ಈ ಪುಟವನ್ನು ಪರಿಶೀಲಿಸಲಾಗಿಲ್ಲ.

<3 ಕುರುಕ್ಷೇತ್ರ ! ಮಾತಾಡಿದಂತೆ ಕೃತಿವಾರಿ: ತೊಂಸುವುದು ಸುಲಭವಲ್ಲ. ನುಡಿಯಂತೆ ನಡೆಯಾಗಲಿಕ್ಕೂ ಈಶ್ವರಕೃಪೆಯು ಬೇಕಾಗುತ್ತವೆ. ಭಾರತ ಯುದ್ಧದಲ್ಲಿ ಅರ್ಜುನನು ಆವೇಶದ ಭರ ದಲ್ಲಿ ಘೋರವ್ರತಿ ಮಾಡಿಬಿಡುವನು; ಆದರೆ ಆತನಿಗೆ ಶ್ರೀ ಕೃಷ್ಣಪರಮಾತ್ಮನ ಸಹಾಯ ವಿದ್ದದ್ದರಿಂದಲೇ ಅವು ಪೂರ್ಣವಾಗುತ್ತಿದ್ದವು; ಅದರಂತೆ, ಈಗ ನಿರರಾಯನ ಮೇಲೆ, ಆಥವಾ ಭಾವೂಸಾಹೇಬನಮೇಲೆ ಈಶ್ವರಕೃಪೆಯು ಇದ್ದರೆ ಮಾರರಾಯನ ಆವೇಶದ ಪ್ರತಿಜ್ಞೆಯು ಪೂರ್ಣವಾಗುತ್ತಿತ್ತು. ಆದರೆ ಕೌರವರಂತೆ ಆಗ್ಗೆ ಮಹಾರಾಷ್ಟ್ರ ಗೆ ಈಶ್ವರಕೃಪೆಯ ತಪ್ಪಿದ್ದರಿಂದ, ಅವರಲ್ಲಿ ಅಂತಃಕಲಹಗಳುತ್ತನ್ನವಾಗಿ ಅವರು ತಮ್ಮ ೯ಗೆ ಒರ ಅಹಿತವನ್ನೊಬ್ಬರು ಚಿಂತಿಸುತ್ತಿದ್ದರು; ಮತ್ತು ಒಬ್ಬರ ನಾಶಕ್ಕಾಗಿ ಒಬ್ಬರು ಪ್ರವೃತ್ತಿಸುತ್ತಿದ್ದರು. ಇದಕ್ಕೆ ವಿರುದ್ದವಾಗಿ ದುರಾಣಿಶಹನ ಸ್ಥಿತಿಯಿತ್ತೆಂದು ಹೇಳ ಬಹುದು. ಆತನ ಸರದಾರರಲ್ಲಿ ಕೆಲವರು ಪರಸ್ಪರ ವೈಮನಸ್ಸುಳ್ಳವರಾಗಿದ್ದರೂ, ಅವ ರೆಲ್ಲರನ್ನು ಮಿಸಿಕಾಡಗೊಡದಷ್ಟು ಮರಾಣಿರಹನು ಸಮರ್ಥನೂ, ಧೂರ್ತನೂ ಇದ್ದನು. ಇದರಿಂದ ಅವನ ದಂಡಿನಲ್ಲಿ ಏಕಮತವೂ, ಏಕವಿಚಾರವೂ ಇದ್ದವು; ಮೇಲಾಗಿ ದುರಾ ಣಿಯ ಮೇಲೆ ಈಶ್ವರಕೃಪೆಯಿತ್ತೆಂಬುದು ಹಲವು ಸಂಗತಿಗಳಿಂದ ವ್ಯಕ್ತವಾಗುವದು; ಈ ಕೃಪೆಯ ಮೂಲಕವಾಗಿಯೇ ಆ ಯವನಪೀರನು ಭಾವುಸಾಹೇಬನಂತೆ ಸೂಕ್ತಿ ನಿಂದ ಮೈಮರೆತು ಅವಿಚಾರದ ಕೆಲಸಗಳನ್ನು ಮಾಡಲಿಲ್ಲ. ಆತನು ಮೈತುಂಬ ಎಚ್ಚರವುಳ್ಳವನಾಗಿ, ಮರಾಟರ ನಿಜವಾದ ಯೋಗ್ಯತೆಯನ್ನರಿತು ಅದಕ್ಕೆ ತಕ್ಕಹಾಗೆ ನಡೆದುಕೊಳ್ಳುತ್ತಿದ್ದನು. ಆತನ ಸೈನ್ಯದಲ್ಲಿ ಉತ್ತಮವ್ಯವಸ್ಥೆಯಿದ್ದು, ಸೈನ್ಯವು ಯಾವಾ ಗಲೂ ಜಾಗರೂಕವಾಗಿರುತ್ತಿತ್ತು. ಪೂರ್ವಕಾಲದಲ್ಲಿ ಛಾವಣಿಯೊಳಗೆ ಡೇರೆಗಳನ್ನು ಮನಸ್ಸಿಗೆ ಬಂದಂತೆ ನಿಲ್ಲಿಸುವ ಪದ್ದತಿಯಿತ್ತು; ಆದರೆ ಚತುರನಾದ ದುರಾಣಿಶಹನು ಮರಾಟರ ಮುತ್ತಿಗೆಯ ರೀತಿಯನ್ನು ಅರಿತವನಾಗಿ, ಡೇರೆಗಳನ್ನು ಎರಡೆರಡು ಸಾಲಾಗಿ ನಿಲ್ಲಿ ಸಿದ್ದನು. ಆ ಎರಡು ಸಾಲು ಗಳ ನಡುವೆ ಒಬ್ಬ ಮನುಷ್ಯನು ಮಾತ್ರ ಪ್ರಯಾಸದಿಂದ ಹೋಗುವಷ್ಟು ಸ್ಥಳವಿರು ತಿತ್ತು, ಅದರಂತೆ ಶಹನು ತನ್ನ ಛಾವಣಿಯ ಸುತ್ತಲು ಗಿಡಗಳ ಗೊಡೆಯನ್ನೂ, ಕೊತ್ತಲಗಳನ್ನೂ ಮಾಡಿ, ಅವುಗಳನ್ನು ಮಣ್ಣು ತುಂಬಿ ಭದ್ರಪಡಿಸಿದ್ದನೆಂದು ನಾವು ಹಿಂದೆಯೊಮ್ಮೆ ಹೇಳಿದ್ದೇವೆ. ಆ ಮಣ್ಣಿನಿಂದ ಮುಚ್ಚಿದ ಕಟ್ಟಿಗೆಯ ಬುರಜುಗಳ ಮೇಲೆ ಆತನು ತೋಫುಗಳನ್ನಿಟ್ಟಿದ್ದನು. ಹೀಗೆ ವ್ಯವಸ್ಥೆ ಮಾಡಿರದಿದ್ದರೆ, ಈ ಕಾಲದಲ್ಲಿ ದುರಾಣಿಶಹನ ಸರ್ವಸ್ತದ ನಾಶವಾಗುತ್ತಿತ್ತೆಂದು ಹೇಳಬಹುದು. ಮೊದಮೊದಲು ಮರಾಟರು ಮಿಗಿಮೀರಿದರು. ಅವರು ಅಫಗಾಣರನ್ನು ಹಣಿಯುತ್ತ ಮುಂದಕ್ಕೆ ಸಾಗಿಹೋದರು. ಮಲ್ಲಾರರಾಯನು ಆವೇಶದಿಂದ ಸಾಗಿಹೋಗಿ ದುರಾಣಿಯನ್ನು ಸೆರೆಹಿಡಿಯುವ ಉಬ್ಬಿನಿಂದ ನಡಛಾವಣಿಗೆ ಹೋಗಿ ಮುಟ್ಟಿದನು. ಅಲ್ಲಿ ಆತನು ನಿಂತು ತನ್ನ ಕೈ ಕತ್ತಿಯನ್ನು ನೆಗಹಿ ತನ್ನ ಜನರನ್ನು ಪ್ರೋತ್ಸಾಹಿಸುತ್ತಿರಲು, ದುರಾಣಿಯ ಸಂಪೂರ್ಣ ಛಾವಣಿಯು ಎಚ್ಚತ್ತು ಯುದ್ಧಕ್ಕೆ ಸಿದ್ಧವಾಯಿತು. ಮೊದಲು ಮರಾಟರ