ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ಕುರುಕ್ಷೇತ್ರ ! ಸಖರೂಪವಾಗಿರುವೆವು, ವಿಶೇಷ-ಈ ಕುರುಕ್ಷೇತ್ರದ ರಣಭೂಮಿಯಲ್ಲಿ ಗಿಲಚಿ ಜನರ ಸಾಮರ್ಥ್ಯವು ವಿಶೇಷವಾಗಿರುವದು. ನಮ್ಮ ಪರಿಣಾಮವು ನೆಟ್ಟಗೆ ಕಾಣುವದಿಲ್ಲ. ತೀ. ಭಾವುಸಾಹೇಬ ಕಕ್ಕಂದಿರು ಅಭಿಮಾನಕ್ಕೆ ಬಿದ್ದಿರುವರು. ಈಗ ಪ್ರಜ್ವಲಿಸುತ್ತಿ ರುವ ರಣಕುಂಡದಲ್ಲಿ ಸರ್ವಸೈನ್ಯ ಸಹಿತವಾಗಿ ಅವರ ಆಹುತಿಯಾಗುವಂತೆ ತೋರು ತದೆ! ಅವರು ಹಿರಿಯರ ಕಡೆಗೆ ತಮ್ಮ ಕೊಂಕು-ಕೊರತೆಗಳನ್ನು ಬರೆದು ತಿಳಿಸಲಾರರು. ಇಂಥ ಸಂಕಟಸಮಯದಲ್ಲಿ ಐವತ್ತು ಸಾವಿರ ಸೈನ್ಯವನ್ನೂ, ಒಂದು ಕೋಟಿ ರಾಸಾ ಲಗಳನ್ನೂ ಕೂಡಲೆ ಕಳಿಸಿಕೊಡದಿದ್ದರೆ, ಪುನಃ ನಿಮ್ಮ ದರ್ಶನವಾಗಲಿಕ್ಕಿಲ್ಲ, ಪತ್ರ ಮುಖದಿಂದಾಗಿರುವ ಈ ದರ್ಶನವೇ ಕಷಯವೆಂದು ತಿಳಿಯಬೇಕು! ಹಿರಿಯರಿಗೆ ನನ್ನ ಹೊರತು ಇನ್ನೂ ಇಬ್ಬರು ಮಕ್ಕಳಿರುವರು. ದೇವರ ದಯದಿಂದ ತಮಗೆ ಮತ್ತೆ ಮಕ್ಕ ೪ಾಗುವ ಸಂಭವವಿರುತ್ತದೆ; ಆದರೆ ಕಾಕಾಸಾಹೆಬರಂಥ ಬಂಧುಗಳುಮಾತ್ರ ತಮಗೆ ಸಿಗಲಾರರು! ಆದ್ದರಿಂದ ಸಾವಿರ ಕೆಲಸಗಳನ್ನು ಬಿಟ್ಟು ಮಾಡಲು ಸಹಾಯವನ್ನೊ ದಗಿಸಿಕೊಟ್ಟು ಈ ಪ್ರಸಂಗದಲ್ಲಿ ಸಂರಕ್ಷಿಸಬೇಕು. ಬರೆಯತಕ್ಕ ಸಂಗತಿಯು ಇದಕ್ಕೂ ಹೆಚ್ಚಿನದು ಯಾವದೂ ಇಲ್ಲ. ಸೇವೆಗೆ ತುತವಿರಬೇಕು, ಇತಿ ವಿಜ್ಞಾಪನೆಗಳು. ತಮ್ಮ ಬಾಲಕ, ವಿಶ್ವಾಸ . ಹೀಗೆ ವಿರಸಾಯನು ಪ್ರಸಂಗೋಚಿತ ವಿಚಾರಮಾಡಿ ಪತ್ರ ಕಳಿಸುತ್ತಿರಲು, ಅತ್ರ ಹೋಳಕರನು ದುರಾಣಿಯಮೇಲೆ ಅಕಸ್ಮಾರ್ತ ರಾತ್ರಿ ಬೀಳುವದಕ್ಕಾಗಿ ಹೆಣಗು ತಲಿದ್ದನು, ಆತನ ಗುಪ್ಪಸಿದ್ಧತೆಯು ಒತ್ತರದಿಂದ ನಡೆದಿತ್ತು. ಹೋಳಕರ, ಈ ಯತ್ನವು ಸಫಲವಾಗುವದರಿಂದ, ಕಮರಿಹೋಗಿದ್ದ ಮಹಾರಾಷ್ಟ್ರದ ಆಶಾವೃಕ್ಷಕ್ಕೆ ಚಿಗರುಗಳೊಡೆಯಬಹುದಾಗಿತ್ತು. ಆದ್ದರಿಂದ ಹೋಳಕರನ ಪ್ರತಿಜ್ಞೆಗೆ ಬಹಳ ಗೌರವ ವುಂಟಾಗಿತ್ತು. ಅಂಥ ಗೌರವಕ್ಕೆ ಹೋಳಕರನು ನಿಶ್ಚಯವಾಗಿ ಪಾತ್ರನಿದ್ದನು. ಆತನು ನೆರೆದ ದರ್ಬಾರದಲ್ಲಿ ಇಬ್ರಾಹಿಮಖಾನನ ಮೇಲಿನ ಸಿಟ್ಟಿನಿಂದ ಮಾಸೆಯಮೇಲೆ ಕೈಹಾಕಿ ಪ್ರತಿಜ್ಞೆ ಮಾಡಿದ್ದರಿಂದ, ತನ್ನ ಆ ಮಿಾಸೆಗೆ ಮಣ್ಣು ಹತ್ತದಂತೆ ಆತನು ನೋಡಿಕೊಳ್ಳಬೇಕಾಗಿತ್ತು. ಆತನ ಸೂಚನೆಯಂತೆ ಮಹದಾಜಿಸಿಂದೆಯು ತನ್ನ ಸೈನ್ಯ ದೊಡನೆ ಅತಾಯಿಖಾನನ' ಸೈನ್ಯದಮೇಲೆ ಸಾಗಿಹೋದನು. ಸಮಶೇರಬಹದ್ದರನೂ, ವಿಂಚ್ರಕರನೂ ಹೋಳಕರನಿಗೆ ಸಹಾಯಕರಾಗಿ ಹೊರಟರು. ದುರಾಣಿಬಾದಶಹನ ಪ್ರತ್ಯಕ್ಷ ದುಡಿನ ಸಮಾಚಾರವನ್ನು, ಒಮ್ಮೆ ತನ್ನ ಕೈಮುಟ್ಟ ತಕ್ಕೊಳ್ಳಬೇಕೆಂದು ಹೋಳಕರನು ಮಾಡಿದ್ದನು. ಆ ಸಂಧಿಯು ಈಗ ಒದಗಿಬಂದಂತಾಗಿತ್ತು, ಐದು ಸಾವಿರ ಪೆಂಡಾರಿಗಳ ಸೈನ್ಯವನ್ನೂ, ಹತ್ತುಸಾವಿರ ರಾವುತರನ್ನೂ ಕಟ್ಟಿಕೊಂಡು, ನಮ್ಮ ಆ ಕುರುಬಸರದಾರನು ಮಧ್ಯರಾತ್ರಿಯಲ್ಲಿ ಛಾವಣಿಯಿಂದ ಹೊರಟನು. ಅಷ್ಟು ಹೊತ್ತಿಗೆ ಸಿಂದೆಯ. ಅತಾಯಿಖಾನನಮೇಲೆ ಸಾಗಿಹೋಗಿದ್ದನು. ಖಾನನು ಅತ್ತ ಯುದ್ದ