ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಗುy ೪ ನೆಯ ಪ್ರಕರಣ - ದಂಡಿಸರ್ಪಾಲಯಗಳು, >SOಳ ಈ ಮೇರೆಗೆ ಭಾವುಸಾಹೇಬನು ದುರಾಳಿಯಕಡೆಗೆ ತಮ್ಮ ವಕೀಲರನ್ನು ಕಳಿಸಿ ಜ, ಆತನು ಯುವ ಪ್ರಸಂಗವು ತಪ್ಪದಂತೆಯೇ ಬರೆದನೆಂಬದು ವಾಚಕುವೆ ಗೊತ್ತಾಗಿರಬಹುದು. ಉತ್ತರÀಂದಸ್ತಾನದ ಅನುನಿಕ ಸರದಾರರು ಈಗ ಯುದ್ದ ಮಾಡಬಾರದೆಂದು ಬೇಕಾದಷ್ಟು ಹೇಳಿದರು; ಆದರೆ ಭಾವು ದೇಬನು ಹೇಳಲಿಲ್ಲ. ಯುದ ಮಾಡಿಯೇ ತೀರಬೇಕೆಂದು ಆತನು ಹಟಹಿಡಿದನು. ಬಾದಶಾಹಿ ಸಿಂಹಾಸನದ ಅಪಮಾನ ಮಾಡಿದ್ದರಿಂದ ಉತ್ತರಹಿಂದುಸ್ತಾನದ ಮುಸಲ್ಮಾನ-ಪಾಟ ರಜಪೂತಅರಸರು ಭಾವು ಸಾಹೇಬನಮೇಲಿನ ಮನಸ್ಸು ತೆಗೆದು ಒಬ್ಬೊಬ್ಬರೇ ಎಲ್ಲಿಯಿಂದ ಹೊರಟುಹೋಗಹತಿ ದರು, ಆಗ ಆ ಗರ್ವಿಷ್ಟ ಸದಾಶಿಮಾಯನು ಈ ಬಾದಶಾಹಿಪರಿವಾರದ ಸಹಾಯವನ್ನು ಲಕ್ಷಿಸಲಿಲ್ಲ. ಆತನು ತನ್ನ ದಕ್ಷಿಣದ ಪರಿವಾರವನ್ನು ಕುರಿತು-ಹೋಗಲಿ, ಇವರೆಲ್ಲರೂ ಹೊರಟುಹೋಗಿಬಿಡಲಿ, ಅದಕ್ಕಾಗಿ ಚಿಂತೆಮಾಡುವ ಕಾರಣವಿಲ್ಲ, ಬೆಟ್ಟಯಬೆನಕನ ಎರಡು ಕಾಲುಮುರಿದರೇನು ಅದು ಕುಂಟುಬೀಳುವದಿಲ್ಲ. ನಮ್ಮ ದಕ್ಷಿಣದದಂಡು ಶತ್ರು ಗಳ ಸಮಾಚಾರತಕೊಳ್ಳಲು ಸಮರ್ಥವಿರುವದು. ಇಂಥ ಕುಲಗೇಡಿಗಳೂ, ಅರ್ಧ ಹಿಂದೂ-ಅರ್ಧಮುಸಲ್ಮಾನರಾಗಿರುವವರೂ ನಮಗೆ ಬೇಡವೇ ಬೇಡ. ಅವರು ಹೋದರೆ ನಮ್ಮ ಕೆಲಸನಿಲ್ಲುವದಿಲ್ಲ” ಎಂದು ಹೇಳಿದನು. ಪ್ರಿಯವಾಚಕರೇ, ಎಂಥ ಗರ್ವವಿದು! ತನ್ನ ಕೈಯಲ್ಲಿ ಸದ್ಯಕ್ಕೆ ಸಾಕಷ್ಟು ಸೈನ್ಯವಿದ್ದರೂ, ಭಾವೂಸಾಹೇಬನು ಹೀಗೆ ನಿಷ್ಟುರ ಮಾತುಗಳನ್ನಾಡಿ ತನ್ನ ಬಲವನ್ನು ಕಡಿಮೆ ಮಾಡಿಕೊಳ್ಳ ತಪ್ಪಿಲ್ಲ. ಇದೆಂಥ ಮುಖದಿಗಿರಿಯು? ಇದೆಂಥ ಜಾಣತನವು? | ಹೀಗಿರುವಾಗ ಮಳೆಗಾಲವು ಹೋಗತೊಡಗಿತು. ಹೊಳೆಗಳು ಇಳಿಯಹತ್ತಿದವು. ಸಂಗ್ರಾಮದ ದಿವಸಗಳು ಸವಿಾಪಿಸತೊಡಗಿದವು. ಆಗ ಭಾವೂಸಾಹೇಬನು ರಾಜೇ ಬಹಾದ್ದರ ನಾರೊಶಂಕರನನ್ನು ಹತ್ತು ಸಾಸಿರ ದಂಡಿನೊಡನೆ ದಿಲ್ಲಿಯಲ್ಲಿಟ್ಟು, ಅಲ್ಲಿಂದ ೫೦/೬೦ ಹರದಾರಿಗಳ ಮೇಲಿರುವ ಕುಂಜಪ್ಪರದ ತಾಣೆಯಕಡೆಗೆ ತಾನು ಸ್ವತಃ ದಂಡಿ ನೊಡನೆ ಸಾಗಿದನು, ಕುಜಪುರದ ಠಾಣೆಯು ಅದಾಲಿಯದು. ತನಗೆ ಅಂಥಪ್ರಸಂಗ ಬಂದರೆ ಹಿಂದಿರುಗಿ ಪಂಚಾಬದಮಾರ್ಗದಿಂದ ಸ್ವದೇಶಕ್ಕೆ ಹೋಗಲಿಕ್ಕೆ ಅನುಕೂಲವಾಗ ಬೇಕೆಂತಲೂ, ಹೊಸದಾಗಿ ಸೈನ್ಯದ ಸಹಾಯಪಡೆಯಲಿಕ್ಕೆ ತೊಂದರೆಯಾಗಬಾರದೆಂತಲೂ ಆ ಯವನವೀರನು ಒಂದೇಜಾತಿಯ ಹತ್ತು ಸಾವಿರ ಜನ ರೋಹಿಲರನ್ನು ಅಲ್ಲಿ ಇಟ್ಟಿದ್ದನು. ಈ ಮಹತ್ವದ ಠಾಣ್ಯವನ್ನು ಸ್ವಾಧೀನಪಡಿಸಿಕೊಂಡು, ದುವಾಣಿಯ ಸ್ವದೇಶಕ್ಕೆ ಹೋಗುವ ದಾರಿಯನ್ನು ಕಟ್ಟಬೇಕೆಂದು ಭಾವುಸಾಹೇಬನು ತನ್ನ ಎಲ್ಲ ದುಂಡಿನೊಡನೆ ಹೊರಟದ್ದನು. ಹೀಗೆಮಾಡಿದರೆ ತನ್ನ ದೇಶಕ್ಕೆ ಹೋಗುವದಾರಿಯು ತನಗೂ ಕಟಾಗುವದೆಂಬುದನ್ನು ಆತನು ಲಕ್ಷಿಸಲೇಇಲ್ಲ; ಯಾಕಂದರೆ, ತಾನು ಸೋಲುವೆನೆಂ, ಕನೆಯುಸಹ ಆತನಿಗಿದ್ದಿಲ್ಲ.