೧೬ ಕೊಹಿನುರು - “ ಎಲೆ, ಕಾಫರ ! ಕಂಬಖೆ ! (ಬೈಗಳು) ಗೊತ್ತಿಲ್ಲವೆ ! ಈ ದನಗಳ ನ್ನೆಲ್ಲಾ ಕೊಟ್ಟು ಕಬಾಬು (ಸುಟ್ಟ ಮಾಂಸ) ಮಾಡುವೆವು, ಮತ್ತು ಆ ರಕ್ತ ದಲ್ಲಿ ಈ ಹಿಂದೂಗಳನ್ನು ಸ್ನಾನ ಮಾಡಿಸುವೆವು. ೨ - ಇದನ್ನು ಕೇಳುತ್ತಲೇ ಅವರಿಬ್ಬರ ಕಣ್ಣುಗಳಲ್ಲಿ ರಕ್ತ ಬಣ್ಣವೇರಿತು. ಕತ್ಯ ಲಾಗಿದ್ದುದರಿಂದ ಮುಸಲರು ಅದನ್ನು ಕಾಣಲಿಲ್ಲವಾಗಿ ಅವರು ಮುಂದೆ ಹೇಳ ತೊಡಗಿದರು. * ಬಳಿಕ ಇವರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಶೂಲಕ್ಕೇರಿಸಿ, ಈ ಮುಖ ಮುಚ್ಚಿಕೊಂಡಿರುವ ಬೀ ಏಯನ್ನು ಸ್ವಂತವಾಗಿ ಕೂಡಿಕೆ_೨೨ ಪೀರಬಕ್ಷನ ಮಾತು ಪೂರೈಸುವುದರೊಳಗೆ ಕೇಳುತ್ತ ನಿಂತಿದ್ದವನು ಅವ ನೆದೆಗೆ ಬಲವಾಗಿ ಒಂದೊದೆಯನ್ನು ಕೊಟ್ಟನು. ಪೀರಕ್ಷನು ದೂರ ಹೋಗಿ. ಜ್ಞಾನತಪ್ಪಿ ಬಿದ್ದನು. ಅಷ್ಟರಲ್ಲಿ ಮತ್ತೊಬ್ಬ ಬಂದಿದ್ದ ವನು ಬೇಗನೆ ಹೋಗಿ ಬಂದಿಗಳಾಗಿದ್ದವರ ಕೈ ಕಾಲುಗಳ ಕಟ್ಟನ್ನು ಬಿಚ್ಚಿಬಿಟ್ಟನು. ಪೀರಬಕ್ರನು ನೆಲಕ್ಕೆ ಅಪ್ಪಳಿಸಿಕೊಂಡು ಬಿದ್ದ ಶಬ್ದವನ್ನು ಕೇಳಿ ಅಲ್ಲಿದ್ದವರೆಲ್ಲರೂ ಬಂದು ಆಗಂತುಕರಿಬ್ಬರನ್ನೂ ಆಕ್ರಮಣ ಮಾಡಿದರು. ದೂರದಿಂದ ಅಫಜುಲನು ೧° ಅವರಿಬ್ಬರನ್ನೂ ಹಿಂಗಟ್ಟು ಮುರಿ ಕಟ್ಟಿ ಕೊಂಡೊಯ್ದಿರೆಂದು ೨೨ ಅಪ್ಪಣೆ ಮಾಡಿದನು, ಆದರೆ ಯಾರನ್ನು ಯಾರು ಕಟ್ಟುವವರು ? ಆಗಂತುಕರಿಬ್ಬರೂ ಎದುರಿಗಿದ್ದ ಮಾವಿನಮರದ ಕೊಂಬೆಗಳನ್ನು ಮುರಿದು ಹಿಡಿದುಕೊಂಡು ರುದ್ರ ಮೂರ್ತಿಯನ್ನು ತಾಳಿ, ಭಂ, ಭಂ, ಶಂಭೋ ! ದೇವ ತ್ರಿಪುರಾರಿ! ಜಯಜಯ ದೈತ್ಯ ಸಂಹಾರಿ ! ಉರಗಹಾರಿ ! ತ್ರಿಶೂಲಧಾರಿ ! ಭವಭಯಹಾರಿ ! ಮೃತ್ಯುಂ ಜಯ ! ಭಂ, ಭಂ, ಶಂಭೋ ! ಎಂದು ರುದ್ರನಾಮಗಳನ್ನು ಹೇಳುತ ರುದ್ರಬಲ ದಿಂದ ಶಾಖಾಪ್ರಹಾರ ಮಾಡಿ ಯವನ ಸೇನೆಯನ್ನು ಹೊಡೆದು ನೆಲಕ್ಕೆ ಕೆಡುಹು ಲಾರಂಭಿಸಿದರು. ಬಿಡುಗಡೆಯಾಗಿದ್ದ ಬಂದಿ ಜನರು ಕೋಲಾಹಲ ಮಾಡುತ ರುದ್ರನಾಮಗಳನ್ನು ಹೇಳುತ ಶತ್ರಗಳನ್ನು ಎಡೆಬಿಡದೆ ನೆಲಕ್ಕಪ್ಪಳಿಸಿರೆಂದು ಕೂಗುತ ದೊಂಬಿ ಹಚ್ಚಿದರು. ಅಫಜುಲನು, ದೂರ ನಿಂತು ಬೆಬ್ಬಳುಗೊಂಡು ಬ್ಲೊರಬಿದ್ದಿದ್ದ ಸೈನಿಕರನ್ನು ಸಂಬೋಧಿಸಿ, “ ಬೆಇಮಾನ್ ! ಸಂಗಡ ಆಯುಧ ಗಳನ್ನಿಟ್ಟುಕೊಂಡು ಹೇಡಿಗಳಹಾಗೆ ನಿಂತು ಪೆಟ್ಟು ತಿನ್ನು ವಿರಾ ? ನೀವು ಕೈಮಾಡಿ ದ್ದರೆ ಕಾಫರರೆಲ್ಲರೂ ಕೂಡಲೇ ಯಮಾಲಯವನ್ನು ಸೇರುತಿದ್ದರು ೨೨ ಎಂದು ಕೂಗಿ ಬೈದು ಹೇಳಿದನು.
ಪುಟ:ಕೋಹಿನೂರು.djvu/೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.