ಕುರುಕ್ಷೇತ್ರ' ಣಿಯನ್ನು ನೋಡಿ ಬಾದಶಹನು ಸವ್ರನನಾಗಿದ್ದವು. ಕೆಲವು ಜನರ ಮುಖಚಂರ್ದ ದಲ್ಲಿ ಚಿತ್ಪಾಹಾರಕ ಶಕ್ತಿಯು ಸ್ವಾಭಾವಿಕವಾಗಿಯೇ ಇರುತ್ತದೆ. ಅದರಂತೆ ಬೈರಾಗಿಣಿಯ ಮುಖಚರ್ಯದ ಲಕ್ಷಣವಿದು, ಆಕೆಯು ಶಹನ ಚಿತ್ರವನ್ನು ಸ್ವಾಭಾವಿಕವಾಗಿ ಹಣ ಮಾಡಿದ್ದಳು. ಆಕೆಯ ಬಾಯಿಂದ ಎರಡು ಪದಗಳನ್ನು ಕೇಳಬೇಕೆಂಬ ಇಚ್ಛೆಯು ಶಹನಿಗೆ ಉತ್ಪನ್ನವಾಯಿತು. ಆತನು ನಜೀಬದ್ಲ ? ( ವಜೀರಸಾಬ, ಈ ಹುಡುಗೆಯು ಯಾವ ಜಾತಿಯವಳು ? ಈಕೆಯ ಉಡಿಗೆ-ತೊಡಿಗೆಗಳು ವಿಲಕ್ಷಣವಾಗಿ ತೋರುವವು. ಈಕೆಯಲ್ಲಿರುವ ತಂತುವಾರವನ್ನು ನೋಡಿದರೆ, ಈಕೆಗೆ ಕಾಡಲಿಕ್ಕೆ ಬರಬಹುದೆನ್ನುವಾಗೆ ತೋರುತ್ತದೆ. ಹೇಳಿ, ಒಂದೆಂದು ನರಗಳನ್ನು ಹಾಡೆಂದು ಈಕೆಗೆ ಹೇಳಿರಿ,” ಎಂದು ನುಡಿದನು. ಅದಕ್ಕೆ ನಜೀಬನು - ( ಬಾವಿದ, ಈಕೆಯು ಬೈರಾಗಿಣಿಯು. ನಮ್ಮ ದರವೇತಿಗಳಂತೆ ಬೈರಾಗಿಣಿಯರು ದೇವರ ಸ್ತೋತ್ರದಪದಗಳನ್ನು ಹಾಡಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವರು. ಈಕೆಗಾದರೂ ಮಾಡಲಿಕ್ಕೆ ಬರುತ್ತಿರಲೇಬೇಕು” ಎಂದು ಹೇಳಿ ಬೈರಾಗಿಣಿಗೆ - ಏ ಲೋಕರಿ, ಬಾದರರವರು ನಿನ್ನ ಬಾಯಿಂದ ಎರಡು ಹಾಡು ಕೇಳಬೇಕೆನ್ನುತ್ತಾರೆ. ನಿನ್ನ ವೀಣೆಯನ್ನು ಸಜ್ಜುಮಾಡಿಕೊಂಡು ಚನ್ನಾಗಿ ಪಾಡು ಎಂದು ಹೇಳಿದನು. ಆಗ ಬೈರಾಗಿಣಿಯು ಎದು ಬಾದಶಹನಿಗೆ ನೆಲಮುಟ್ಟಿ ಮುಜುರೆಮಾಡಿ ಆತಂಕ ಎದುರೆಯ ಮುಂದೆ ಕುಳಿತು ತನ್ನ ವೀಣೆಯ ಕಿವಿಗಳನ್ನು ತಿರುವಿ ಸಪ್ತಸ್ವರಗಳನ್ನು ಕೂಡಿಸಿದಳು. ಬಳಿಕ ಆಯು ಮತ್ತೆ ಎದ್ದುನಿಂತು ಬಾದಶಹನಿಗೆ ಮುಜುರೆಮಾಡಿ ಮುಂದಕ್ಕೆ ಸರಿದುನಿಂತು ಗಾಯನಮಾಡತೊಡಗಿದಳು. ಮಾದಲೇ ಜಾತಿ; ಅದರಲ್ಲಿ ನವಯೌವನ; ಮೇಲೆ ಸುಮನೋಹರಕತ; ಕೇಳು ವದೇನು ? ಬೈರಾಗಿಣಿಯು ಗಿರಡಿಯಮೇಲೆ ಗಿರಡಿಯ ಹೊರಳಿಸಿ ಹಾಡತೊಡಗಲು, ಬಾದಶಹನು ಸಂತೋಷಭರಿತನಾದನು, ನಮ್ಮ ದೇಶದ ಯಾವತ್ತು ತಂತುವಾದ್ಯಗಳಲ್ಲಿ ವೀಣೆಯು ಬಹು ಸುಸ್ತರವುಳ್ಳದ್ದೆಂದು ತಿಳಿಯಲ್ಪಟ್ಟಿರುವದು. ನಮ್ಮವರಿಗಂತು ಅದು ಪ್ರಿಯವಾದದ್ದೇ ಸರಿ; ಆದರೆ, ವಿಲಾಯತಿಯ ಜನರಿಗೂ ಅದು ಬಹು ಮನೋಹರವಾಗಿ ತೋರಿತು. ಬೈರಾಗಿಣಿಯ ಸುದೈವದಿಂದ ಅಂದಿನ ಆಕೆಯ ಗಾಯನವು ಬಹು ರನ್ನ ವಾಯಿತು. ಆಕೆಯ ಗಾಯನ ವಾದನಗಳು ಸಶಾಸ್ತ್ರವಾಗಿಯೂ, ತಾಲಬದ್ದವಾಗಿಯೂ ಇದ್ದವು. ಆ ತರುಣ' ಬೈರಾಗಿಣಿಯು ಆನಂದಪರವಶಳಾಗಿ ಗಾಯನಮಾಡುತ್ತಿರಲು, ವೀಣೆಯ ನಾದವಾವುದು, ಆಕೆಯ ಮಧುರಕಂಠಧನಿಯಾವದು ಎಂಬದು, ಸುಜಾ ದೌಲನಂಥ ರಸಿಕ ಗಾಯನಪಟು ಸರದಾರನು ಕೂಡ ತಿಳಿಯದಾದನು. ಅಂದಬಳಿಕ ಉಳಿದವರಪಾಡೇನು ? ವಿಲಾಯತಿಯ ಆ ಪಠಾಣ ಜನರಿಗೆ ಬೈರಾಗಿಣಿಯ ಹಾಡಿನೊಳಗಿ ನದೊಂದು ಅಕ್ಷರಸಹ ತಿಳಿಯುತ್ತಿದ್ದಿಲ್ಲ; ಆದರೆ ಅವರು ನಾವಲುಬ್ಬರಾಗಿ ಬೈರಾಗಿಣಿಯ ಸುತ್ತುಮುತ್ತು ನೆರೆದಿದ್ದರು. ಹೀಗೆ ಎಲ್ಲರೂ ಆನಂದಪರವಶವಾಗಿರುವಾಗ ಚೈರಾ ಗಿಣಿಯು ತನ್ನ ಗಾಯನವನ್ನು ನಿಲ್ಲಿಸಿ ವೀಣೆಯನ್ನು ಕೆಳಗಿಟ್ಟು ಬಾದಶಹನಿಗೆ ನೆಲ ಮುಟ್ಟಿ ಸಲಾಮುಮಾಡಿ ಮತ್ತೆ ಕೈ ಜೋಡಿಸಿ ನಿಂತುಕೊಂಡು ಖಾವಿಂದ, ನಾನು
ಪುಟ:ಕುರುಕ್ಷೇತ್ರ ಗ್ರಂಥ.djvu/೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.