ಆರನೆಯ ಪರಿಚ್ಛೇದ ಸ್ತೋತ್ರ ಮಾಡುತ್ತಿದ್ದನು. ಯವನ ಭಾಷೆಯಲ್ಲಲ್ಲ-ಪವಿತ್ರವಾದ ದೇವಭಾಷೆ ಯಲ್ಲಿ ದೇವಕಂಠದಿಂದ ನಿರ್ಜನವಾಗಿದ್ದಾ ಮಂದಿರವು ಸೆಲೆಕೊಡುವಹಾಗೂ ಅಮೃತಮಯವಾದ ಶಬ್ದ ಸಮೂಹಗಳ ವಿಶುದ್ದ ಉಚ್ಚಾರಣೆಯಿಂದ ಪಾರ್ಶ್ವದ ಆದ್ದ ರಮಣಿಯ ದೇಹವು ಪುಲಕಿತವಾಗುವಹಾಗೂ ಮಾಡಿ, ಮುಸಲಮಾನ ಯೋಗಿಯು ಅನಾದಿದೇವನ ಆರಾಧನೆಯನ್ನು ಮಾಡುತ್ತಿದ್ದನು. ಸ್ವಲ್ಪ ಹೊತ್ತಾದ ಬಳಿಕ ಅವನು ಕಣ್ಣು ತೆರೆದು, ನಿಂತಿದ್ದ ಹೆಂಗಸನ್ನು ನೋಡಿ, ವತ್ಸೆ ! ಈ ದಿನ ನಿನ್ನ ಮುಖಮಂಡಲವು ಮಲಿನವಾಗಿ ಕಾಣಿಸುತ್ತದೆ, ಮತ್ತೇನಾದರೂ ಅಶುಭಸಮಾಚಾರವುಂಟಿ ? ? ಎಂದು ಕೇಳಿದನು. ರಮಣಿ-(ಕೈಮುಗಿದುಕೊಂಡು)-ತನ್ನ ಅಪ್ಪಣೆಯನ್ನು ಪಡೆದು ಹೋಗಲು ಬಂದೆನು, (* ಎಲ್ಲಿಗೆ ಹೋಗಬೇಕೆಂದು ಇದ್ದಿ ? 99 “ ದೇವ ! ಅಭಾಗಿನಿಯನ್ನು ಅಕಾರಣವಾಗಿ ಹೀಗೆ ಪ್ರಶ್ನೆ ಮಾಡೋಣಾ ಗುತ್ತದೆ. ನನ್ನ ಮನೋವೃತ್ತಿಯು ಯಾವುದುತಾನೇ ತಮಗೆ ಅಗೋಚರ ? ೨ ಫಕೀರ- ( ವಿಷಣ್ಣವದನನಾಗಿ)-ಮಂದಭಾಗಿಸಿ ! ಮನಸ್ಸಿಗೆ ಗೊತ್ತಾ ಯಿತು. ನೀನು ದುರ್ಗಾದಾಸನ ಗಿರಿದುರ್ಗಕ್ಕೆ ಹೋಗಬೇಕೆಂದಿರುವಹಾಗಿದೆ. ಆದರೆ ಕೆಲವು ಸಂಗತಿಗಳನ್ನು ಕೇಳುವೆನು- ಉತ್ತರವನ್ನು ಕೊಡು. << ಅಪ್ಪಣೆಯಾಗಲಿ, 93 “ ನಿನ್ನಿನ ದಿನ ಆ ಕೃಷಿಕ ಪೀ ರಯುವಕನನ್ನು ನೋಡಿದ್ದಿಯಾ ? 99 “ ದೇವ ! ಯವನರು ಹರದೇವಪುರದ ನಿರಪರಾಧಿಗಳಾದ ನಿವಾಸಿಗಳ ಮೇಲೆ ಬಿದ್ದು ಅನೇಕ ಅತ್ಯಾಚಾರಗಳನ್ನು ನಡಿಸುತ್ತಿದ್ದುದನ್ನು ಕುರಿತು, ತಮಗೆ ಸುದ್ದಿಯನ್ನು ಕೊಡಲು ಬರುತ್ತಿದ್ದೆನಾಗಿ ಮಾರ್ಗದಲ್ಲಿ ಒಬ್ಬಂಟಿಗನಾಗಿ ಮಲ ಗಿದ್ಯಾ ಹುಡುಗನನ್ನು ಕಂಡು ಅವನನ್ನೂ ಸಂಗಡ ಕರೆತಂದು, ತಮಗೆ ವರ್ತಮಾ ನವನ್ನು ಕೊಟ್ಟೆನು. 11 ಅವನು ನಿನ್ನನ್ನು ಗುರ್ತಿಸಿದನೆ? ?9 << ಅವನು ನನ್ನ ನ್ನು ಗುರ್ತಿಸಲು ಸಂಭವ ಹೇಗೆ? 99 << ನೀನವನಾರೆಂದು ತಿಳಿದೆ ? 99 (“ ದೇವ ! ಅಪರಾಧವನ್ನು ಮನ್ನಿ ಸಬೇಕು-ತಾವ್ರ ಅಂತರ್ಯಾಮಿ ಯಾಗಿದ್ದರೂ, ನಾರಿಯ ಹೃದಯವೃತ್ತಿಯನ್ನರಿಯಲಾರಿರಿ.: 99
ಪುಟ:ಕೋಹಿನೂರು.djvu/೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.