ನಾಲ್ಕನೆಯ ಪರಿಚ್ಛೇದ ೨ ತಿ ಈ ಯುದ್ಧವು ಪೂರೈಸಿದ ಬಳಿಕ ಸ್ವಲ್ಪ ಹೊತ್ತಿನಲ್ಲಿ ದನಾಕಾಯುವ ಹುಡುಗನೂ ಫಕೀರನೂ ಹಿಂದೂ ಸೀರರಿಬ್ಬರೂ ಮಸಜೀದಿಗೆದುರಾಗಿ ಬಿಂದು ನಿಂತರು, ಫಕೀರನು ಹುಡುಗನನ್ನು ಕುರಿತು, ವತ್ಸ ! ಇದು ನಿನ್ನೆ ಮಂದಿರ ಒಳಗೆ ಹೋಗಿ ಆಯಾಸವನ್ನು ಪರಿಹರಿಸಿಕೊಳ್ಳಬಹುದು. < ಇದು ಮಂದಿರವೋ ಅಥವಾ ಮಸಜೀದೋ ? 99 - ಫಕೀರ-(ನಕ್ಕು) ಪವಿತ್ರವಾದ ಮುಸಲಮಾನರ ಧರ್ಮದಲ್ಲಿ, ಮಂ ದಿರಕ್ಕೂ ಮಸಬೇದಿಗೂ, ಹಿಂದೂಗಳಿಗೂ ಮುಸಲಮಾನರಿಗೂ, ಅಲ್ಲಾವಿಗೂ ಭಗವಂತನಿಗೂ, ಮಹಮದನಿಗೂ ಜನಾರ್ದನನಿಗೂ, ಕೊರಾನಿಗೂ ಉಪನಿಷ ದಿಗೂ ಭೇದವಿಲ್ಲ. ಸಮಾಜ ಷಹಜಹಾನನು ಸ್ವಂತವಾಗಿ ಈ ಮಂದಿರವನ್ನು ಪ್ರತಿಜ್ಞೆ ಮಾಡಿ ಅದಕ್ಕೆ ಮುಸಲಮಾನ ಮಂದಿರವೆಂದು ಹೆಸರಿಟ್ಟಿದ್ದಾನೆ. ಆದರೆ ಈ ವಿಷಯವನ್ನೆಲ್ಲಾ ವಿವರವಾಗಿ ಚರ್ಚಿಸಿ ಹೇಳುವುದಕ್ಕೆ ಈಗ ಸಮಯವಿಲ್ಲ. ಹೀಗೆಂದು ಹೇಳಿ ಫಕೀರನ್ನು ಹಿಂದೂ ವೀರರಿಬ್ಬರನ್ನೂ ನೋಡಿ, * ನೀವು ಹೆಚ್ಚು ಕಾಲ ಇಲ್ಲಿರುವುದು ಸರಿಯಲ್ಲವೆಂದು ತೋರುತ್ತದೆ. ಈ ದಿವಸ ಸಮಾರಕಾರವು ಶ್ರೀಘದಲ್ಲಿ ಯೇ ಸಾಜನಿಗೆ ಮುಟ್ಟುವುದು, ಅಫಜುಲ ಖಾನನು ಇದಕ್ಕೆ ಪ್ರತೀಕಾರ ಮಾಡಲು ಸರ್ವ ಪ್ರಯತ್ನವನ್ನೂ ಜರುಗಿಸು ವಸು, ಅದುಕಾರಣ ತಾವುಗಳು ಉದ್ದೇಶಿಸಿರುವ ಸ್ಥಳಗಳನ್ನು ಜಾಗ್ರತೆ ಯಾಗಿ ಸೇರುವುದಕ್ಕೆ ಪ್ರಯತ್ನ ಪಡಬೇಕು ' ಎಂದು ಹೇಳಿದನು. ಹಿಂದೂ ವೀರರಿಬ್ಬರಲ್ಲೊಬ್ಬನು ಫಕೀರನಿಗೆ ವಂದಿಸಿ ಮಸಜೀದಿನೊಳಗೆ ಹೋದನು. ಫಕೀರನು ಮತ್ತೊಬ್ಬ ವೀರನನ್ನು ಕುರಿತು, “ ತಾವು ಈ ಬಾಲಕನನ್ನು ತಮ್ಮ ಸಂಗಡ ಕರೆದುಕೊಂಡು ಹೋಗಬೇಕೆಂದು ನನ್ನ ಅಭಿ ಪ್ರಾಯ, ಭವಿಷ್ಯದಲ್ಲಿ ಇವನಿಂದ ಅನೇಕ ಉಪಕಾರವಾಗುವ ಸಂಭವ ವಂಟು ೨೨ ಎಂದು ಹೇಳಿದನು. ಹಿಂದೂ ವೀರನು ದನಾಕಾಯುವ ಹಡುಗನನ್ನು ಕುರಿತು, “ ವೀಕೆ ಬಾಲ! ನನ್ನ ಸಂಗಡ ಬರಲು ನಿನಗೆ ಇಷ್ಟವುಂಟೆ ? ೨ ಎಂದು ಕೇಳಿದನು. “ ಎಲ್ಲಿಗೆ ? 19 * ರಣಸಮುದ್ರಕ್ಕೆ ೨೨ ಯುವಕ-(ಹರುಷದಿಂದ ಅರಳಿದ ಕಣ್ಣುಗಳುಳ್ಳವನಾಗಿ-ವೀರವರ ! ಬಾಯಾರಿಕೆಯಿಂದ ಪೀಡಿತನಾಗಿರುವ ಹಾದಿವಾಕನಿಗೆ ಪುನಃ ಮರೀಚಿಕೆ
ಪುಟ:ಕೋಹಿನೂರು.djvu/೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.