ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲ್ಲಿ ದಂಡಿನಪಾಳಯ. ಹಿಂದೂ ಬೈರಾಗಿಣಿಯು. ನಿಮ್ಮ ವಿಲಾಯತಿಯು ಜನರ ಸ್ಥಿತಿ-ನೀತಿಗಳು ನನಗೆ ಗೊತ್ತಿ ಲ್ಲದ್ದರಿಂದ, ನಾನು ಇಲ್ಲಿ ಒಂದು ಕ್ಷಣವಾದರೂ ಇರಲಾರೆನು, ತಾವು ನನ್ನ ಹಡೆದ ತಾಯಿ ತಂದೆಗಳಹಾಗೆ ಇರುವಿರಿ. ನನಗೆ ಎರಡುದಿನ ಅನ್ನವಿಲ್ಲ. ಇಲ್ಲಿ ನೀರು ಕುಡಿಯುವದ ನನಗೆ ಮನಸ್ಸಾಗಲೊಲ್ಲದು. ದಯಮಾಡಿ ನನ್ನನ್ನು ಮರಾಟರ ಛಾವಣಿಗೆ ಕಳಿಸ ಬೇಕು. ಅಲ್ಲಿ ಭಿಕ್ಷೆಬೇಡಿ ಹೊಟ್ಟೆ ತುಂಬಿಕೊಳ್ಳುವೆನು.” ಎಂದು ಬೇಡಿಕೊಳ್ಳಲು, ನರ್ಜಿ ದೌಲನು ಆಕೆಯ ಮಾತಿನ ಅಭಿಪ್ರಾಯವನ್ನು ಬಾದಶಹನಿಗೆ ತಿಳಿಸಿದನು. ಕೂಡಲೆ ಬಾದಶಹನು ಲುತುವಖಾನನಿಗೆ-“ಖಾನಸಾಹೇಬ, ಈಗಲೆ ಹಣೆಯನ್ನು ನವ. ಛಾವಣಿಯಿಂದ ಮಾಡಿಸಿ ಸುರಕ್ಷಿತವಾಗಿ ಮರಾಟರ ಛಾವಣಿಗೆ ಮುಟ್ಟಿಸಿಬಿಡಿರಿ. ಈಕೆ ಯನ್ನು ಯಾರೂ ಬಲಾತ್ಕರಿಸದಂತೆಯೂ, ಈಕೆಗೆ ಯಾವಗೆಯ ತೊಂದರೆಯು ತಟ್ಟದಂ ತೆಯೂ ಎಚ್ಚರಪಡಿರಿ, ಅಲ್ಲಾ-ಇನವಾನ್, ಯಾರಾದರೂ ಈಕೆಯ ಕೈ ಮೈ ಮುಟ್ಟಿದರೆ, ಅವರ ಕೈ ಕಡಿಸುವೆನೆಂಬದನ್ನು ಚನ್ನಾಗಿ ನೆನಪಿನಲ್ಲಿಡಿರಿ. ಈ ಮೇರೆಗೆ ಆಳ್ವಿಪಿಸಿ ಬಾದಶಹನು ಇನ್ನು ಮುಂದಕ್ಕೆ ಸಾಗತಕ್ಕವನು; ಅಪ್ಪ ರಲ್ಲಿ ಹಾಫೀಜರಹಮಂತಖಾನನು ಭಾವರಹನ ಕುದುರೆಯ ಬಳಿಗೆ ತನ್ನ ಕುದುರೆಯನ್ನು ಒಯು -« ಬಾವಿಂದ, ಈ ಬಡವೆಯನ್ನು ಇಷ್ಟು ಹೊತ್ತು ದಣಿಸಿರುವೆವು. ಈಕೆಗೆ ನಮ್ಮಿಂದ ಏನಾದರೂ ಉಚಿತವು ದೊರೆಯತಕ್ಕದ್ದೆಂದು ನನಗೆ ತೋರುತ್ತದೆ,” ಎಂದು ಸೂಚಿಸಿ, ತನ್ನ ಬೊಕ್ಕಣದೊಳಗಿಂದ ಮೂರು ಹೊನ್ನುಗಳನ್ನು ತೆಗೆದು ಬೈರಾಗಿಣಿಯ ಉಡಿಯಲ್ಲಿ ಚೆಲ್ಲಿದರು. ಆಗ ಬಾದಶಹನು- ರಹಮಂತಖಾನ, ಈ ಕಾಲದಲ್ಲಿ ನೀವು ನನಗೆ ಯೋಗ್ಯ ಸೂಚನೆ ನೋಡಿದಿರಿ; ಈಕೆಗೆ ನಮ್ಮಿಂದೇನೂ ಮುಟ್ಟದಿದ್ದರೆ, ದುರಾ ಣಿಗಳು ಕಾಡುಜನರೆಂತಲೂ, ದಯಾರೂನ ತಿಂತಲೂ, ಲುಬ್ರಹಿತ, ಮೂರ್ಖ ತಿಂತಲೂ ಈ ಬೈರಾಗಿಣಿಯು ಭಾವಿಸಿ, ಮರಾಟರ ಮ.೦ದೆ ನನ್ನ ಹರವಿಯನ್ನು ಮಾಡ ಬಹುದಾಗಿತ್ತು. ಹೀಗಾಗುವದು ಯೋಗ್ಯವಲ್ಲ.” ಎಂದು ನುಡಿದು, ಆತನು ತನ್ನ ನಂಬಿಗೆಯ ಸೇವಕನಕಡೆಗೆ ಹೊರಳಿ.-ಜನಾಮರ್ದಹಾಲೀಮು, ಈ ಕಾಫರರ ಮುಡು ಗೆಗೆ ಖುರಾಸಾಣದ ಬಾದಶಹನ ನೆನಪು ಇರುವಂತೆ, ಒಂದು ಬೊಗಸೆತುಂಬ ಮಹರು ಗಳನ್ನು ಈಕೆಯ ಉಡಿಯಲ್ಲಿ ಹಾಕಿ, ಇಷ್ಟು ಇನಾಮನ್ನು ಬಾದಶಹನು ಕೊಟ್ಟಿರುವ ನೆಂದು ಮಹಾರಾಷ್ಟ್ರ ರಾಜನಾದ ಭಾವುಸಾಹೇಬನಿಗೆ ತಿಳಿಸೆಂದು ಈಕೆಗೆ ಹೇಳು.” ಎಂದು ಆಜ್ಞಾಪಿಸಿದನು. ಆಗ ಸುಚಾಂದ್ಲ ನೂ ಬೈರಾಗಿಣಿಗೆ ಕೈಯೊಳಗಿನ ಸಲಕಡಿ ಯನ್ನು ಉಚಿತಕೊಟ್ಟು ವಿನಯದಿಂದ ಬಾದಶಹನಿಗೆ-“ಹುಜೂರ. ಕೈ ಸ ಡಿ ಲು ಬಿಟ್ಟು ಇನಾಮು ಕೊಡಲಿಕ್ಕೆ ನಮ್ಮ ಬಳಿಯಲ್ಲಿ ವಿವುಲಧನಸಂಗ್ರಹವೆಲ್ಲಿದೆ? ಸದ್ಯಕ್ಕೆ ದುಡಿನವರಿಗೆ ಸಂಬಳ ಕೊಡುವದರೊಳಗೆ ನನಗೆ ಸಾಕುಬೇಕಾಗಿಹೋಗಿದ. ಈಗ ಖಜಾ ನೆಯಲ್ಲಿ ರೋಖಸಿಲಕು ಬಹು ಸ್ವಲ್ಪವಿರುವದೆಂದು ಮಾತ್ರೆ ನಮ್ಮ ದಿವಾಣ ಕಾಶೀನಾಥ ಪಂಡಿತನು ಅನ್ನುತ್ತಿದ್ದನು.” ಎಂದು ನುಡಿಯುತ್ತಿರಲು, ನಬೇಬಲಲನು ಮುಂದಕ್ಕೆ ಹೋಗಿ--ನಿಮ್ಮಂತೆ ನಮ್ಮಲ್ಲಡರಲ್ಲಿಯೂ ಸಿಲಕು ಹರಿದುಹೋಗಿರುವದು. ಆದರೂ