೯೪ ಕೊಹಿನುರು ವುಳ್ಳ ರಾಣಿಯೊಂದು ನಿರ್ದೆಶಿಸಿರುವುದು ಪಾಠಕರ ನೆನಪಿನಲ್ಲಿರಬಹುದು. ಕಮಲಾದೇವಿಯು ಕೇಶವಿನ್ಯಾಸ ಮಾಡಿಕೊಂಡು ತಾಂಬೂಲರಾಗದಿಂದ ರಂಜಿತವಾದ ಅಧರದ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡಿಕೊಂಡು, ಕರ್ಣಾ ವತಿಯನ್ನು ಕುರಿತು, ೧೯ ಅಕ್ಕ ! ನೀವಾದರೋ, ಯಾರ ಮಾತನ್ನೂ ಕೇಳುವವ ರಲ್ಲವಷ್ಟೆ, ನಿಮಗೆ ತೋಚಿದ್ದು ದು ಮಾಡತಕ್ಕವರು--ನನ್ನ ಮಾತನ್ನು ಕೇಳಿ ದ್ದರೆ ಇಷ್ಟು ದಿನಕ್ಕೆ ಎಲ್ಲಾ ಸರಿಹೋಗುತ್ತಿದ್ದಿತು ೨” ಎಂದು ಹೇಳಿದಳು. ೧೯ ತಂಗಿ ! ಯಾವಮಾತು ? 99 “ ನನ್ನ ಮಾತನ್ನು ಕೇಳುವುದಾದರೆ ಹೇಳುತ್ತೇನೆ, ಬೇಡದವರಿಗೆ ಹೇಳಿ ಅರಣ್ಯ ರೋದನ ಮಾಡಲೇಕೆ ? 99
- ತಂಗಿ ! ಕೇಳದೆ ಉಂಟೆ ? ಅವರನು ನನಗೆ ಹೇಗೋ ನಿನಗೂ ಹಾಗೇ ನಗು-ಅವನು ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಾತ್ರಕ್ಕೆ ನಿನಗೇನೂ ಆಗಬೇಡವೆ ? 99
(* ನಾನೇನೋ ಹಾಗೇ ತಿಳಿದುಕೊಂಡಿದ್ದೇನೆ, ಆದರೆ ಜನರು ಹಾಗೆ ಹೇಳುವರೋ ? ಅವರು ಹಾಗೆ ತಿಳಿದಿಲ್ಲ. ಅದು ಹೇಗಾದರೂ ಹೋಗಲಿ... ನಾನು ಹೇಳುವುದು ಇಷ್ಟು :-ಇನ್ನು ಕಾಲಹರಣ ಮಾಡದೆ ಹುಡುಗನಿಗೆ ಜಾಗ್ರತೆಯಾಗಿ ಮದುವೆ ಮಾಡಿಬಿಡಬೇಕು, ಆ ದಿನ ನಾನು ಅವನನ್ನು ಬಹಳ ವಾಗಿ ಕೇಳಿದುದರಮೇಲೆ, ಅವನು ಒಂದು ದಿನ ರಾಜಸಮುದ್ರ ಕೆರೆಯ ಕಟ್ಟೆಯ ಮೇಲೆ ಒಬ್ಬ ಸಂದರಿಯಾದ ಹುಡುಗಿಯನ್ನು ಕಂಡು ಪುನಃ ಕಾಣದೆ ಮನಸ್ಸು ಹೀಗಾಗಿದೆಯೆಂದು ಹೇಳಿದನು. ಆದುದರಿಂದ ಬೇಗನೇ ಒಬ್ಬ ಸುಂದರಿಯಾದ ಹುಡುಗಿಯನ್ನು ಹುಡುಕಿ ಮದುವೆಮಾಡಿಬಿಟ್ಟರೆ ಅವನ ಮನವು ಸರಿಯಾಗಿ ಯೋಚನೆಗೆ ಕಾರಣವಿರುವುದಿಲ್ಲ ೪೨ ಎಂದು ಹೇಳಿದಳು. ಕರ್ಣಾವತಿ- (ಆಶ್ಚರ್ಯದಿಂದ)-ಮದುವೆ ಮಾಡಿದರೆ ಆರೋಗ್ಯವಾ ಗುವುದಾದರೆ ಯೋಚನೆಯೇನು ? ಕಮಲಾದೇವಿ- (ಅಭಿಮಾನದಿಂದೆದ್ದು ನಿಂತು)-ನಾನು ಹೇಳುವುದು ನಿಮ್ಮ ಮನಸ್ಸಿಗೆ ಸರಿಹೋಗುವುದಿಲ್ಲ. ಅದನ್ನು ನಾನು ಚೆನ್ನಾಗಿ ಬಲ್ಲೆ ! ನಿಮಗೆ ಹೇಳುವುದೆಲ್ಲಾ ಕಾಡಿನಲ್ಲಿ ಅತ್ತ ಹಾಗೆಂದು ನಾನು ಮೊದಲೇ ಹೇಳಲಿಲ್ಲವೆ ?