ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YS ಕುರುಕ್ಷೇತ್ರ ! ಹತ್ತಿದರು; ಅ ಮಹದಾಜಿ ಸಿಂದೆಯು ಅತಾಯಿಖಾನನ ಮೈಯನು ಚನ್ನಾಗಿ ನುಗು ಮಾಡಿದ್ದನು. ಹೀಗೆ ಮರಾಟರು ಎಲ್ಲ ಕಡೆಯಿಂದಲೂ ಸಿರಿಬಂದು ಅನರ್ಥ ಮಾಡತೊಡಗಿರುವದನ್ನು ನೋಡಿ ಶಹಾನು ದುಗು ಬಡಿದನು. ಅಂಥ ಅಲೌಕಿಕ ಬುದ್ದಿಶಾಲಿಯ, ಹಾಗು ಕೈ ಕೂತ ರಣಸಿರನ ಬುದ್ಧಿಯೂ, ಆಗ ಮಸಣಿ ಸಿ ಹೋಯಿತು! ತಾನು ಏಳುವದರೊಳಗೆ ಮರಾಟರು ತನ್ನ ಸೀರೆಯ ಮುತ್ತಿದರಲ್ಲ, ಎಂದು ಆತನು ಆಶ್ಚರ್ಯದಿಂದ ಬೆರಳು ಕಚ್ಚಿದನು. ತಾನು ನಿನ್ನೆ ತನ್ನ ಡೇರೆಯಲ್ಲಿ ಮಲಗದೆ ಇದ್ದದ್ದೊಂದು ಅಲ್ಲಾನ ಕೃಪೆಯೆಂದು ಆತನ ತಿಳಿದನು.

  • ಈ ಪ್ರಸಂಗದಲ್ಲಿ ಮರಾಟರು ಪ್ರಕಟಿಸಿದ ಪರಾಕ್ರಮವು ಆರ್ಯಕರವಾ ಗಿತ್ತು. ಅವರ ಆವೇಶದ ಹೊಡೆತಕ್ಕೆ ದುರಾಣಿಯ ಪಾಳಯವು ತತ್ತರಿಸಿತು; ದುರಾ ಣಿಯು ದುಗುಬಡಿದನು. ಏನುಮಾಡಬೇಕೆಂಬದು ಆತನಿಗೆ ತೋಚದಾಯಿತು. (ಮಲಾರ ಆಯಾ! ಮುಲ್ಯಾರಆಯಾ” ಎಂಬ ಭಯಸೂಚಕ ಧನಿಯು ಛಾವಣಿಯ ತುಂಬ ಹಬ್ಬಿತು. ಪೆಂಡಾರಿಗಳು ತಮ್ಮ ಲೂಟಿಯ ಕಾಯಕವನ್ನು ಬಿಡಿಸಿದರು. ಲೂಟ ಯೊಡನೆ ಜನಸಂಹಾರದ ಕಾರ್ಯವನ್ನೂ ಸಾಗಿಸಿದರು. ಆಗ ಅಬ್ ಕಾ ಕನಾ! ಅರೆ ಅಲ್ಲಾ! ಬಡಾಗಹಜಬಹುವಾ! ತೋಬಾ! ತೋಬಾ!” ಎಂಬ ಧ್ವನಿಯಿಂದ ದಿಕ್ಕು ಗಳು ತುಂಬಿದವು. ಕೆಲವು ಹೊತ್ತಿನಮೇಲೆ ಬರ್ಚಿಯ ಯುದವು ನಿಂತು ಖದ್ಯದ ಯುದ್ಧಕ್ಕೆ ಆರಂಭವಾಯಿತು. ಆ ಘೋರವಾದ ಕಾದಾಟದಲ್ಲಿ ಹೋಳಕರ-ಗಾಯಕ ವಾಡ-ವಿಂಚೂರಕರರವರ ಹಲವುಜನ ವೀರರು ರಣಭೂಮಿಯಲ್ಲಿ ಬಿದ್ದರು. ಆಮೇಲೆ ಆ ಮೂವರು ವೀರರೂ ಸೈನ್ಯದೊಡನೆ ಜಲಪ್ರವಾಹದಂತೆ ದುರಾಣಿಯ ಸೈನ್ಯದಮೇಲೆ ಹರಿದುಹೋದರು, ಉಭಯದಳದ ವೀರರ ಖಡ್ಗಳ ಹೊಡತದ “ಸಪ್ ಸಸ್” ಎಂಬ ಸಪ್ಪಳವು ಎಲ್ಲ ಕಡೆಯಲ್ಲಿ ಕೇಳಹತ್ತಿತು. ರಣಕೊಂಬು, ರಣಭೇರಿ ಮೊದಲಾದ ಹಣ ವಾದ್ಯಗಳು ಭೋರ್ಗರೆಯಹತ್ತಿದವು. ಮರಾಟರ ಆ ಮೂವರು ವೀರರಿಗೂ ರಣಮದ ವೇರಿ, ಅವರು ಎದುರಾದವರನ್ನು ತುಂಡರಿಸುತ್ತ ಸಾಗಿದರು. ಸ್ವತ: ಮಲ್ಯಾರರಾ ಯನು ಎಲ್ಲರಿಗಿಂತ ಮುಂದೆ ಹೋಗಿ ಶಹನ ಡೇರೆಯ ಮುಂದಿನ ಹಸಿರು ನಿಶಾನೆಯನ್ನು ಹೊಡೆದು ಕೆಡವಿ, ಅದರ ಸ್ಥಳದಲ್ಲಿ ತನ್ನ ಟೊಂಕಕ್ಕೆ ಸುತ್ತಿದ್ದ ಕಂದಿಯಬಣ್ಣದ ಸೆಲ್ಲೆಯ ನಿಶಾನವಾಡಿ ನಿಲ್ಲಿಸಿದನು! ಈ ನಿಶಾನೆಯನ್ನು ನೋಡಿದಕೂಡಲೆ ಮರಾಟಾ ವೀರರು “ಹರಹರ ಮಹಾದೇವ” ಎಂದು ಗರ್ಜಿಸಿ ಒತ್ತರದಿಂದ ಮುಂದಕ್ಕೆ ಸಾಗಿ ಹೋದರು. ಆಗ ಸುಜೆಉದ್ರಲನು ಬಾದಶಹನ ಬಳಿಯಲ್ಲಿ ಕುಳಿತಿದ್ದನು. ಆತನನ್ನು ಕುರಿತು ಬಾದಶಹನು(ಮರಾಠಾಸರದಾರರು ಭಯಂಕರ ಸಾಹಸಮಾಡಿದರು! ಮರಾ ಟಿರು ಹೆಸರಾದ ವೀರರಿರುವರು. ಇಂಥ ಪರಾಕ್ರಮಿಗಳಿರುವರೆಂಬದು ನನಗೆ ಗೊತ್ತಿ ದಿಲ್ಲ. ಇವರೊಡನೆ ಒಡಂಬಡಿಕೆ ಮಾಡಿಕೊಳ್ಳುವದು ನೆಟ್ಟಗೆ! ಹಾಗೆ ಮಾಡುವದರಲ್ಲಿಯೇ ಜಾಣತನವಿರುತ್ತದೆ. ಅನ್ನದ ದುಷ್ಮಾಳಬಿದ್ದಿದ್ದರೂ, ಈ ಸೈತಾನರು ಯಥಾಸ್ಥಿತ ವಾಗಿ ತಮ್ಮ ರಣಕಾರ್ಯವನ್ನು ಸಾಗಿಸುತ್ತಿರುವರಲ್ಲ! ಶಾಬಾಸ! ಇವರ ಬಲವು ಅಧಿಕ