ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1 ದೈನುಲವೇ ಒಲವು! U೧ ಹೊಡೆತವನ್ನು ತಪ್ಪಿಸಿಕೊಳ್ಳುವದಕ್ಕಾಗಿ ಅಥಗಾ೯ಣರು ಅಲ್ಲಲ್ಲಿ ಅಡಗಿದ್ದರು. ಕೆಲವರು ಡೇರೆಗಳ ನಡುವಿನ ಕಿರಿ ಓಣಿಯಲ್ಲಿ ಹುದುಗಿದ್ದರು; ಕೆಲವರು ಜಿಲ್ಲೆಯಲ್ಲಿ ಹೊಕ್ಕಿ ದ್ದರು; ಕೆಲವರು ಕೊತ್ತಳಗಳನ್ನು ಏರಿ ತೋಪುಗಳ ಆಶ್ರಯಪಡೆದಿದ್ದರು; ಕೆಲವರು ಸಾಮಾನುಗಳ ಸಂದಿಯಲ್ಲಿ ಕೆಲವರು ಕಾಳಿನ ಚೀಲಗಳಲ್ಲಿ ಹೀಗೆ ಸದವು ಸಿಕ್ಕಲ್ಲಿ ಅಡ ಗಿಕೊಂಡಿದ್ದರು. ಅವರನ್ನು ಹಣಿಯುವದಕ್ಕಾಗಿ ಮರಾಟರಾವುತರು ಮುಂದಕ್ಕೆ ಸಾಗಿಹೋದರು; ಆದರೆ ಡೇರೆಗಳ ಹಗ್ಗಗಳಲ್ಲಿ ಕುದುರೆಗಳ ಕಾಲುಗಳು ಸಿಕ್ಕು ಅವು ದಬದಬ ಬೀಳಹತ್ತಿದವು. ಆಗ ಕೆಲವು ರಾವುತರು ಕುದುರೆಯಿಂದ ದುಮುಕಿ, ಕುದುರೆ ಗಳನ್ನು ಬಿಟ್ಟುಕೊಟ್ಟು ಕೈ ಕತ್ತಿಯಿಂದ ಆಥಗಾಣರನ್ನು ತುಂಡರಿಸಹತ್ತಿದರು; ಕೆಲ ವರು ಡೇರೆಗಳ ಹಗ್ಗಗಳನ್ನು ಕತ್ರಿ-ಕಾರಿಗಳಿಂದ ಕೋರು, ಗೂಟಗಳನ್ನು ಕಿತಿ ಡೇರೆಗಳನ್ನು ಕೆಡವಿ ಕುದುರೆಗಳು ಹೋಗಲಿಕ್ಕೆ ಹಾದಿಯ ಮಾಡುತ್ತಿದ್ದರು. ಇತ್ತ ಕೆಲವು ಮರಾಟರು ತೋಫು ಹೂಡಿದ ಬುರುಜುಗಳನ್ನು ಸ್ವಾಧೀನಪಡಿಸಿಕೊಂಡು, ಆವೇಶದಿಂದ ಬಡಬಡ ಬುರುಜಗಳನ್ನೇರಹತ್ತಿದರು. ಈ ಬುರುಜುಗಳೇ ಮರಾಟರ, ನಾಶಕ್ಕೆ ಕಾರಣವಾದವು; ಯಾಕಂದರೆ, ಭಾರವು ಹೆಚ್ಚಾದಂತೆ ಆ ಕಟ್ಟಿಗೆ ಮಣ್ಣಿನ ಬುರುಜುಗಳು ಹೊರಗಿನ ಅಗಳತದಲ್ಲಿ ನಮಸ್ಕಾರ ಹಾಕಹತ್ತಿದವು. ಅಷ್ಟರಲ್ಲಿ ಅಘ ಗಾಣರ ಬಲವು ಹೆಚ್ಚಿ ಅವರು ಮರಾಟರಮೇಲೆ ತೋಫುಗಳ ಗುಂಡುಗಳನ್ನು ಸುರಿಸ ಹತ್ತಿದರು. ಹೀಗಾಗಿ ಬರಬರುತ್ತ ಮರಾಟರ ಸಂಹಾರದ ಮಿತಿ ಮೀರಿತು. ಎಷ್ಟಾದರೂ ಮರಾಟರು ಹೊರಗಿನಿಂದ ಎತ್ತಿ ಬಂದವರು. ನೆಲೆಯೂರಿಕೊಂಡಿದ್ದ ಅಫಗಾಟರಿಗಿದ್ದಷ್ಟು ಅನುಕೂಲತೆಗಳು ಅವರಿಗಿದ್ದಿಲ್ಲ. ಒಂದೇಸವನೆ ಮೂರು ತಾಸು ಮರಾಟರು ಆವೇಶದಿಂದ ಕಾದಿದ್ದರಿಂದ ಅವರು ದಣಿದಿದ್ದರು. ಅವರಿಗೆ ಹೊಸಸೈನ್ಯದ ಸಹಾಯವು ಬೇಗನೆ ಬರುವಹಾಗಿದ್ದಿಲ್ಲ. ಅಫಗಾಣರ ಸೈನ್ಯದ ಹೊಸ-ಹೊನ ಗುಂಪು ಗಳು ಕಾದಲು ಸಿದ್ಧವಾದವು. ಅಡಗಿದವರು ಅಲ್ಲಲ್ಲಿ ಹೊರಬಿದ್ದು ಮರಾಟರನ್ನು ತುಂಡ ರಿಸಹತ್ತಿದರು. ಹೀಗಾಗಿ ಮರಾಟರು ಕಂಗೆಟ್ಟು ಹಿಂದಕ್ಕೆ ಸರಿಯಹತ್ತಿದರು. ದುರಾ ಣಿಯು ಸುಜಾಉದೌಲನೇ ಮೊದಲಾದ ತನ್ನ ಸರದಾರರೊಡನೆ ಯುದ್ಧದ ಮುಖ್ಯ ಸ್ಥಳಕ್ಕೆ ಬಂದು, ತನ್ನ ಸೈನಿಕರನ್ನು ಉತ್ಸಾಹಗೊಳಿಸುತ್ತಿದ್ದನು. ಹೀಗೆ ತನ್ನ ಪಕ್ಷವು ಹಿಂಜರಿಯಹತ್ತಿದ್ದರೂ, ಅಫಗಾಣರ ಬಲವು ಹೆಚ್ಚುತ್ತ ಹೋದದ್ದನ್ನೂ ನೋಡಿ, ಹೋಳಕರನು ತನ್ನ ಸೈನ್ಯಕ್ಕೆ ರಣಭೂಮಿಯಿಂದ ಹಿಂದಕ್ಕೆ ಸರಿಯಲು ಸೂಚಿಸಿದನು; ಮತ್ತು ವಿಂಚ್ರಕರನಿಗೂ, ಸಮಶೇರಬಹದ್ದರನಿಗೂ ಹಿಂದಿರುಗಿ ಹೋಗುವ ಸೈನ್ಯ ವನ್ನು ರಕ್ಷಿಸಬೇಕೆಂದು ಆ ವೃದ್ದವೀರನು ಆಜ್ಞಾಪಿಸಿದನು. ಬಳಿಕ ಹೋಳಕರನು ಸ್ವತಃ ಅಫಗಾಣರೊಡನೆ ಕಾದುತ ಮೆಲ್ಲನೆ ಸಮರಭೂಮಿಯಿಂದ ತನ್ನ ಪಾಳಯದ ಕಡೆಗೆ ಸಾಗಿಬರುತ್ತಲಿದ್ದನು. ಹೀಗೆ ಸಾಗಿರುವಾಗ ವಿತರಕರನೂ, ಸಮಲೇರಬಹ ಧ್ವರನೂ, ಅತ್ಯ, ಮಹದಾಜಿಸಿದೆ ಪರಾಕ್ರಮದಿಂದ ಕಾದಿ ಹೋಳಕರನ ಸೈನ್ಯ ವನ್ನು ರಕ್ಷಿಸಿದರು; ಆದ್ದರಿಂದ ಹೇಳಿಕೊಳ್ಳುವಂಥ ಪ್ರಾಣಹಾನಿಯಾಗಲಿಲ್ಲ; ಆದರೂ