೯೬ ಕೋಹಿನುರು ಕರ್ಣಾವತಿಯು ಮನಸ್ಸಿನಲ್ಲಿ, ಅವಾ “ ಘಟದಲ್ಲಿ : ಬುದ್ದಿಯನ್ನು ತುಂಬುವುದಕ್ಕೆ ನೀನೇ ತಕ್ಕವಳು ಎಂದಂದುಕೊಂಡು, ಪ್ರಕಾಶ್ಯವಾಗಿ, “ ಅದೂ ಆಯಿತು-ಆದರೆ ಅವರನು ಒಪ್ಪದಿದ್ದರೆ ? 9೨ ಎಂದು ಹೇಳಿದಳು,
- ಇಲ್ಲಾ, ಅಕ್ಕ ! ನಿಮ್ಮ ಕಾಲಿಗೆ ಅಡ್ಡಬೀಳುತ್ತೇನೆ-ಈ ಶುಭಕಾ ರ್ಯಕ್ಕೆ ಅಡ್ಡ ಹಾಕಬೇಡಿ, ನಾನೀಗಲೇ ಹೋಗಿ ರಾಣಾಯವರು ಸಮ್ಮ ತರಾ ಗುವಹಾಗೆ ಮಾಡಿಕೊಂಡು ಬರುತ್ತೇನೆ, ೨
- ಚಂಚಲಬುದ್ಧಿಯುಳ್ಳವವಳಾಗಿಯ, ಸರಳಹೃದಯೆಯಾಗಿಯೂ ಗರ್ವ ವುಳ್ಳವವಳಾಗಿಯೂ ಇದ್ದ ರಾಜ್ಯು, ನಾನು ಹೇಳುವುದಕ್ಕೆಲ್ಲಾ ರಾಣಾ ಜಯಸಿಂಹನನ್ನೊ ಪ್ಪಿಸಿ ಕೂಡಲೇ ಪ್ರಸ್ತದ ಕೆಲಸಕ್ಕೆ ಪ್ರಾರಂಭಿಸಬೇಕೆಂದು ಯೋಚಿಸಿಕೊಂಡು ಚಂಚಲಗರಣಗಳಿಂದ ಒಯಸಿಂಹನ ಶಯನಗೃಹಕ್ಕೆ ಹೋಗಿ ಚಿನ್ನದ ಮಂಚದ ಮೇಲೆ ಮಲಗಿದ್ದ ಪತಿಯನ್ನು ಆದರದಿಂದ ಕಟ್ಟಿ ಕೊಂಡು ಅವನ ನಿದ್ರಾಭಂಗ ಮಾಡಿದಳು. ಖ ಎ ರ ಡ ನೆ ಯ ಸ ರಿ ಚೇ ದ . ಅಜಮಾರಿಗೆ ಸ್ವಲ್ಪ ದೂರದಲ್ಲಿರುವ ಬೆಟ್ಟದ ಮೇಲೊಂದು ಪುರಾತನ ದುರ್ಗವಿದ್ದಿತು. ಈಗಲೂ ಆ ದುರ್ಗಕ್ಕೆ ಅಚಲಗಡವೆಂದು ಹೆಸರು, ಹದಿನಾ ರಾಣೆ ರಾಜಪೂತನಾದ ಸೇನಾಪತಿ ವಿಕ್ರಮಸಿಂಹನು ಕೆಲವು ಸೈನ್ಯವನ್ನಿಟ್ಟು ಕೊಂಡು ಆ ದುರ್ಗದಲ್ಲಿ ವಾಸಮಾಡುತ್ತಿದ್ದನು. ವಿಕ್ರಮಸಿಂಹನಿಗೆ ಹನ್ನೊಂದು ವರ್ಷದ ದೇವಯಾನೆ ಎಂಬ ಹೆಸರಿನ ಮಗಳೊಬ್ಬಳು ಹೊರತು ಮತ್ತಾರೂ ಸಂತಾನವಿಲ್ಲ. ದೇವಯಾನೆಯು ಉಡಿಗೆ ತೊಡಿಗೆಗಳಲ್ಲಿ ಯೂ ಅಲಂಕರಿಸಿಕೊ ಇುವುದರಲ್ಲಿ ಯೂ ಒಹಳ ಆಶೆಯುಳ್ಳವಳಾಗಿದ್ದುದರಿಂದ ಇವಳ ತಂದೆಯು ಅವ ಳನ್ನು ವಿಲಾಸಕುಮಾರಿಯೆಂದು ಕರೆಯುತಿದ್ದನು. ವಿಕ್ರಮಸಿಂಹನ ಹೆಂಡತಿಯು ಒಂದು ವರ್ಷದ ಮಗುವನ್ನು ಬಿಟ್ಟು ದೈವಾಧೀನವಾದಳು. ಹೆಂಡತಿ ಲೋಕಾಂತರ ಪ್ರಾಪ್ತಿಯಾದ ಬಳಿಕ ವಿಕ್ರಮಸಿಂಹನು ಪುನಃ ಮದುವೆ ಮಾಡಿಕೊಳ್ಳಲಿಲ್ಲ, ಅದು ಮೊದಲ್ಗೊಂಡು ಹತ್ತು ವರ್ಷಕಾಲ ವಿಕ್ರಮಸಿಂಹನು