ಎರಡನೆಯ ಪರಿಚ್ಛೇದ ೯೬ ಮಗಳನ್ನು ಎಡಬಿಡದೆ ಮಮತೆಯಿಂದಲೂ ಅತ್ಯಂತಾದರದಿಂದಲೂ ಸಾಕು ತಿದ್ದನು, ಅವಳು ತನ್ನ ಹೆಸರು ಎಲಾಸಕುಮಾರಿಯೆಂದು ಪಾಶಕರಿಗೆ ಹೇಳಿ ದ್ದಾಳೆ, ರಾಜಪೂತವೀರರು ಗಂಡುಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ಪ್ರಕಾರ ವಿಕ್ರಮಸಿಂಹನು ವಿಲಾಸಕುಮಾರಿಗೆ ವಿದ್ಯಾ ಬುದ್ಧಿಗಳನ್ನು ಕಲಿಸಿದನು ತಾನೇ ಸ್ವಂತವಾಗಿ ಸಂಸ್ಕೃತವನ್ನು ಹೇಳಿಕೊಡುವನು. ಸ್ವಂತವಾಗಿಯೇ ಶಸ್ತ್ರವಿದ್ಯೆ ಯನ್ನು ಕಲಿಸುತಿದ್ದನಲ್ಲದೆ ಸಮಯವೊದಗಿದಾಗಲೆಲ್ಲಾ ಅವಳನ್ನೂ ಯುದ್ಧ ರಂಗಕ್ಕೆ ಸಂಗಡ ಕರೆದುಕೊಂಡು ಹೋಗುವನು. ಸಾಯಂಕಾಲದಲ್ಲಿ ಸೇನಾಪತಿಯು ಮನೆಯ ಮಹಡಿಯಮೇಲೆ ಕುಳಿ ತಿದ್ದನು. ವಿಲಾಸಕುಮಾರಿಯು ತಂದೆಯ ಬೆನ್ನಿ ನಮೇಲೆ ಭಾರವನ್ನು ಬಿಟ್ಟು ನಿಂತುಕೊಂಡು ತಲೆಗೆ ಸುವಾಸನೆ ತೈಲವನ್ನು ಹಚ್ಚಿ ಕೈಯಲ್ಲಿ ಬಾಚಣಿಗೆಯನ್ನು ಹಿಡಿದು ಅವನ ಏಳೀ ಕೂದಲನ್ನು ಬಾಚುತಿದ್ದಳು. ವಿಲಾಸಕುಮಾರಿಯು, (ಹನ್ನೆರಡು ವರ್ಷದ ಹುಡುಗನಿಗೆ ಎಷ್ಟು ಸಾಹಸ ! ದೊಡ್ಡವನಾದರೆ ಎಂತಹ ವೀರನಾಗುವನೋ, ಹೇಳುವುದಕ್ಕಾಗುವುದಿಲ್ಲ ” ಎಂದಳು. - ವಿಕ್ರಮಸಿಂಹ-(ನಕ್ಕು)- ಮಗು ! ನಿನ್ನ ಬಾಯಿಯಿಂದಾ ಮಾತನ್ನು ಎಷ್ಟು ತಡವೆ ಕೇಳಿದ್ದೇನೆಯೇ !! ವಿಲಾಸಕುಮಾರಿ- ಅಪ್ಪಾ ! ನನಗೆ ಪದೇ ಪದೇ ಆ ಹುಡುಗನ ನೆನವು ಬರುತ್ತದೆ ! ಅಹೇರಿಯಾ ಉತ್ಸವದದಿನ ಅವನು ನಿನ್ನ ಪ್ರಾಣವನ್ನು ಕಾಪಾಡಿ ದನು, ಅದುಕಾರಣ ನನಗೆ ಅವನಮೇಲೆ ಅಷ್ಟು ಪ್ರೀತಿ-ಕಾಡುಹಂದಿಯ ಸಂಗಡ ನೀನು ಯುದ್ದ ಮಾಡುತಿದ್ದಾಗ ನಿನ್ನ ಕೈಯಿಂದ ಕತ್ತಿಯು ಕೆಳಗೆ ಬಿದ್ದು ಹೋಯಿತು, ಆಗಾ ಹುಡುಗನು ಕತ್ತಿಯನ್ನು ಹಿಡಿದು ನಿನ್ನೆದುರಿಗೆ ಬಂದು ನಿಲ್ಲದಿದ್ದರೆ ಹಂದಿಯು ಕೋರೆಹಲ್ಲುಗಳಿಂದ ನಿನ್ನೆದೆಯನ್ನು ಸೀಳಿಬಿಡುತಿದ್ದಿ ತಲ್ಲಾ ! ಅಪ್ಪಾ ! ಅವನನ್ನು ಒಂದುತಡವೆ ನೋಡಬೇಕೆಂದು ನನಗೆ ಬಹಳ ಆಶೆಯಿದೆ. “ ಅದಕ್ಕೇನು ಯೋಚನೆ ? ಮಗು ! ಈತಡವೆ ರಾಣಾನನ್ನು ನೋಡು ವುದಕ್ಕೆ ಹೋಗುವಾಗ ನಿನ್ನ ನ್ಯೂ ಸಂಗಡ ಕರೆದುಕೊಂಡು ಹೋಗಿ ಕುಮಾರ ಅಮರಸಿಂಹನನ್ನು ನಿನಗೆ ತೋರಿಸುವೆನು. ಇದೇನೆ, ತಾಯಿ ! ಮುಖಕ್ಕೆಲ್ಲಾ ಎಣ್ಣೆ ಹರಿದು ಬಂದಿತಲ್ಲೆ ! ೨೨
ಪುಟ:ಕೋಹಿನೂರು.djvu/೧೦೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.