ಆರನೆಯ ಪರಿಚ್ಛೇದ ೧೨! « ಕ್ಷಮಿಸು, ' ಕಾಜನಂದಿನಿ ! ಪುನಃ - ನಿನ್ನನ್ನು ಬಿಟ್ಟು ಅಗಲಿರಿಸೆಂದು ಹೇಳಿದನು. ಅಂಬಾಲಿಕೆಯು ಒಂದು ತಡವೆ ಕಣ್ಣು ಮುಚ್ಚಿ ಪುನಃ ಕಣ್ಣೆರೆದು ಜ್ಞಾಸ ಶೂನ್ಯಯಾದವಳ ಹಾಗೆ ಪ್ರೇಮಮಯವಾಗಿಯ ಅಮೃತಮಯವಾಗಿಯೂ ಇದ್ದಾ ಮುಖವನ್ನು ದೃಷ್ಟಿಸಿ ನೋಡುತಿದ್ದಳು, ಕೃಷಿಕನು ರಾಜಕುಮಾರಿಯೆ ಚರಣವನ್ನು ಮುಟ್ಟಿ, ಕ್ಷಮಿಸು, ರಾಜಕುಮಾರಿ! ಎಂದನು. ರಾಜಕುಮಾರಿ-(ಮೆಲ್ಲಮೆಲ್ಲನೆ ಕ್ಷೀಣಸ್ವರದಿಂದ)- ಇಲ್ಲಿಗೆ ಸೀಸೆಲ್ಲಿಂದ ಬಂದೆ ? ನಿನಗೆ ಈ ರಾಜವೇಷವೇಕೆ ? ಯಾರ ಕ್ಷಮೆಯನ್ನು ಬೇಡುಗೆ ? ನೀನು ನನ್ನಲ್ಲೇನು ಅಪರಾಧವನ್ನು ಮಾಡಿದೆ ?- ನಿನ್ನ ಮಾತು ನನಗಾವುಡ# ಗೊತ್ತಾ ಗುವದಿಲ್ಲ. - ಕೃಷಿಕ-ಅಂಬಾಲಿಕೆ ! ನಿನಗೆ ಇಷ್ಟು ದಿನವೂ ಹೇಳಿರಲಿಲ್ಲ. ನಾನು ಮಿವಾರದ ರಾಜನ ಮಗ ಅಮರಸಿಂಹನು ! ರಾಜಕುಮಾರಿಯು ಸ್ವಲ್ಪ ಹೊತ್ತು ಮೌನವಾಗಿ ಬಿರುಗಣ್ಣ ಬಿಟ್ಟು ಮರಸಿಂಹನನ್ನು ನೋಡಿ ಬಳಿಕ, ೧೯ ಹಾಗಾದರೆ ನೀನು ಇದುವರೆಗ» ಮುಂದೆ ಮಾತು ಸಾಗಲಿಲ್ಲ. ಕಂಠವು ರುದ್ಧ ವ್ಯಾರ್ಕಿನ ಕಣ್ಣುಗಳಲ್ಲಿ ನೀರು ಧಾರೆಯು ಸುರಿಯಿತು.' ಅಮರಸಿಂಹನು' ಅನಿಲನು ಒಂದು ಕೈಯಿಂದ ಹಿಡಿದು ಮತ್ತೊಂದು ಕೈಯಿಂದ ಅವಳ ಕುತ್ತಿಗೆಯನ್ನು ಮುಟ್ಟಿ ಅವಳಾಕಂಬನಿಯು ತುಂಬಿದ್ದ ಕಣ್ಣುಗಳನ್ನು ಮುದ್ದಿಟ್ಟುಕೊಂಡನು. ಇದ್ದಕ್ಕಿದ್ದಹಾಗೆ ಅವಳ ದೇಹದಲ್ಲಿ ಬಲವು ಒಂದಹಾಗಾಗಿ ಅಮೆರಸಿಂಹಸ ಬಾಹುಗಳಿಂದ ಕುತ್ತಿಗೆಯನ್ನು ಬಿಡಿಸಿಕೊಂಡು ಎದ್ದು ನಿಂತುಕೊಂಡಳು. ಅವಳಾ ಬಿಳಿದಾಗಿದ್ದ ಮುಖಮಂಡಲವು ಆರಕ್ತಿಮವಾಯಿತು, ಕಣ್ಣುಗಳಲ್ಲಿ ಕಂಬನಿಯ ತಂಬಿತು. ತುಟಿಯು ಅದರಿತು, ಅವಳು ಅಭಿಮಾನದಿಂದಲೂ ರೋಷದಿಂದಲೂ ಅಶ್ರು ನಯನೆಯಾಗಿ, “ ಇಷ್ಟು ದಿನವು ನನಗೆ ಇಷ್ಟು ವೇದನೆ ಯನ್ನು ಕೊಟ್ಟೆ ಏಕೆ ? ಎಂದಳು. ಅಮರಸಿಂಹ-ರಾಜನಂದಿನಿ ! ನೀನು ನನ್ನ ಹಿಂದಿನ ಕಥೆಯನ್ನಲ್ಲಾ ಕೇಳಿದರೆ ನನ್ನ ನ್ನು ಕ್ಷಮಿಸುವ ತಾಯಿಯ ಅಪ್ಪಣೆಯಮೇರೆಗೆ ಇದುವರೆಗೂ ಗಿರಿದುರ್ಗದಲ್ಲಿ ಅಜ್ಞಾತವಾಸದಲ್ಲಿ ಕೃಷಿಕನ ವೇಷದಲ್ಲಿರುತ್ತಿದ್ದೆನು.
ಪುಟ:ಕೋಹಿನೂರು.djvu/೧೩೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.