ಎರಡನೆಯ ಪರಿಚ್ಛೇದ ೧೭ ಈ ಮಾತನ್ನು ಕೇಳಿದಕೂಡಲೇ ಸೈನಿಕರು ಈಟಿ ಭರ್ಜಿ ಕತ್ತಿಗಳನ್ನು ಹಿಡಿದು ಬೇನುಹುಳಗಳಹಾಗೆ ಆಗಂತುಕರಿಬ್ಬರಮೇಲೆ ಬೀಳಲಾರಂಭಿಸಿದರು. ವೀರರಿಬ್ಬರೂ ಸ್ವಲ್ಪವೂ ವಿಚಲಿತರಾಗಿರಲಿಲ್ಲ. ಒಂದು ಹೆಜ್ಜೆಯೂ ಹಿಮ್ಮೆಟ್ಟ ಲಿಲ್ಲ. ನಿರ್ಭಿಕ ಹೃದಯವುಳ್ಳವರಾಗಿ ಅಮಾನುಷ ಸಹಾಯದಿಂದ ಆ ಅಸ್ತ್ರ ವೃಷ್ಟಿಯಮೇಲೆ ಸಿಡಿಲುಬಿದ್ದ ಹಾಗೆ ಶಾಖಾಪ್ರಹಾರ ಮಾಡುತ ಬಾಯಿಯಲ್ಲಿ ಛಂ, ಭು, ಶಂಭೋ ! ರುದ್ರ ಶಂಕರ ! ಎಂದು ಹೇಳುತ ಶತ್ರುಗಳನ್ನು ನಿಪಾತ ಮಾಡುತಿದ್ದರು. ಬಂದಿಯಾಗಿ ಬಿಡುಗಡೆಯಾಗಿದ್ದವರೂ ಆ ರುದ್ರಮಂತ್ರ ದಿಂದ ಇದ್ದ ಹಾಗೆ ಅಪರಿಮಿತ ಪರಾಕ್ರಮವನ್ನು ತಾಳಿದವರಹಾಗಾಗಿ ಮರದ ಕೊಂಬೆಗಳನ್ನು ಮುರಿದುಕೊಂಡು ಒಂದು ಉನ್ನತ ರಹಾಗೆ ಸಾಹಸಗೊಂಡು, ಯವನ ಸೇನೆಯನ್ನು ಮಥನ ಮಾಡುತ ಬಾಯಿಯಲ್ಲಿ ಭಂ, ಭಂ, ಶಂಭೋ ! ರುದ್ರ ಶಂಕರ ! ಎಂಬ ಬಲದಾಯಕವಾದ ರುದ್ರನಾಮಗಳನ್ನು ಹೇಳುತಿದ್ದರು. ಬಂದಿಯಾಗಿದ್ದ ರಮಣಿಯರು ಆ ಮಂತ್ರದಿಂದ ಮುಗ್ಗರಾಗಿ ಹಿಂದೆ ನಿಂತು ಕೈಯಿಂದ ಚಪ್ಪಳಿಯನ್ನು ಹೊಡಿಯುತ, ಭಂ, ಭಂ, ಶಂಭೋ ! ರುದ್ರಶಂಕರ ! ದೇವಿಪುರಾರಿ! ಎಂದು ಒತ್ತು ಹಾಡಿದರು. ಆದರೆ ಕತ್ತಿಗಳೆದುರಿಗೆ ಮರದ ಕೊಂಬೆಗಳು ಎಷ್ಟು ಹೊತ್ತು ತಡದು ಬಂದಾವು ? ಸಶಸ್ತ್ರರಾಗಿರುವ ಯೋದ್ದರ ಸಂಗಡ ನಿರಸ್ತ್ರರಾದ ವೀರರು ಎಷ್ಟು ಹೊತ್ತು ಹೋರಾಡಬಲ್ಲರು ? ದಾನವರ ದಳವನ್ನು ವಿದಳನ ಮಾಡುವ ರದ್ರ ನಾಮದಲ್ಲಿ ವ್ಯತಸಂಜೀವಿನಿಯ ಅಮೃತಧಾರೆಯು ಹರಿಯುತ್ತದೆಂದು ತೋರು ತದೆ ! ರಣ ಕೋಲಾಹಲವನ್ನು ಅತಿಕ್ರಮಿಸಿಕೊಂಡು ಕತ್ತಿಗಳ ಝಂಝನಾ ಶಬ್ಬವನ್ನೂ ಆಹತರಾದ ಯೋದರ ಆರ್ತನಾದವನ್ನೂ ಉಭಯಪಕ್ಷದಲ್ಲಿ ಯೂ ವೀರರ ಹುಂ ತಾರಶಬ್ದ ವನ್ನೂ ಅಣಗಿಸಿ ಏಕಮಾತ್ರ * ಹರ, ಹರ, ಭಂ, ಶುಭೋ ! ೨೨ ಎಂಬ ಶಬ್ದವು ಮೇಲಕ್ಕೆದ್ದಿತು. ಆ ವಿಚಿತ್ರ ರಂಗಭೂಮಿಯಲ್ಲಿ ಭಂ, ಭಂ, ಹರಶಂಕರ ! ರುದ್ರದೇವ ತ್ರಿಪುರಾರಿ ! ಎಂಬ ಮಧುರಧ್ವನಿ ಯೊಂದು ಮಾತ್ರ ನೂರಾರು ಕಂಠಗಳಿಂದೆದ್ದು ಸಪ್ತ ಮತಾನದಲ್ಲಿ ಸೇರಿ ಕೇಳಿಸುತಿತ್ತು, ರಣಪ್ರಾಂಗಣದೊಂದು ಪಾರ್ಶ್ವದಲ್ಲಿ ಮತ್ತೊಬ್ಬನ ಕಂಠಸ್ವರವು ಕೇಳಿ ಸಿತು. ರಂಗಭೂಮಿಗೆ ಸ್ವಲ್ಪ ದೂರದಲ್ಲಿ, ಭಂ, ಭಂ, ಹರಶಂಭೋ ! ಎಂಬ
ಪುಟ:ಕೋಹಿನೂರು.djvu/೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.