ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧d ಕೋಹಿಸುಕು ಹೋಗುತ್ತೇನೆ. ನಿನ್ನ ಚಂದವುಳ್ಳ ಮುಖವನ್ನೂ ಚುಕ್ಕಾಣಿ ಹಲ್ಲನ್ನೂ ಕಣ್ಣಿಂದ ನೋಡದಿದ್ದರೆ ಅವರಿಗೆ ನಂಬಿಕೆ ಹುಟ್ಟಲಾರದು ; ಅಕ್ಕನವರ ಬಳಿಗೆ ಹೋಗು ಇಲೇ ಅವರಿಗೆ ನಮಸ್ಕಾರ ಮಾಡು-ಮರೆಯಬೇಡ. ಮರೆತರೆ ಅವರು ಕೋ ಪಿಸಿ ಕೊಳುವರು, ಅಕ್ಕನವರನ್ನು “ ದೊಡ್ಡ ಮ್ಯಾ ' ! ಎಂದು ಕರೆಯಬೇಕು, ಅದು ನೆನಪಿರಲಿ, ನನ್ನನ್ನು ಅಮ್ಮಾ ! ೨ ಎಂದು ಕರೆಯಬೇಕು, 99 ಕಮಲಾದೇವಿಯು ವಿಲಾಸಕುಮಾರಿಯ ಕೈ ಹಿಡಿದುಕೊಂಡು ಹಿರಿಯ ಮಹಿಷಿಯ ಮಹಲಿಗೆ ಕರೆದುಕೊಂಡು ಹೋದಳು. ನಾಲ್ಕನೆಯ ಪರಿಚ್ಛೇದ ಪೂರ್ಣಿಮಾ ರಾತ್ರಿ-ಅಚಲಗಡದ ನಾಲ್ಕು ಪಾರ್ಶ್ವಗಳಲ್ಲಿಯೂ ಜನರ ಗುಂಪು, ಬಂದು ಹೋಗುವವರು ಬಹಳಮಂದಿ, ಆ ರಾತ್ರಿ ಸೇನಾಪತಿ ವಿಕ್ರಮಸಿಂಹನ ಮಗಳು ದೇವಯಾನೆಯನ್ನು ಮಹಾರಾಣಾ ಬಯಸಿಂಹನ ಮಗ ಅಮರಸಿಂಹನಿಗೆ ಕೊಟ್ಟು ಮದುವೆಯಾಗುವುದು, ಸಾಯಂಕಾಲದಲ್ಲೇ ಗಗನಭೇದಿಯಾದ ವಾದ್ಯಗಳ ಶಬ್ದವೆದ್ದಿತು. ಬಹು ಸಮಾರಂಭದೊಡನೆ ವರನ ಕಡೆಯವರು ವಿವಾಹದ ಮಂಟಪಕ್ಕೆ ಬಂದು ಸೇರಿದರು. ರಾತ್ರಿ ಎರಡು ಜಾವ ದಲ್ಲಿ ವಿವಾಹದ ಲಗ್ನ ಸಮಯವೊದಹಿತು. ಹದಿನಾರಾಣೆ ರಾಜಪೂತ ಸೇನಾ ಪತಿ ವಿಕ್ರಮಸಿಂಹನು ರಾಜಾಧಿರಾಜನ ಮಗನಿಗೆ ಕನ್ಯಾ ಸಂಪ್ರದಾನ ಮಾಡು ವುದಕ್ಕೆ ಅತುಳಾನಂದದಿಂದ ಮಗಳನ್ನು ತೊಡೆಯಮೇಲೆತ್ತಿಕೊಂಡು ಕುಳಿತು ಕೊಂಡನು, ರಾಣಾ ಜಯಸಿಂಹನು ಮಗನನ್ನು ಮುಂದೆ ಕುಳ್ಳಿರಿಸಿಕೊಂಡು ಕುಳಿತನು. ನಾರಾಯಣಮೂರ್ತಿ ಸಾಲಿಗ್ರಾಮವನ್ನು ಮಧ್ಯೆ ಇಟ್ಟು ಕೊಂಡು ಪುರೋಹಿತನು ಪವಿತ್ರ ಮಂತ್ರಗಳನ್ನು ಹೇಳಲಾರಂಭಿಸಿದನು. ಹುಡುಗಿಯು ಮುಖದ ಪರದೆಯೊಳಗಿನಿಂದ ತನ್ನ ಭವಿಷ್ಯ ಜೀವನದ ಅಧೀಶ್ವರ ಅಮರನ ಕುಂದಿ ಇದ ಮುಖದ ಕಾಂತಿಯನ್ನು ಪ್ರೀತಿಯಿಂದರಳಿದ ಕಣ್ಣುಗಳಿಂದ ನೋಡಿದಳು. ಹುಡುಗ ಅಮರಸಿಂಹನು ತನ್ನ ಭವಿಷ್ಯ ಜೀವನದ ಸಹಚರಿಯಕಡೆ ನೋಡಲಾ ರಂಭಿಸಿದನು. ಅವನ ಮುಖಮಂಡಲದಲ್ಲಿ ಸ್ಫೂರ್ತಿಯ ಚಿಹ್ನೆಗಳು ಪ್ರಕಟಿತ