುಖ ಸೇವಕನ ಪ್ರಾರ್ಥನೆಯಿರುವದು. ಈ ಕಾಲದಲ್ಲಿ ನನಗೆ ಯೋಗ್ಯತೋರಿದ್ದನ್ನು ಅರಿಕೆಮಾಡಿಕೊಂಡಿರುವೆನು. ಇದರ ಮೇಲೆ ಶಾಸ್ತ್ರಿಗಳೆ ವಯೋವೃದ್ಧರಿರುವರು; ತಾವು ಜ್ಞಾನವೃದ್ಧರಿರುವಿರಿ. ತಮ್ಮ ಮತವನ್ನು ಮುಂದಿಡ ಬಹುದು; ಅನ್ನಲು, ಕೃಷ್ಣಶಾಸ್ತ್ರಿಗಳು ನಾಮ-ದಾನಗಳಿಂದ ಕಾರ್ಯನೂಡಿಕೊಳ್ಳುವದೇ ವಿಹಿತವೆಂದು ಅಭಿಪ್ರಾಯಪಟ್ಟರು.
ಬಳಿಕ ಸರ್ವಾನುಮತದಿಂದ ಅಬದಾಲಿಯಕಡೆಗೆ ವಕೀಲರಕಳಿಸುವದು ಗೊತ್ತಾಗಿ ಬಾಬುರಾವಭಾನುಫಡಣವೀಸ, ಲಕ್ಷಣದಲ್ಲಾಳ, ದುರಾಣಶಹ ಎಂಬ ಮೂವರನು ವಕೀಲರನ್ನಾಗಿ ಅಬುದಾಲಿಯಕಡೆಗೆ ಕಳಿಸಿದರು. ಅನರಸಂಗಡ ಅಬದಾಲಿಯ ಹೆಸರಿ