ಆರನೆಯ ಪರಿಚ್ಛೇದ ೧೩.೫ ದೇವರೆ ! ಕಡೆಗಾಲಕ್ಕೆ ನನಗೆ ಈ ದೆಶೆ ಬಂದಿತು ! ನಾನು ನನ್ನ ಕೈಯಿಂದಲೇ ಸಸಗೆ ಮಗಳಿಗೆ ಸಮನಾದ ಹುಡುಗಿಯ ಮುಂದಿನ ಸುಖವನ್ನು ತಪ್ಪಿಸಿದ ಹಾಗಾಯಿತು ! ೨೨ ಫಕೀರನು ಹೀಗೆ ವ್ಯಸನಪಟ್ಟು ಕಾತರೋಕ್ತಿಗಳನ್ನು ನುಡಿದುದನ್ನು ವಿಲಾಸಕುಮಾರಿಯು ಯಾವಾಗಲೂ ನೋಡಿರಲಿಲ್ಲ. ಸ್ವರ್ಗಿಯ ಆನಂದ ವಯವಾದಾ ಮುಖಮಂಡಲದಲ್ಲಿ ಯಾವಾಗಲೂ ವಿಷಾದದ ರೇಖೆಯು ಕಂಡಿರ ಲಿಲ್ಲ. ನಿವಾಸಕುಮಾರಿಯು ಸಾಷ್ಟಾಂಗವಾಡಿ ಕೈಮುಗಿದುಕೊಂಡು ಕರುಣ ಸ್ವರದಿಂದ 14 ಗುರುದೇವ ! ತಾವೇನೋ ಅಂತರ್ಯಾಮಿಗಳು, ನಾರಿಯ ಹೃದಯವು ತಮಗೆ ಗೋಚರವಿಲ್ಲದೆ ಇಲ್ಲ. ಕುಮಾರ ಅಮರಸಿಂಹನು ನನಗೆ ಸ್ವಾಮಿಯೇ ಅಹುದು, ನನ್ನ ಇಹಜೀವನದ ಇಷ್ಟ ದೇವತೆ ! ನನ್ನ ಪರಲೋ ಕದ ಸಾಧನೆಗೂ ಅವನೇ ಅಧೀಶ್ವರ ! ನನ್ನ ಈ ಅಲ್ಪ ವಾದ ಪ್ರಾಣವು ಅವಸ ಪ್ರಾಣಕ್ಕಿಂತ ಪ್ರಿಯತವಾದುದೆ ? ಗುರುದೇವ ! ತಾವು ತಿಳಿಯಲಾರಿರಿ-ಅವನ ಕಾಲಿಗೆ ಒಂದು ಸಣ್ಣ ಮುಳ್ಳು ತಾಕಿದರೆ ನನ್ನ ದೇಹದ ರಕ್ತವನ್ನು ಚೆಲ್ಲಿ ಅದನ್ನು ತೆಗೆಯುವೆನು. ನನಗೆ ಅದಕ್ಕಿಂತ ಹೆಚ್ಚು ಸುಖವಿರದು, ಆಶೀರ್ವಾದ ಮಾಡೋಣಾಗಲಿ-ನನ್ನ ಹೃದಯೇಶ್ವರನು, ಅವನು ಬಯಸುವ ಅಂಬಾಲಿಕೆ ಯನ್ನು ಮದುವೆ ಮಾಡಿಕೊಂಡುದುದನ್ನು ನೋಡಿ ಈ ನಾರಿಯ ಸುಖದ ಸರಾ ಕಾಷ್ಠ ವನ್ನು ಹೊಂದುವೆನು ೨” ಎಂದು ಹೇಳಿದಳು. ಆ ರ ನ ಯ ಪ ರಿ ಜಿ. ನದಿಯ ತೀರದಲ್ಲಿದ್ದ ಚಿಕ್ಕ ಉಪವನವು ಪ್ರಾತಃಸೂರ್ಯನ ಕಿರಣದ ಸ್ಪರ್ತದಿಂದ ನಗುತಿದ್ದಿತು, ಹರಿಯುತಿದ್ದ ನದಿಯ ಕಲಕಲ ಶಬ್ದದೊಂದಿಗೆ ಪಕ್ಷಿ ಕುಲದ ಮನೋಹರವಾದ ಮೃದುವಾದ ಕಾಕಲಿ ಶಬ್ದವು ಸೇರಿ, ಸುಧಾಮಯ ವಾದೊಂದು ತಾನವಾಗಿ ಎದ್ದು ಬೂನಾ ನದಿಯ ಮರಳು ಶೆಲೆಗೊಳ್ಳುತ್ತಿದ್ದಿತು. ನಿದಾಘ ಪ್ರಭಾತದಲ್ಲಿ ಮೆಲ್ಲಮೆಲ್ಲನೆ ಬೀಸುತಿದ್ದ ಪೂಗಾಳಿಯು ಮೆಲ್ಲಮೆಲ್ಲನೆ ಹೋಗಿ ಶೀತಲವಾದ ಜಲದಲ್ಲಿ ಈಜು ಬಿದ್ದು ಮೆಲ್ಲಮೆಲ್ಲನೆ ಹೋಗಿ ಕುಸುಮ. ಕುಳದ ಅಲಿಂಗನದಿಂದ ತನ್ನ ಮೃದುದೇಹವನ್ನು ಪರಿಮಳದಿಂದ ತುಂಬಿಕೊಂಡು
ಪುಟ:ಕೋಹಿನೂರು.djvu/೧೩೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.