ಮೂರನೆಯ ಪರಿಚ್ಛೇದ “ ನಾನು ನಿನ್ನನ್ನು ರಾಣಿಯಾಗಿ ಮಾಡುವೆನು. ಅದು ನಿನಗೆ ಗೊತ್ತಿಲ್ಲ ವೇನೋ ? ಬರೇ ರಾಣಿಯಲ್ಲ. ರಾಣಿಯ ಮೇಲಣ ರಾಣಿ, ಮಹಾರಾಣಿ ! ಆ ಸಿಂಹದ್ವಾರದಕಡೆ ತಿರುಗಿನೋಡು, ಅಲ್ಲಿ ಹೋಗುವವರಾರು ? ಅವನನ್ನು ಯಾವಾಗಲಾದರೂ ನೋಡಿದ್ದೀಯಾ ? ಬೇಗ ಹೇಳು, 99 ( ಅವನು ಕುಮಾರ ಅಮರಸಿಂಹ ೨೨ - “ ನೀನು ಹೇಗೆ ಬಟ್ಟೆ ? ೨೨ << ನಮ್ಮ ತಂದೆಯ ಬಾಯಿಯಲ್ಲಿ ಅವನ ವಿಚಾರವನ್ನು ಅನೇಕ ತಡವೆ ಕೇಳಿದ್ದೇನೆ, ಆಹೇರಿಯಾ ಉತ್ಸವದ ದಿನ ಅವನು ನನ್ನ ತಂದೆಯ ಪ್ರಾಣವನ್ನು ಕಾಪಾಡಿದನ: ೨೨ ನಿನ್ನನ್ನು ಅವನಿಗೆ ಕೊಟ್ಟು ಮದುವೆಯಾದರೆ ನೀನೇನಾಗುವೆ. ಬಲ್ಲೆಯಾ ? ೨೨ ಕಮಲಾದೇವಿಯು ಈ ಸಂಬಂಧವನ್ನು ಬೆಳೆಸಬೇಕೆಂದು ನಿರ್ಧರಮಾಡಿ ಕೊಂಡಿದ್ದುದು ಹುಡುಗಿಗೆ ತಿಳಿಯದೆ, ರಾಜ್ಞೆಯು ವ್ಯಂಗ್ಯ ಮಾಡುತ್ತಾಳೆಂದು ತಿಳಿದು ಅವಳ ಕಣ್ಣಿನಿಂದ ಒಂದು ಬಟ್ಟು ಕಣ್ಣೀರು ಬಿದ್ದಿತು. ಕಮಲಾ ದೇವಿಯು ಹೇಳತೊಡಗಿದಳು :-* ಅದೇಕೆ ? ನಿನ್ನ ಕಣ್ಣಿನಲ್ಲಿ ನೀರು ಬಂದಿತು ? ರಾಣಿಯಾಗುತ್ತಿ-ಅಂತಹ ಚಂದ್ರನ ಹಾಗಿರುವ ಗಂಡ ಬರುತ್ತಾನೆ, ಇನ್ನಳುವು ದುಂಟೆ ? ಏಳೇಳುಜನ್ಮ ತಪಸ್ಸು ಮಾಡಿದರೂ ಅಂತಹ ಗಂಡ ಸಿಕ್ಕುವನೆ ? ಅಮರನು ನಿನ್ನ ಕಡೆ ತಿರುಗಿ ನೋಡಲಿಲ್ಲ ಆದುದರಿಂದ ನಿನಗೆ ಕಣ್ಣೀರು ಬಂದಿತಲ್ಲವೆ ? ಅದಕ್ಕಳುವುದೆ ? ಮದುವೆಯಾಗುವದಿನ ಶುಭದೃಷ್ಟಿಯ ಸಮಯ ದಲ್ಲಿ ಅವನು ನಿನ್ನನ್ನು ನೋಡಿದ ಬಳಿಕ ಎಷ್ಟು ಪ್ರೀತಿಯಿಂದ ಕಾಣುವನೋ ಅದನ್ನು ನೀನೇ ತಿಳಿಯುವೆ ೨೨
- ಶುಭದೃಷ್ಟಿಯೆಂದರೇನು ? ರಾಣಿ ೨೨
“ ಪುನಃ ನನ್ನನ್ನು ರಾಣಿಯೆಂದು ಹೇಳುತ್ತೀಯಾ ? ಇಂದಿನಿಂದ ನನ್ನನ್ನು * ಅಮ್ಮಾ ! " ಎಂದು ಕರೆಯಬೇಕು. ಇನ್ನು ಎಂಟು ದಿವಸದ ಬಳಿಕ ಪೂರ್ಣಿಮಾ ರಾತ್ರಿ ಶುಭದೃಷ್ಟಿಯೆಂಬುದನ್ನು ತಿಳಿದುಕೊಳ್ಳಲಾಸೆ. ನಾನು ಬಹಳ ಪ್ರಯತ್ನ ಪಟ್ಟು ರಾಣಾಯವರ ಅನುಮತಿಯನ್ನು ಪಡೆದು ನಿನ್ನನ್ನು ಕರೆ ಯಿಸಿದನು. ಈಗ ಬಾ, ನಿನ್ನನ್ನು ನಮ್ಮ ಅಕ್ಕನವರ ಬಳಿಗೆ ಕರೆದುಕೊಂಡು