ಈ ಪುಟವನ್ನು ಪರಿಶೀಲಿಸಲಾಗಿದೆ

ಕುರುಕ್ಷೇತ್ರ!

೨೦

/

{{{1}}}
! ನಿಂದ ಭಾವುಸಾಹೇಬನು ಒಂದು ಪತ್ರವನ್ನು ಕೊಟ್ಟಿದ್ದನು. ಅದರ ಅಭಿಪ್ರಾಯವೇ ನಂದರೆ-ನಿಮ್ಮ ಪತ್ರವು ಮುಟ್ಟಿತು. ಅದಕ್ಕೆ ನಾವು ಬರೆಯುವ ಉತ್ತರವೇನಂದರೆಹಿಂದುಪದಪಾದಶಹ ಛತ್ರಪತಿಮಹಾರಾಜರವರು ತಮ್ಮರಾಜ್ಯದ ವ್ಯವಸ್ಥೆಯನ್ನು ತಮ್ಮ ಮನಸ್ಸಿಗೆ ಬಂದಂತೆ ಮಾಡಲು ಸ್ವತಂತ್ರರಿರುವರು. ಅವರ ಕೆಲಸದಲ್ಲಿ ನೀವು ಕೈಹಾಕಿ ಅಸ್ತವ್ಯಸ್ತಮಾಡುವ ಕಾರಣವಿಲ್ಲ. ನೀವು ಪರದೇಶದ ರಾಜರಾಗಿದ್ದು, ಸುಜಾಉದ್ದಾಲಾ, ಹಾಗು ನಜೀಬಲಾ ಇವರ ಮಾತು ಕೇಳಿ ನಿಮ್ಮ ಗಡಿಯನ್ನು ದಾಟಿ ನಮ್ಮ ದೇವ ದಲ್ಲಿ ಬಂದಿರುತ್ತೀರಿ. ನೀವು ಹೀಗೆ ಮಾಡಿದ್ದು ಯೋಗ್ಯವಲ್ಲ. ಹಿಂದಕ್ಕೆ ನೀವು ಹಿಂದು ಸ್ನಾನದಮೇಲೆ ದಂಡೆತ್ತಿ ಬಂದು ಮುಸಲ್ಮಾನ ಬಾದಶಾಹಿಯನ್ನು ಮುಣುಗಿಸಿರುತ್ತೀರಿ. ಈಗ ದಿಲ್ಲಿಯ ಮಿರಾಬೇಗಮರನ್ನು ಬೆನ್ನಿಗೆ ಕಟ್ಟಿಕೊಂಡು ಮತ್ತೆ ಬಂದು ವ್ಯರ್ಥವಾಗಿ ಪುಂಡಾಟಿಕೆ ನಡಿಸಿರುವಿರಿ. ಇದಸರಿಯಲ್ಲ. ಹಿಂದಕ್ಕೆ ನೀವುಬಂದು ಗೊಂದಲtಾಕಿದಾಗ ನಾವು ಇದ್ದರೆ, ದಿಲ್ಲಿಯ ಬಾದಶಾಹಿಯನ್ನು ಹೀಗೆ ಕೆಡಿಸುತ್ತಿದ್ದಿಲ್ಲ. ಸದ್ಯ, ನಮ್ಮ ಮಸಲತ್ತಿಗೆ ಅಡ್ಡಬರುವ ಅಧಿಕಾರವು ನಿಮಗಿಲ್ಲ. ನಮಗೆ ಯೋಗ್ಯವಾಗಿ ತೋರಿದ್ದನ್ನು ಮಾಡಲಿಕ್ಕೆ ನನ್ನಛತ್ರಪತಿಸರಕಾರವೂ, ಪೇಶ್ವ ಸರಕಾರವೂ ಸಮರ್ಥವಿರುತ್ತವೆ. ನೀವು ನಿಮ್ಮ ಗಡಿದಾಟಿ ಬಂದರೆ ಮರಾಟರು ನಾವು, ರೋಮ-ಶಾಮಗಳ ಸಮಾಚಾರವನ್ನು ಸಹ ತಕೊಳ್ಳುವಾಗ, ನಿಮ್ಮ ಪಾಡೇನು ? ನಮಾ ಡನೆ ಸ್ನೇಹಬಳಿಸುವ ಇಚ್ಛೆ ನಿಮಗಿದ್ದರೆ, ಕೂಡಲೆ ಸೈನ್ಯ ಸಹಿತವಾಗಿ ಅಟಕವನ್ನು ದಾಟಿ ನಿಮ್ಮ ದೇಶಕ್ಕೆ ಹೋಗಿರಿ. ಇತ್ತ ಎಲ್ಲ ಮಾತಿನ ಸಿದ್ದತೆಯಿರುವದು , ನಿಮ್ಮನ್ನು ಕರೆತಂದವರು ಏನು ಸುರಕೊಳ್ಳುವರೋ ನಾವರಿಯೆವು. ಛತ್ರಪತಿಯ ದೌಲತ್ತಿನ ಕರ್ತಾರರು ಸಂತಪ್ರಧಾನರಿದ್ದು, ಅವರ ಮೇಲೆ ಯಾವತ್ತು ರಾಜ್ಯದ ಭಾರವಿರುವದು, ಛತ್ರಪತಿಯ ಕೃಪೆಯಿಂದ ಅವರು ರಾಜ್ಯವನ್ನು ಸಂಪಾದಿಸಿ ವಿಸ್ತರಿಸಿದರು. ಇನ್ನು ಮೇಲೆಯೂ ಅದನ್ನು ವಿಸ್ತರಿಸುವ ಉತ್ಸಾಹವು ಅವರಿಗಿರುವದು, ನೀವು ತಿರುಗಿ ಹೋಗದಿದ್ದರೆ, ನಿಮ್ಮನ್ನು ಅಟಕದಾಟಿಸಿ ಅಟ್ಟಲಿಕ್ಕೆ ನಮ್ಮ ಮೂರುಲಕ್ಷ ಸೈನ್ಯವು ಸಿದ್ಧವಾಗಿರುವದು,

ಪ್ರಿಯವಾಚಕರೇ, ಈ ಉತ್ತರವನ್ನು ಓದಿ ಅತ್ಯಂತ ಅಭಿಮಾನಿಯದ ಆ ದುರಾಣಿ ಪುರುಷವ್ಯಾಘ್ರನ ಸ್ಥಿತಿಯೇನಾಗಿರಬಹುದೆಂಬದನ್ನು ನೀವೇ ತರ್ಕಿಸತಕ್ಕದ್ದು. ಆಗ ಆ ಅಬದಾಲಿಯು ಹೆಚ್ಚಿಗೆಯೇನೂ ಭೂತಾಡದೆ, ಆ ವಕೀಲರಿಗೆ ಅಪ್ಪಣೆಕೊಟ್ಟು ಕಳಿಸು ವಾಗ -“ಒಳ್ಳೇದು, ನೀವು ಹೋಗಿರಿ, ಮರಾಟರು ಗುರಾಣಿ ಯನ್ನು ಅಟಕ' ದಾಟ ಅಟ್ಟುವರೋ , ದುರಾಣಿಶಹನು ಮರಾಟರನ್ನು ದಕ್ಷಿಣಕ್ಕೆ ಅಟ್ಟುವನೋ, ಎಂಬದನ್ನು ನೋಡುವದಕ್ಕಾಗಿಯೇ ನಾವು ಬರುತ್ತಿರುವೆವೆಂದು ನಿಮ್ಮ ಯಜಮನರಿಗೆ ಹೇಳಿರಿ ಎಂದು ನುಡಿದನು.