ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತಃಕಲಹ,,, ೪. ಸಿಟ್ಟಿಗೆಬ್ಬಿಸುವಿರಿ? ಸುಮ್ಮನೆ ಎರಡನೆಯವರ ಮೇಲೆ ತಮ್ಮ ಹೊರಿಸುವದರಿಂದಾಗುವ ಪ್ರಯೋಜನವಾದರೂ ಏನು? ಈಗೊದಗಿರುವ ದುಷ್ಪರಿಣಾಮದ ಜವಾಬದಾರಿಯ ನಮ್ಮ ಮೇಲೆ ಸರ್ವಥಾ ಇರುವದಿಲ್ಲ. ಇದೆಲ್ಲ ನಿಮ್ಮ ಮೂರ್ಖತನದ ಪರಿಣಾಮವು. ಶ್ರೀಮಂತರು ನಿಮ್ಮನ್ನು ನಂಬಿ ಬೆನ್ನು ಹತ್ತಿದರು; ಅವರ ಪರಿವಾರವು ನೀವು ಹೇಳಿದ ಹಾಗೆ ಕುಣಿಯಹತ್ತಿತು. ಕಣಕ್ಕೊಂದು ವಿಚಾರವು. ಒಮ್ಮೆ ಸತ್ತವರಂತೆ ಒತ್ತ ಆಗೆ ಸುಮ್ಮನೆ ಬಿದ್ದು ಬಿಟ್ಟರಿ, ಒಮ್ಮೆ ಲೂಟಯ ಆಶೆಯಿಂದ ಸಿಕ್ಕಹಾಗೆ ಹರಿದಾಡಿ ದಿರಿ; ಒಮ್ಮೆ ಕಾರಣವಿಲ್ಲದೆ ಹಿಂದಕ್ಕೆ ಸರಿದಿರಿ, ಒಮ್ಮೆ ಮುಂದಕ್ಕೆ ಸಾಗಿದಿರಿ. ಹೀಗೆ ಹುಡುಗಾತಿಗೆಯ ವ್ಯಾಪಾರವನ್ನು ನಡೆಸಿ ಈ ಹಾಡು ಮಾಡಿದಿರಿ. ಅದಕ್ಕೆ ನಾವೇನು ಮಾಡೋಣ? ನೀವು ಬರ್ಚಿಯಿಂದ ಇರಿಯುತ್ತ, ಖಡ್ಡಗಳಿಂದ ತುಂಡರಿಸುತ್ತ ನಿಶ್ಚಯ ದಿಂದ ಮುಂದಕ್ಕೆ ಸಾಗಿಹೋಗಿದ್ದರೆ, ಪಠಾಣರನ್ನು ಹಾ ಹಾ ಅನ್ನುವದರೊಳಗಾಗಿ ಯಮುನಾನದಿಯನ್ನು ದಾಟಿಸಿ ಅಟ್ಟಬಹುದಾಗಿತ್ತು. ಹೋಳಕರ--(ಸಂತಾಪದಿಂದ ಕಣ್ಣು ಕೆಂಪಗೆ ಮಡಿ) ನನಗೆ ಸಿಟ್ಟು ಬಂದರೂ, ಮೊರೆಯ ಮುಂದೆ ಸ್ಪಷ್ಟವಾಗಿ ಮಾತಾಡುವೆನು, ಹೆಂಗಸರ ಹಾಗೆ ಹಿಂದೆ ಒಬ್ಬರ ನಿಂದೆ ಮಾಡುವದಿಲ್ಲ. ಬೈಯುವದಿದ್ದರೆ ಮೋರೆಯ ಮುಂದೆಯೇ ಬೈಯುವೆನು. ಖಾನ ಸಾಹೇಬ, ನಾನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ನಮ್ಮ ಸೈನ್ಯವನ್ನು ಕೆಲಸಕ್ಕೆ ಬಾರದ್ದನ್ನಾಗಿ ಮಾಡಿದವರೇ ನೀವು ಈಗಾದರೂ ಶ್ರೀಮಂತರಿಗೆ ಇದೊಂದು ಹೇಳಿ ನೀವು ನಮ್ಮನ್ನು ನಾಶಗೊಳಿಸುವ ಹಾಗೆ ತೋರುತ್ತದೆ. ಈಗ ನಾನು ಸ್ಪಷ್ಟವಾಗಿ ಸೂಚಿಸುವೆನೇನಂದರೆ, ನಮ್ಮ ಸೈನ್ಯವು ಇಂದೇ ಹಿಂದಕ್ಕೆ ಸರಿಯಬೇಕು. ನಿಮ್ಮಕವಾ ಯತಿಯ ಸೈನ್ಯವನ್ನು ನೀವು ಬೇಕಾದಹಾಗೆ ಕುಣಿಸಿರಿ. ನಿಮ್ಮ ನಾಚಿನ ಸಿಪಾಯಿಗಳ ನಾಚಿನ ಕಾಲಲ್ಲಿ ನಾವು ಇಲ್ಲಿ ಕೊಳೆಯುತ್ತ ಬೀಳಬೇಕಾಯಿತು. ನಮ್ಮ ಮಾತನ್ನೇ ಶ್ರೀಮಂತರು ಕೇಳಿದ್ದರೆ ಇಷ್ಟು ಹೊತ್ತಿಗೆ ಹಿಂದಕ್ಕೆ ಸರಿದು ಗಂಡಾಂತರದಿಂದ ಪಾರಾ ಗುತ್ತಿದೆ ವು. ಈಗಾದರೂ ನಮ್ಮನ್ನು ಹೋಗಗೊಟ್ಟು ನೀವು ಬೇಕಾದಹಾಗೆ ಕುಣಿಯಿರಿ, ನಾವು ಹೋಗುವದರಿಂದ ನಿಮ್ಮ ಕುಣಿತಕ್ಕೆ ಪ್ರತಿಬಂಧವೂ ಉಂಟಾಗಲಿಕ್ಕಿಲ್ಲ. ಇಬ್ರಾಹಿಮಖಾನ-(ಸಿಟ್ಟಿನಿಂದ ಮೀಸೆಯ ಹುರಿಮಾಡಿ) ಸುಬೇದಾರ, ನೀವು ಮನಸ್ಸಿನಲ್ಲಿ ಏನು ತಿಳಿದಿರುವಿರಿ? ಈಗ ನಾನು ಕುರಾಣವನ್ನು ಮುಟ್ಟಿ ಹೇಳುತ್ತೇನೆ, ನೆಟ್ಟಗೆ ಕೇಳಿರಿ. ಯಾವ ಸರದಾರನು ನನ್ನನ್ನು ಗುರಾಣಿಯವರ ದವಡೆಯಲ್ಲಿ ಕೊಟ್ಟು, ರಂಡ-ಮುಂಡೆಯಂತೆ ಪಾರಾಗಿ ಹೋಗಬೇಕೆನ್ನುವನೋ, ಅವನನ್ನು ಶತ್ರುವೆಂದು ತಿಳಿದು ಅವನಮೇಲೆ ನನ್ನ ತೋಪಿನ ಗುಂಡುಗಳ ಮಳೆ ಸುರಿಸುವೆನು, ಆತನನ್ನು ಗೊತ್ತಿಗೆ ಹಚ್ಚದೆ ನಾನು ಎಂದಿಗೂ ಬಿಡಲಿಕ್ಕಿಲ್ಲ. ಸುಬೇದಾರಸಾಹೇಬ, ಅಲ್ಲಾನನ್ನು ಸ್ಮರಿಸಿಹೇಳುತ್ತೇನೆ; ಎಂದಿಲ್ಲೊಂದುದಿನ ಮರಣವುತಪ್ಪಿದಲ್ಲ, ಅದು ಎಲ್ಲರಪಾಳಿಗಾ ಇರು ವದು; ಆದರೆ ನಾನು ಜೀವದಿಂದಿರುವದರೊಳಗೆ ನಿಮ್ಮ ಸೇಡು ತೀರಿಸಿಕೊಳ್ಳದೆ ಬಿಡು ವದಿಲ್ಲ. ನಾನು ಸೇಡು ತೀರಿಸಿಕೊಂಡೇ ಪ್ರಾಣಬಿಡುವೆನೆಂಬದನ್ನು ಚನ್ನಾಗಿ ನೆನಪಿನಲ್ಲಿಡಿರಿ!