ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೊದಲನೆಯ ಪರಿಚ್ಛೇದ ೯೫ ಕರ್ಣಾವತಿ-ಕೋಪಮಾಡಬೇಡವೆ ! ತಂಗಿ ! ನೀನು ಹೇಳುವುದನ್ನೆ ನಾನೂ ಹೇಳುತ್ತೇನೆ, ವಿವಾಹವಾದರೆ ಆರೋಗ್ಯವಾಗುವುದು. ಆದರೆ ಅವನು ರಾಜಸಮುದ್ರದ ಕೆರೆಯ ಕಟ್ಟೆಯಮೇಲೆ ನೋಡಿದ್ದ ಹುಡುಗಿಯನ್ನು ಎಲ್ಲಿಂದ ತರಬೇಕು ? ಅವಳಾರೋ ? ಅದನ್ನು ತಿಳಿಯುವ ಬಗೆ ಹೇಗೆ ?

  • ಅಕ್ಕ ! ನೀವು ಆಕಾಶದಿಂದಿಳಿದು ಬಂದವರಾಗಿದ್ದೀರಿ-ಆ ಹುಡುಗಿ ಬಿ.ಲ್ಲದಿದ್ದರೆ ಬೇರೆ ಸುಂದರಿಯಾದವಳು ಸೃಷ್ಟಿಯಲ್ಲೇ ಇಲ್ಲವೆ ? ಉದಯಪುರದ ವ.ಹಾರಾಣನ ಮಗನಿಗೆ ಕುಂದಿಲ್ಲದ ಚಂದವುಳ್ಳ ಚಲುವೆಯೋ ಇಲ್ಲವೆ? ಹೇಳಿ, ನೋಡೋಣ-ಸೇನಾಪತಿ ವಿಕ್ರಮಸಿಂಹನ ಮಗಳು ವಿಲಾಸಕುಮ ರಿಯಹಾಗೆ ಕುಂದಿಲ್ಲದ ಚಲುವೆಯನ್ನು ಇದುವರೆವಿಗೂ ನಾನಿಲ್ಲಿ ಯೂ ನೋಡಿಲ್ಲ ; ನನ್ನಾಣೆ ! ನನ್ನ ಕೆಟ್ಟ ಮೋರೆಯನ್ನು ನೋಡಿ ವಿಕ್ರಮಸಿಂಹನ ಮಗಳನ್ನು ತೆಗೆದುಕೊಂಡು ಮದುವೆಯು ಆಗಿಹೋಗಲಿ ! ನೀವೂ ಅವಳನ್ನು ನೋಡಿ ದೀರಷ್ಟೆ ? ೨೨

“ ಇಲ್ಲ-ನಾನಾವಾಗಲೂ ನೋಡಿಲ್ಲ...!!

  • ಆಹಾ ! ಅವಳು ಹುಡುಗಿಯೆ ? ಸಾಕ್ಷಾತ ವೀಣಾಪಾಣಿಸರಸ್ವತಿ ! ನಾನು ತೌರುಮನೆಗೆ ಹೋಗುವಾಗ ವಿಕ್ರಮಸಿಂಹನು ನನ್ನ ಸಂಗಡ ಬಂದಿ ದ್ದನು. ವ ಗಳನ್ನೂ ಕರೆತಂದಿದ್ದು, ಇನ್ನು ಹೇಳಿ ಪ್ರಯೋಜನವಿಲ್ಲ, ಅಕ್ಕ ! ಈ ನನ್ನ ಆಶೆಯನ್ನು ಪೂರ್ತಿಮಾಡಿ, ವಿಲಾಸಕುಮಾರಿಯನ್ನು ತೆಗೆದುಕೊಂಡು ಮದುವೆಯಾಗಲಿ ! ಬಳಿಕ ಯಾವಾಗಲೂ ಈ ಪ್ರಾಣವಿರುವವರೆವಿಗೂ ನಿಮ್ಮ ಸಂಗಡ ಕಾದಾಡುವದಿಲ್ಲ ! ಯಾವಾಗಲೂ ನಿಮ್ಮ ಮಾತನ್ನು ಮೀರಿ ನಡೆಯ ಲಾರೆನು ! 99
    • ನಾವೇನೋ ವಿಕ್ರಮಸಿಂಹನ ಮಗಳನ್ನು ತೆಗೆದುಕೊಳ್ಳುವದಕ್ಕೊ ಪ್ಪಿದಹಾಗಾಯಿತು, ಆದರೆ ರಾಣಾಯವರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಗ ನಿಗೆ ಮದುವೆಮಾಡಿ ಪ್ರುವರೆ ? ?9

- ( ಆ ಭಾರವು ನನ್ನ ಮೇಲೆ ಇರಲಿ ! ರಾಣಾಯವರು ಕುರುಡಾಗಿ ಹೋಗಿ ದ್ದಾರೆಯೇ ? ನಮ್ಮ ಭಂಗಾರದಂತಹ ಕಂದನ ಮೈಯೆಲ್ಲಾ ದಿನೇ ದಿನೇ ಬಾಡಿ ಕಂದಿಹೋಗುತ್ತಿರುವುದನ್ನು ಕಾಣದೆ ! ಅವರಾಘಟದಲ್ಲಿ (ದೇಹದಲ್ಲಿ) ಅಷ್ಟು ಬುದ್ಧಿಯಿಲ್ಲವೆ ? ಮದುವೆಯಾಗಿಬಿಟ್ಟರೆ ಆರೋಗ್ಯ ವಾಗುವುದೆಂದು ತಿಳಿದುಕೊಳ್ಳ ಲಾರರೆ ? ೨೨