೧೨೬ ಕೋಹಿಮರು , ಮೆಲ್ಲಮೆಲ್ಲನೆ ಕೂಗಿ ಪಕ್ಷಿಗಳ-ಮನೋಹರವಾದ ಕಾಕಲಿ ಕೂಗಿನಲ್ಲಿ ಅಮೃತ ವನ್ನು ತಳೆದು ಇಲ್ಲಮೆಲ್ಲನೆ ಬಂದು ಮಲಗಿದ್ದ ರಾಜಕುಮಾರಿ ಅ೦ಬಾಲಿಕೆಯ ಅಲಕದಾಮದೊಂದಿಗೆ ಆಡುತಿದ್ದಿ ತು, ಅಂಬಾಲಿಕೆಯು ಆಗಲೂ ನಿರ್ಜನವಾ ಇದ್ದ ಉಪವನದಲ್ಲಿ ನೆಲದಮೇಲೆ ಮಲಗಿದ್ದಳು ಮಲಗಿದ್ದವಳು ಸ್ವಷ್ಟವನ್ನು ಕಂಡಳು.. ಸ್ವಪ್ನದಲ್ಲಿ ತಾನು ಈ ಶೋಕತಾಸಮಯವಾದ ಮರ್ತ್ಯಲೋಕ ವನ್ನು ಬಿಟ್ಟು ಸುರಲೋಕಕ್ಕೆ ಹೋಗಿದ್ದ ಹಾಗೂ ಪಕ್ಷಿ ಕುಲದ ಇಂಪಾದ ಕೂಗಿ ನಿಂದಲೂ ಅಚ್ಚರಿಯರ ಕಂಠದ ಇನಿದಾದ ಸಂಗೀತದಿಂದಲೂ ವಜ್ರಗಳ ಹೂವು ಗಳನ್ನು ಹೊತ್ತಿದ್ದ ಮುತ್ತಿನ ಲತೆಗಳಿಂದಲೂ ಶೋಭಿತವಾಗಿದ್ದಾ' ಸುರಲೋಕ ಇಲ್ಲಿ ಕುಂದಿಲ್ಲದ ಕಾಂತಿಯುಳ್ಳ ಅಮರರ ಮಧ್ಯದಲ್ಲಿ ಫಕೀರನು ಸ್ವರ್ಗದ ರೂಪ ವನ್ನು ತಾಳಿ ದೇವಸಭೆಯನ್ನಲಂಕರಿಸಿದ್ದ ಹಾಗೂ ಫಕೀರನು ತನ್ನ ನ್ನು ನೋಡಿ, * ವತ್ಸೆ ! ಇಲ್ಲಿ ವ್ಯಸನವಿಲ್ಲ ವೈಷಮ್ಯವಿಲ್ಲ, ವರ್ಣಭೇದವಿಲ್ಲ. ದೊಡ್ಡದೆಂದಾ ಗಲೀ ಚಿಕ್ಕ ದೆಂದಾಗಲೀ ಧನಿಯೆಂದಾಗಲೀ ದರಿದ್ರನೆಂದಾಗಲೀ ರಾಜನೆಂದಾ ಗಲೀ ರೈತನೆಂದಾಗಲೀ ಭೇದವಿಲ್ಲ. ಎಲ್ಲರೂ ಸಮಾನರು ! " ಎಂದು ಹೇಳಿದೆ ಹಾಗೂ ಅದಕ್ಕೆ ನಾನು ನಿಟ್ಟುಸಿರನ್ನು ಬಿಟ್ಟು, ಹಾಗಾದರೆ, ಪಾಷಮಯವಾದಾ ಸೃಷ್ಟಿಯನ್ನು ಬಿಟ್ಟು ಕೃಷಿಕನು ಈ ಶಾಂತಿ ನಿಕೇತನಕ್ಕೆ ಬರಕೂಡದೇಕೆಂದು ಯೋಚಿಸಿಕೊಂಡಹಾಗೂ ತನ್ನ ಮನೋಭಾವವನ್ನು ಫಕೀರನು ತಿಳಿದುಕೊಂಡು ಮುಗುಳುನಗೆ ಮೊಗನಾಗಿ, “ ನೋಡು'ವ ! ಪಾಸಮಯವಾದ ನವಲೋಕ ವನ್ನು ಬಿಟ್ಟು ಕೃಷಿಕನು ಈ ಆನಂದಧಾಮಕ್ಕೆ ಬಂದಿದ್ದಾನೆಂದು ಹೇಳಿದಹಾಗೂ ಕೃಷಿಕನಾಗಲೇ ಅಮರರ ವೇಷವನ್ನು ತಾಳಿ ತನ್ನ ಬಳಿ ಬಂದು ನಿಂತಿದ್ದ ಹಾಗೂ ತಾನು ಆಶ್ಚರ್ಯದಿಂದJವ್ಯಸನದಿಂದಲೂ ಅಭಿಮಾನದಿಂದಲೂ ಕೃಷಿಕನನ್ನು ತಿರಸ್ಕಾರ ಮಾಡಿ ಇದುವರೆಗೂ ತನ್ನನ್ನು ಈ ಆನಂದಧಾಮಕ್ಕೆ ಕರೆತರಲಿಲ್ಲ ನೇಕೆಂದು ಕೇಳಿದಹಾಗೂ, ಅದಕ್ಕವನು “ ಕ್ಷಮಿಸು. ರಾಜಕುಮಾರಿ ! ಇನ್ನು ಪ್ರಾಣವಿರುವವರೆಗೂ ನಿನ್ನನ್ನು ಅಗಲಿರುವುದಿಲ್ಲ ಎಂದು ಹೇಳಿದಹಾಗೂ ಕನಸುಬಿದ್ದಿತು. - ಅಷ್ಟರೊಳಗೆ ಅಂಬಾಲಿಕೆಗೆ ಎಚ್ಚರವಾಯಿತು, ಮೂರ್ಛಯಿಂದ ಎಚ್ಚತ್ತುಕೊಂಡವಳಾಗಿ ಕಣ್ಣು ಬಿಟ್ಟು ನೋಡಿದಳು.: ನಿಜವಾಗಿಯೂ ಕೃಷಿಕನು ರಾಜಾಧಿರಾಜನ - ವೇಷದಲ್ಲಿ ಆಪಳ :ಕಾಲಕೆಳಗೆ, ಕುಳಿತಿದ್ದನು , ಅವನು
ಪುಟ:ಕೋಹಿನೂರು.djvu/೧೩೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.