ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&t= ಉಮೆಯು ಅಷ್ಟರಲ್ಲಿ ಈಕೆಯು ತಲೆಯ ಮೇಲೆ ಬಿಂದಿಗೆ ಹೊತ್ತುಕೊಂಡು ಬಂದಳು. ಸರಿ ಯಕ್ಕೆ ಬಂದ ಕೂಡಲೇ ಕುಡಿಯಲಿಕ್ಕೆ ನೀರು ಕೊಡಬೇಕೆಂದು ಕೇಳಲು, ಈಕೆ ಯು ತಂದ ಬಿಂದಿಗೆಯಿಂದಲೇ ನನ್ನ ಬೊಗಸೆಯಲ್ಲಿ ನೀರು ಹನಿಸಹತ್ತಿದಳು. ನೀರು ಕುಡಿಯುವಾಗ ಈ ಹುಡುಗಿಯ ಮನಸ್ಸು ನನ್ನನ್ನು ನೋಡಿ ಮೋಹಿತ ವಾಗಿರುವಂತ ನನಗೆ ತೋರಿತು. ಆಗ ನಾನು ಸ್ವಾಭಾವಿಕವಾದ ವಿನೋದ ದಿ೦ದ-“ಏ ಪೂರೀ, ನಿನಗೆ ನಾನು ಮ೦ತ್ರಹಾಕಿ ಹೋಗುವನು. ಇನ್ನು ನೀನು ನನ್ನ ವಳಾದೆ. ನಾಳೆ ನನ್ನ ನ್ನು ಹುಡುಕುತ್ತ ನಾಯಿಯ ಹಾಗೆ ಬೆನ್ನು ಹತ್ತಿ ಬರುತ್ತಿ ನೋಡು.' ಎಂದು ನುಡಿದನು; ಆದರೆ ಅದನ್ನು ನಿಜವೆಂದು ತಿಳಿದು ಈ ಹುಡುಗೆಯು ನನ್ನನ್ನು ಹುಡುಕುತ್ತ ಬಂದಂತೆ ತೋರುತ್ತದೆ. ಪಾಪ ! ಬಡ ವೆಯು ಎಷ್ಟು ದಣಿದಳು ! ತಂದೆಯನ್ನು ಬಿಟ್ಟು ಬಂದು ಎಂಥ ಸಾಹಸ ಕರ್ಮ ಮಾಡಿದಳಲ್ಲ! ಆದರೆ ರಾವ, ಪ್ರೇಮದ ಮಹಿಮೆಯು ವಿಲಕ್ಷಣವಿರುವದಲ್ಲವೆ?' ಎಂದು ನುಡಿದು, ಮಹದಾಜಿಯು ಉಮಯನ್ನು ಕುರಿತು ನಗುತ್ತ ಮಹದಾಜಿ-ಉದು ! ಇಷ್ಟು ಕಷ್ಟ ಪಟ್ಟು ಬಂದು ಇಲ್ಲಿ ಏನು ಕಟ್ಟಿ ಕೂ ಳ್ಳುವೆ ? ಉಮ- ಚರಣಗಳ ದರ್ಶನಲಾಭವಾದಬಳಿಕ ನನಗೆ ಹೆಚ್ಚಿನದೇನು ಬೇಕು? ಮಹದಾಜಿ-ಹಾಗಾದರೆ ದರ್ಶನವಾಯಿತಲ್ಲ, ನಡೆಯನ್ನು ! ಚರಣಗಳ ದರ್ಶನವಾದ ಬಳಿಕ ಅವುಗಳನ್ನು ಸೇವಿಸಿ ಧನ್ಯವಾಗದೆ ಹಾಗೆಯೇ ಹೋಗಬಹುದೆ ? ಮಹದಾಜಿ-ಘೋರಸಂಗ್ರಾಮ ನಡೆದಿರುವಾಗ ನಿನ್ನಿಂದಾಗುವ ಪ್ರಯೋ . ಜನವೇನು ? ಉಮ-ಇಂಥ ಕಠಿಣಪ್ರಸಂಗದಲ್ಲಿ ನನ್ನ ಸೇವೆಯ ಪ್ರಯೋಜನವಾದರೆ ಮಾತ್ರ ನಾನು ಇಷ್ಟು ದೂರ ಕಷ್ಟ ಪಟ್ಟು ಬಂದದ್ದರ ಸಾರ್ಥಕವಾಗುವದು. ಸರ ಕಾರ, ತಮ್ಮ ಸಂಕಟಗಳಿಗೆ ಪಾಲುಗಾರಳಾಗುವದಕ್ಕಾಗಿಯೇ ನಿಮ್ಮ ಉಮಯ ನಿಮ್ಮನ್ನು ಹುಡುಕುತ್ತ ಬಂದಿರುವಳು. ಹೇಳಿರಿ, ತಮ್ಮ ಸಲುವಾಗಿ ಬೆಂಕಿಯಲ್ಲಿ ಹಾರಿಕೊಳ್ಳಲಾ ? ನಾನು ಏನು ಮಾಡಿದರೆ ತಮಗೆ ಹಿತವಾಗುತ್ತದೆಂಬದನ್ನು ದಯಮಾಡಿ ಹೇಳಿರಿ, ಏಕಾಕಿಯಾಗಿ ತಮ್ಮನ್ನು ಹುಡುಕುವಾಗ ನನಗಾದಷ್ಟು ಕಷ್ಟವು, ಈಗ ತಮ್ಮ ಚರಣಗಳನ್ನು ಕಂಡಿರುವ ನನಗೆ ಆಗುವಹಾಗಿಲ್ಲ. ಮಠ ವಾಸಿಯಾದ ನಿಮ್ಮ ಉಮೆಯ ನಿಷ್ಠ ಯಾ ವರೂ ಪರೀಕ್ಷಿಸಿಬಿಡಿರಿ ! ಹೀff ಅತಿ ಸಾಹಸದಿಂದ ನುಡಿಯುವ ಸ್ತ್ರೀಯು ಯಾರಿರಬಹುದೆಂಬದ ನ್ನು ನಮ್ಮ ವಾಚಕರು ತರ್ಕಿಸಿರಬಹುದು. ದುರಾಣಿ ಬಾದಶಹನ ಮನಸ್ಸು ಮಚ್ಚಿಸಿ, ಆತನ ಛಾವಣಿಯಿಂದ ಪಾರಾಗಿ ಬಂದ ಬೈರಾಗಿಣಿಯ ಈ ಉಮೆ ಯೆಂದು ನಾವು ವಾಚಕರಿಗೆ ಸ್ಪಷ್ಟವಾಗಿ ಹೇಳುವೆವು. ಇನ್ನು ಮೇಲೆ ನಾವು ಬೈ ರಾಗಿಣಿಯೆಂದು ಕರೆಯದೆ ಆಕೆಯನ್ನು ಉಮೆಯೆಂದೇ ಕರೆಯುತ್ತೇವೆ. ಉಮೆ ಯು ಹೀಗೆ ಸ್ಪಷ್ಟ ಮಾತಾಡುವದನ್ನು ಕೇಳಿ ಆ ಇಬ್ಬರು ಸರದಾರರು ಆಶ್ಚರ್ಯ ದಿಂದ ಒಬ್ಬರಮೋರೆಯನ್ನೊಬ್ಬರು ನೋಡುತ್ತಿರಲು, ಭಾವುಸಾಹೇಬನ ಕಡೆ