ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂ ಕುರುಕ್ಷೇತ್ರ ಯಿಂದ ಒಬ್ಬ ಭಾಲದಾರನು ಬಂದು ಹಿಂದಿಯನ್ನು ಕುರಿತು-ಶ್ರೀಮಂತ ಭಾವುಸಾಹೇಬರವರು ಇಗಲೆ ತಮಗೆ ಬರಹೇಳಿರುವರು.' ಎಂದು ವಿಜಾಹಿಸಿ ದನು. ಕೂಡಲೆ ಸಿಂದೆಯು ಎದ್ದು ತನ್ನ ಕುದುರೆಯನ್ನು ತರಹೇಳಿ ಪೂಷಾ ಕು ಹಾಕಿಕೊಳ್ಳಲಿಕ್ಕೆ ಒಳಗೆ ಹೊರಟನು. ಆ ಯಶವಂತರಾಯನು ತನ್ನ ಡೇರೆಗೆ ಹೊರಟನು. ಇದನ್ನೆಲ್ಲ ನೋಡುತ್ತ ಕುಳಿತಿದ್ದ ಉಮೆಯು-'ಇಂಥಲ್ಲಿ ನನ್ನ೦ಥ ಕಂಗಾಲ ಭಿಕ್ಷುಕಿಯನ್ನು ಯಾರು ಕೇಳುವರು ? ಸುಳ್ಳೇ ನನ್ನ ಭಾ೦ತಿಯು!' ಎ: ದು ಪಶ್ಚಾತ್ತಾಪಪಡುತ್ತ ಕುಳಿತಿರುವಾಗ, ಇಬ್ಬರು ದಾಸಿ ಯರು ಬಂದು ಅವಳನ್ನು ಆದರದಿಂದ ಒಳಗೆ ಕರಕೊಂಡು ಹೋದರು. ಇತ್ತ ಮ ಹದಾಜಿಯು ದರ್ಬಾರದ ಉ ಗೆ ತೊಡಿಗೆಗಳನ್ನು ಧರಿಸಿ ತನ್ನ 'ಬಿಜಲಿ' ಎಂಬ ಹೆಸರಿನ ಕುದುರೆಯನ್ನು ಹತ್ತಿ ಶ್ರೀಮಂತರ ಡೇರೆಯ ಕಡೆಗೆ ನಡೆದನು. ಶ್ರೀ ಮಂತರು ಈಗ ತನ್ನ ನ್ನು ಯಾಕೆ ಕರೆಸಿರಬಹುದೆಂದು ಆತನು ಯೋಚಿಸುತ್ತ ಅದನು. ಏನಾದರೂ ಕೇಳುವದಕ್ಕಾಗಿ ನಾಲ್ಕು ಜನ ಸರದಾರರೊಡನೆ ತನ್ನ ನ್ನು ಕರೆಸಿರಬಹುದೆಂದು ಆತನು ತಿಳಿದನು. ಆದರೆ ಹಾಗೇನು ಇಟ್ಟ೪; ಶ್ರೀ ಮಂತರು ಬೇರೆ ಯಾವ ಸರದಾರರನ್ನೂ ಕರಿಸದೆ, ಕೇವಲ ಮಹದಾಜಿಸಿದೆಯೋ ಬ್ಬ ನನ್ನ ಕರೆಸಿದ್ದರು. ಶ್ರೀಮಂತರ ಚೋಪದಾರನು ಮಹದಾಟಿಯನ್ನು ಶ್ರೀಮಂತರ ಖಾಸಜೀರೆಗೆ ಕರಕೊಂಡು ಹೋದನು. ಅಲ್ಲಿ ಬೇರೆ ಸರದಾರ ರಾರೂ ಇದ್ದಿಲ್ಲ. ಸದಾಶಿವರಾವ ಭಾವುರವರು ಬೆಳ್ಳಿಯ ಪಲ್ಲಂಗದ ಮೇಲೆ ಒಬ್ಬರೇ ವಿಚಾರಮಾಡುತ್ತ ಕುಳಿತಿದ್ದರು. ಅ. ಮುಖಮುದ್ರೆ ಯು ದಿನ ದಂತೆ ಉಲ್ಲಸಿತವಾಗಿದ್ದಿಲ್ಲ ; ಅದು ತೀರ ಬಾಡಿ ಹೋಗಿತ್ತು. ಅವರು ಒಳಗೆ ಸೋತರ ಜೋಡಿಸಿದ ಬರಿಯದೊಂದು ಶಾಲಟೋಡಿಯನ್ನು ಹೊದ್ದುಕೊಂಡು ಕುಳಿತಿದ್ದರು. ಕಣ್ಣುಗಳಲ್ಲಿ ಮಾತ್ರ ಚಾಂಚಲ್ಯವು ತೋರುತ್ತಿತ್ತು. ಅವರ ಕುಟುಂಬವಾದ ಪಾರ್ವತೀಬಾಯಿ, ವಿಶ್ವಾಸರಾಯರ ಕುಟುಂಬವಾದ ಲಕ್ಷ್ಮಿ ಬಾಯಿ, ಬೇರೆ ಎಷ್ಟೋ ಸ್ತ್ರೀಯರು ಮೈ ತೊಳೆದು ಮಡಿಬಟ್ಟೆಗಳನ್ನು ಟ್ಟುಕೊಂ ಡು ಸವಾ೯ಲಿ೦ಕಾರವಿಭೂಷಿತೆಯರಾಗಿ ರೇಶಿಮೆಯ ಪರದೆಯ ಹಿಂದೆ. ರುಕ್ಕಿಣಿ ಸ್ವಯಂವರ, ಶಿವಲೀಲಾಮೃತ, ರಾಮ ವಿಜಯ, ಹರಿವಿಜಯ, ಪಾಂಡವ ಪ್ರ ಶಾಪ,ಗುರುಚರಿತ್ರ,ಮಂಗಲಮೂರ್ತಿ ಮೊರಯಾನ ಸೂತ್ರಗಳು ಮೊದಲಾದ ಪುಸ್ತಕಗಳನ್ನು ಓದುತ್ತ ಕುಳಿತಿದ್ದರು. ಅವರ ಸುತ್ತಲು ಹುಡುಗರೂ, ಸೇವ ಕರೂ, ದಾಸ-ದಾಸಿಯರೂ ಗಾಬರಿಯಾದವರಂತ ತಿರುಗಾಡುತ್ತಿದ್ದರು. ಭಾವು ಸಾಹೇಬನು ಚಿ೦ಾಗ್ರಸ್ತನಾದದ್ದರಿಂದ, ಎಲ್ಲರ ಮೊರೆಗಳು ಅವು ಹೀರಿದ್ದವು, ಇದೆಲ್ಲ ಕಣ್ಣಿಗೆ ಬೀಳುತ್ತಿರುವಾಗ, ಮಹದಾಸಿ೦ದೆಯು ಬಾವುಸಾಹೇಬನಿಗೆ ಬಹು ವಿನಯದಿಂದ ಮುಜುರೆಮಾಚಿ, ದೂರ ಕುಳಿತುಕೊಳ್ಳುತ್ತಿದ್ದರು. ಅಷ್ಟ ರಲ್ಲಿ ಭಾವುವು ಗೊಗ್ಗರ ದನಿಯಿ೦ದ.....“ಮಹದಾಜಿ, ಹೀಗೆ ಹತ್ತರ ಬರಿ, ದ ರ್ಬಾರದ ಮಾನ ಮರ್ಯಾದೆಗಳು ಈಗ ನನಗೆ ಬೇಕಾಗಿಲ್ಲ. ದರ್ಬಾರದ ಸಂಬಂ ಧವನ್ನೆ ಣಿಸದೆ ಮನೆಯವರೆಂದು ತಿಳಿದು ನಾನು ನಿಮ್ಮನ್ನು ಕರೆಸಿರುವೆನು. ಮಿ ತ್ರತ್ವದ ಸಂಬಂಧದಿಂದ ನಿಮ್ಮ ಆಲೋಚನೆಯು ನನಗೆ ಬೇಕಾಗಿದೆ, ಆದ್ದರಿಂದ