ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತ:ಕರ. ಇದ್ದು, ಒಳಗಡೆ ಮುತ್ತಿನಗೊಂಚಲು ಅಲೆದಾಡುತ್ತಿತ್ತು. ಆ ಯುವರಾಜನು ಭರಜ ರಿಯ ನಿಲುವಂಗಿಯನ್ನು ತೊಟ್ಟುಕೊಂಡು, ಬಹುಬೆಲೆಯುಳ್ಳ ಬನಾರಸದ ಚಿತ್ರ-ವಿಚಿ ತ್ರವಾದ ಪಾಲನ್ನು ಟೊಂಕಕ್ಕೆ ಸುತ್ತಿದ್ದನು. ಆತನು ತೊಟ್ಟಿ ಜಾರವು ಕನಕಾಪಿನ ದಾಗಿತ್ತು. ಮುತ್ತು-ರತ-ವಜ್ರವೈಡೂರ್ಯಗಳ ತೇಜಃಪುಂಜವಾದ ಕಂತಿಯಿಂದ ಆತನ ವಕ್ಷಸ ಇವು ಮುಚ್ಚಿಹೋಗಿತ್ತು. ದುಂಡಮಲ್ಲಿಗೆ, ಗುಲಾಬಿ ಮೊದಲಾದ ಸುವಾಸಿಕಪುಷ್ಪಗಳ ಅರಳನಗೈಗಳ ಉನ್ನತವಾದ ಕೊರಳಮಾಲೆಯು ಪಾದಗಳವರೆಗೆ ಇಳಿಬಿದ್ದು ಬಳಕುತ್ತಲಿತ್ತುಕಿವಿಗಳೊಳಗಿನ ದೊಡ್ಡಮುತ್ತಿನ ಚೌಕಳಿಗಳು, ಹೆಗಲು ಗಳಮೇಲಿನ ರತ ಖಚಿತಗಳಾದ ಬಾಹುಷರಗಳು, ಎಡಗೈಯೊಳಗಿನ ರಕೆಚ್ಚಿದ ಸಲ ಕಡಿಗಳು, ಬಲಗೈಯೊಳಗಿನ ರತ್ನ-ಸಚ್ಚಗಳ ಪೊ, ಬೆರಳೊಳಗಿನ ರತ್ನದುಂಗುರಗಳು ದೀವಪ್ರಕಾಶದ ಲಕಲಕನೆ ಹೊಳೆಯುತ್ತಿದ್ದವು. ಆತನ ಜೊಂಕದಲ್ಲಿ ಪಿಸ್ತೂಲು ಇದ್ದು, ಬಲಗೈಯ ಮುಷ್ಟಿಯಲ್ಲಿ ಕಠಾರಿಯೂ, ಮುಂದುಗಡೆಯಲ್ಲೊಂದು ಬಿಚ್ಚುಗ ತಿಯೂ ಇದ್ದವು. ಅವುಗಳ ಹಿಡಿಕೆಗಳೊಳಗಿನ ರತ್ನಗಳಿಂದ ದರ್ಬಾರದ ಜನರ ಕಣ್ಣುಗಳು ಕುಕುತಿದ್ದವು. "ರಾಜಕಾರ್ಯದಲ್ಲಿ ಯ, ರಣಕಾರ್ಯದಲ್ಲಿಯೂ ಧುರೀಣರಾದ ಹಲವು ಜನ ವೀರರು ಆ ದರ್ಬಾರದಲ್ಲಿ ಕುಳಿತಿದ್ದರು. ಅವರಲ್ಲಿ ಎತ್ತರವಾದ ಗಟ್ಟಿಮುಟ್ಟ ಮೈ ಕನ, ಅಗಲಾದ ಎದೆಯ, ನತೆಗೂದಲಿನ, ಹೊಳೆಯುವ ಕಣ್ಣುಗಳ, ಭವ್ಯವೂ ಗಂಭೀ ರವೂ ಆದ ಮುಖಮುದ್ರೆಯ, ಸ್ಪಷ್ಟ ಮಾತಿನ, ರಾಣಗಾಜಿಯೆಂದು ಹೆಸರು ಪಡೆದಿದ್ದ, ದಯಾಯುಕ್ತ ಸ್ವಭಾವದ ಮಲ್ಲಾರರಾವ ಹೋಳಕರನು ಕಣ್ಣುಗಳನ್ನು ಗರಗ ತಿರುಗಿ ಸುತ್ತ ಮೀಸೆಯನ್ನು ಹುರಿಮಾಡುತ್ತೆಲಿದನು, ಆತನ ಉಗ್ರವೃತ್ತಿಗೆ ಒಪ್ಪುವಂತೆ ಭೀಮ" ಎಂಬ ಹೆಸರನ್ನೂ ನಾನಾಸಾಹೇಬನು ಕೊಟ್ಟಿದ್ದನು. ಆ ಮಲ್ಲಾರರಾಯನ ಮಗ್ಗಲಿಗೆ, ಶಾಂತವೃತ್ತಿಯವನೂ, ದುಡುಕದೆ ಕೆಲಸಮಾಡುವವನೂ, ಚತುರನೂ ಆದ ಸೇನಾಖಾಸ ಬೇಲಸಮಶೇರಬಹಾದ್ರ ವಮಾಜಿ ಗಾಯಕವಾಡನು ಕುಳಿತಿದ್ದನು. ಆತನ ಆಚೆಕಡೆ ಯಲ್ಲಿ, ಹೈಡಂಬಾಪುತ್ರನಂತೆ ಮಹಾ ಪರಾಕ್ರಮಶಾಲಿಯಾದ ಮಸ್ತಾನಿಯರ ಸಮ ಶೇರಬಹದ್ದರನು, ಖಡ್ಡದಮೇಲೆ ಕೈಯಿಟ್ಟು ಕುಳಿತುಕೊಂಡಿದ್ದನು. ಅಲಿಜಾಬಹದ್ದರ ಜಯಪ್ಪಾ ನಿಂದೆಯ ತರುಣವುತ್ರನಾದ ಖಡ್ಗಪಟು ಜನಕೊಜಿ ಸಿಂದೆಯು ಎದುರಗಿನ ಸಾಲಿನಲ್ಲಿ ವೀರಾಸನದಿಂದ ಕುಳಿತುಕೊಂಡಿದ್ದನು. ಆತನ ಬಳಿಯಲ್ಪಿ, ಭಾವೂಸಾಹ ಬನ ಕಂಠಮಣಿಯ, ಮಂತ್ರಾಲೋಚಕನೂ, ಗಟ್ಟಿಮುಟ್ಟಮೈಕಟ್ಟಿನ ಭವ್ಯಪುರುಷನಾ, ಸ್ವಾಮಿಕಾರ್ಯಕ್ಕಾಗಿ ಚಿತೆಯಲ್ಲಿ ಹಾಕಿಕೊಳ್ಳಲಿಕ್ಕಾ ಹಿಂದೆಮುಂದೆ ನೋಡದವನೂ, ಐವತ್ತು ವರ್ಷದ ವಯಸ್ಸು ಮಾರಿದವನೂ ಆದ ಬಳವಂತರಾವ ಗಣಪತ ಮಹೇಂದಳೆ ಎಂಬವನು ಶ್ರೀಮಂತರಕಡೆಗೆ ದೃಷ್ಟಿಯನ್ನಿಟ್ಟು ಕುಳಿತುಕೊಂಡಿದ್ದನು. ಆತನ ಹತ್ಯ ರವೇ ಯುದ್ದ ಕುಶಲನಾದ ಮಹಾಪರಾಕ್ರಮಿ ಯಶವಂತರಾವಸವಾರನು ಮಿಾಸೆಯ ಮೇಲೆ ಕೈ ಹಾಕುತ್ತ ಕುಳಿತಿದ್ದನು. ಆತನಿಂದು-ಸಾಧಾರಣ ಎತ್ತರದ, ಹುರಿಕಟ್ಟಿನ