ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕುರುಕ್ಷೇತ್ರ ಕ್ರವನ್ನು ಕೂಡಲೆ ಆಕರ್ಷಿಸುತ್ತಿತ್ತು. ಹಾಡು ಕೇಳುತ್ತ ಕೂದದಂತ ಮಹದಾಜಿಯ ಮನಸ್ಸು ಗಾಯಕಿಯನ್ನು ಪ್ರತ್ಯಕ್ಷ ನೋಡುವದಕ್ಕಾಗಿ ಹರಿ ಯಹ೩ತು. ಆತನಿಗೆ ಗಾಯಧನಿಯ ಗುರುತು ಹದಹಾಗಾಗುವದು ; ಆದರೆ ಅದನ್ನು ಎಲ್ಲಿ ಕೇಳಿದ್ದನು, ಎಂದು ಕೇಳಿದ್ದನು ಎಂಬದರ ನೆನಪು ಆಗ ಬೆಲ್ಲದು! ಹೀಗೆ ಆತನು ಆಲೋಚಿಸುತ್ತಿರುವಾಗ ಏನೂ ಸ್ಮರಣಕ್ಕೆ ಬಾರದಿ ರಲು, ಆತನು ಯಶವಂತರಾಯನನ್ನು ಕುರಿತು-“ರಾವ, ನಮ್ಮ ಉದಾಸೀನ ವಾದ ಮನಸ್ಸನ್ನು ಗಾಯಕಿಯು ಚನ್ನಾಗಿ ರಮಿಸಿದಳು, ನಡೆಯಿರಿ, ಹೊರಗೆ ಹೋಗಿ ಇನ್ನು ನಾಲ್ಕು ಒಳ್ಳೆಯ ಪದಗಳನ್ನು ಹೇಳಿಸಿ ಆಕೆಗೆ ಏನಾದರೂ ಕೂ ಡೊಣ ನಡೆಯಿರಿ.”ಎಂದು ಹೇಳಿ, ಆತನೂರನೆ ಹೊರಗೆ ಬಂದನು. ಗಾಯಕಿ ಯು ಕಣ್ಣಿಗೆ ಬಿದ್ದ ಕೂಡಲೆ ಆ ತರುಣ ಸಿಂದಗೆ ಆಶ್ಚರ್ಯವಾಯಿತು. ಈಕ ಇಲ್ಲಿಗೆ ಹ್ಯಾಗೆ ಬಂದಳು ? ಎಂದು ಆತನು ಮನಸ್ಸಿನಲ್ಲಿ ಅಂದುಕೊಂಡು, “ಮನುಷ್ಯರ ಹಾಗೆ ಮನುಷ್ಯರು ಇರುವದಿಲ್ಲವ ? ಇನಿ ಷ್ಟು ವಿಚಾರಮಾಡಿ ಆಮೇಲೆ ಈಕ ಯನ್ನು ಕೇಳೋಣ” ಎಂದು ಆಲೋಚಿಸಿ, ಪವಾರನೂಡನ ಗಾಯನಕೇಳುತ್ತ ಕುಳಿತುಕೊಂಡನು. ಸಿಂದೆಯನ್ನು ನೋಡಿ ಆ ಗಾಯಕಿಯೂ ಸಂಕೋಚವರು ವಂತೆ ಕೋರಿತು. ಮೊದಲಿನಂತೆ ಆಕಿಯು ಮೈ ಚಳಿ ಬಿಟ್ಟು, ಹಾಡವಾದಳು. ಆಕೆಯ ಮೈ ಹುದುಗಿತು, ದೃಷ್ಟಿಯು ಅಧೋಮುಖವಾಯಿತು ; ಆಕೆಯು ಸಂಕೋಚಭಾವದಿಂದ ಸಿಂದಯನ್ನು ನೋಡತೊಡಗಿದಳು ! ಬರಬರುತ್ತ ಆಕಯು ವೀಣೆಯನ್ನು ಕೆಳಗಿಟ್ಟು ತಲೆಬಾಗಿ ಸುಮ್ಮನೆ ಕುಳಿತುಕೊಂಡಳು ! ಇದನ್ನು ನೋಡಿ ಒಂದಯ ಸಂಶಯದ ಶರಾಭವವಾಗಿ, ಆತನು ಆ ಸ್ತ್ರೀ ಯನ್ನು ಕುರಿತು-'ಉಮಾ, ನೀನು ಇಲ್ಲಿಗೆ ಹೇಗೆ ಬಂದೆ? ನಿನ್ನ ಆ ಗರದಾಕಾಸೀನದಿಗಳ ಸಂಗಮ ಸ್ಥಾನದ ಮಠವು, ಈ ಕುರುಕ್ಷೇತ್ರವೆ ? ಇಷ್ಟು ದೂರ ನಿನ್ನ ನ್ನು ಯಾರು ಕರತಂದರು.??” ಎಂದು ಕೇಳಲು, ಉಮಯು ವಿನಯ ದಿಂದ ಕೈಜೋಡಿಸಿ 'ಸರಕಾರ, ಕಣ್ಣಿಗೆ ದೂರವಾದರೂ ಕಾಳಿಗೆ ದೂರವಲ್ಲ. ನನ್ನ ಮನಸ್ಸನ್ನು ತಾವು ಎಳೆದುಕೊಂಡು ಬಂದದ್ದರಿಂದ, ತಮ್ಮನ್ನು ಹುಡು ಕುತ್ತ, ನಾನು ಬಂದನು.' ಎಂದು ದಿಟ್ಟ ತನದಿಂದ ಉತ್ತರ ಕೊಟ್ಟಳು. ಇವರಿ ಬೃರ ಮಾತುಗಳನ್ನು ಯಶವಂತರಾಯನು ಆಶ್ಚರ್ಯದಿಂದ ಕೇಳುತ್ತಿದ್ದನು. ಸಿಂದೆಯು ಕೆಲವು ಹೊತ್ತು ಆಲೋಚಿಸಿ ಸವಾರನನ್ನು ಕುರಿತು-ಪವಾರ ಸಾಹೇಬ, ಸ್ತ್ರೀಯರು ಅತ್ಯಂತ ಸಾಹಸಿಗಳಿಂಬದು ಸುಳ್ಳಲ್ಲ. ಈ ಹುಡುಗಿಯ ಸಾಹಸದ ಸುದ್ದಿಯನ್ನು ಕೇಳಿದರೆ ನೀವು ಆಶ್ಚರ್ಯಪಡಬಹುದು, ನಾನು ದಕ್ಷಿಣದಲ್ಲಿರುವಾಗ ಒಮ್ಮ ಖಾನದೇಶದ ಅಡವಿಯಲ್ಲಿ ಬೇಟೆಗೆ ಹೋಗಿದ್ದನು. ಆಗ ನನಗೆ ನೀರಡಿಕೆ ಬಹಳ ಆದದ್ದರಿಂದ, ನೀರು ಹುಡುಕುತ್ತ ಒಂದು ಮಠಕ್ಕೆ ಹೋದನು. ಈ ಹುಡುಗಿಯು ಆ ಮಠದ ಮಹಾಂತನ ಮಗಳು. ನಾನು ಹೋದಾಗ ಈಕೆಯ ತಂದೆಯು ಮಠದಲ್ಲಿದ್ದಿಲ್ಲ. ಈಕೆಯು ನದಿಗೆ ನೀರಿಗೆ ಹೋಗಿದ್ದಳು. ಮಠದಲ್ಲಿ ಯಾರೂ ಇಲ್ಲದ್ದರಿಂದ ಅದರ ಬಾಗಿಲು ಹಾಕಿರಲು, ನಾನು ನಿರಾಶೆಪಟ್ಟು, ಇನ್ನು ಕುದುರೆಯನ್ನು ತಿರುಗಿಸತಕ್ಕವನು,