೨೪ ಕೊಹಿನುರು | PA ಯನ್ನು ತೋರಿಸಿ ಹುಚ್ಚನನ್ನಾಗಿ ಮಾಡಬೇಕೆ ? ರಣಸಮುದ್ರವೇ ? ಈ ಮೇಚ್ಚಪೀಡಿತವಾದ ಆರ್ಯಾವರ್ತದಲ್ಲಿ ಆ ರಣಸಮುದ್ರವೆಲ್ಲುಂಟು ?
- ಈ ದಿನ ಯುದ್ಧರಂಗಕ್ಕೆ ನೀನೆಲ್ಲಿಂದ ಬಂದೆ ? 99
- ನನ್ನ ಪೂರ್ವ ವೃತ್ತಾಂತವನ್ನೆಲ್ಲಾ ವಿವರಿಸಿ ಹೇಳಬೇಕಾದರೆ ಬಹಳ ಹೆತ್ತ ಹಿಡಿಯ ವುದು, ತಮಗೆ ಪ್ರಕೃತ ಇಷ್ಟರಮಟ್ಟಿಗೆ ತಿಳಿಯಹೇಳಬ ಲೈ ನು :-“ ನಾನು ಮಾವಾರದೇಶದಲ್ಲೊಬ್ಬ ದರಿದ್ರ ಕೃಷಿಕನು ಅನೇಕ ದಿನಗಳಿಂದ ರಣಸಮುದ್ರವನ್ನು ಹುಡುಕುತಿದ್ದೇನೆ. ಬಾಲ್ಯದಲ್ಲಿ ನಾನೊಂದು ಅಮೂಲ್ಯವಾದ ರತ್ನ ವನ್ನು ಕಳೆದ ಕೊಂಡು ಅನೇಕ ಸ್ಥಳಗಳಲ್ಲಿ ಅದನ್ನು ಹುಡು ಕುತಲಿದ್ದೇನೆ. ಆ ರತ್ನ ವು ರಣಸಮುದ್ರದ ತಳದಲ್ಲಿರುತ್ತದೆಂದು ಕೇಳುತ್ತೇನೆ. ರಾಠೋರ ಸೇನಾಪತಿಯಾದ ದುರ್ಗಾ ದಾಸನು ಅರಾವಳಿ ಬೆಟ್ಟದ ಉಪತ್ಯಕೆ ಯಲ್ಲಿ ರಣವೇಷದಿಂದ ಸಜ್ಜಿತನಾಗಿ ಅಮೃತಮಯವಾದ ರಣಛೇರಿಯ ಧ್ವನಿ ಯಿಂದ ಆರ್ಯಾವರ್ತದಲ್ಲಿ ರುದ ವೀರರೆಲ್ಲರನ್ನೂ ಪ್ಲೇಚ್ಛಯುದ್ಧಕ್ಕೆ ಕರೆಯುತಿ ದ್ವಾನೆಂದು ಕೇಳಿದೆನು, ಮಿವಾರದಲ್ಲಿ ಜತೆಗಾರರಾರೂ ಸಿಕ್ಕಲಿಲ್ಲವಾಗಿ ನಾನೊಬ್ಬನೇ ಆ ಸ್ಥಳಕ್ಕೆ ಹೋಗಲು ಹೊರಟಿದ್ದೇನೆ.೨೨
ಒಂದೂವೀರನು ಸಾನಂದದಿಂದೆದ್ದು ನಿಂತು ಕೃಷಿಬಾಲಕನನ್ನು ಆಲಿಂಗಿನ ಮಾಡಿಕೊಂಡು, 56 ಕೃಷಿಕಯುವಕ ! ನೀನು ಯಾರನ್ನು ಹುಡುಕಿಕೊಂಡು ಹೋಗುತಿದ್ದೆಯೋ, ಇದೋ, ನೋಡು, ಆ ದುರ್ಗಾದಾಸನ ಹೃದಯವು ನಿನ್ನ ಹೃದಯದೊಂದಿಗೆ ಸೇರಿದೆ ! ಹೊರಡು, ತಮ್ಮ ! ಅರಾವಳಿಬೆಟ್ಟದ ಉನ್ನತ ಶೃಂಗದಿಂದ ಹೀಗೆಯೇ ಹೃದಯದೊಂದಿಗೆ ಹೃದಯವನ್ನು ಸೇರಿಸಿಕೊಂಡು ರಣಸಮುದ್ರಕ್ಕೆ ಹಾರಿ ಧುಮುಕೋಣ !!೨ ಎಂದು ಹೇಳಿದನು. ಕೃಷಿಕನು ಆಶ್ಚರ್ಯಪಟ್ಟು ಹಿಂದೂ ವೀರನನ್ನು ದೃಷ್ಟಿಸಿ ನೋಡಿದರು ! ಶ್ವೇತಚಂದನಶೋಭಿತವಾಗಿ ಉನ್ನತವಾದಾ ಲಲಾಟವೂ ತೇಜೋಗರ್ವಶೀಲ ವಾದುದಾಗಿಯೂ ಉಜ್ವಲವಾಗಿಯೂ ಇದ್ದ ಆ ಕಣ್ಣುಗಳೂ ಶೌರ್ಯ ಪೂರ್ಣ ವಾಗಿ ವಿಸ್ತ್ರತವಾದಾ ಎದೆಯ ಶಾಲವೃಕ್ಷದ ಶಾಖೆಯಾಗಿದ್ದಾ ದೀರ್ಘ ಬಾಹುವೂ ಕಾರುಣ್ಯಮಯವಾದಾ ಮಧುರಸ್ಕರವೂ ದುರ್ಗಾದಾಸನಿಗೆ ಹೊರತು ಮತ್ತಾಗಿರುವುವು ? ವೃಕ್ಷ ಶಾಖೆಯ ಪ್ರವಾಹದಿಂದ ಶತಾಧಿಕ ಸಶಸ್ತ್ರಯವನರನ್ನು ಯುದ್ಧದಲ್ಲಿ ಹೊಡಿಯಲು ದುರ್ಗಾದಾಸನಿಗಲ್ಲದೆ ಮತ್ತಾರ