೪೦ ಕೋಹಿಸುರು ದೀಪ್ತವಾದ ವಜ್ರದುಂಡೆಗಳಿಂದ ಹೊಳೆಯುತ್ತಿದ್ದಾ ವಿಚಿತ್ರವಾಡಾ ದರಬಾರು ಮೈ ಗುಡಿಗಟ್ಟುವ ಭಯಂಕರವಾದ ಘೋರಾಂಧಕಾರದಲ್ಲಿ ಮುಳುಗಿಹೋಗಿ ದ್ವಿತು ! ಮತ್ತು ಆ ಅಂಧಕಾರದ ಮಧ್ಯದಲ್ಲಿ ನಗ್ನ ದೇಹವುಳ್ಳವರಾಗಿಯೂ ಭಯಂಕರವಾದ ವದಸವುಳ್ಳವರಾಗಿಯ ವಿಕಟದಶನವುಳ್ಳವರಾಗಿಯೂ, ಇದ್ದಾ ದಾನನದ ಕದವರು, ಅಟ್ಟಹಾಸದಿಂದ ಕೋಲಾಹಲ ಮಾಡುತಿದ್ದರು, ಮತ್ತೆ ಇದೇನು? ಎದುರಿಗೆ ಆಕಾಶದಿಂದ ಬಿದ್ದ ಚಂದ್ರನಹಾಗೆ ಧೂಳಿಯ ಬಿದ್ದು ಉರುಡಾಡುತಿದ್ದ ದೇವಕಾಂತಿಯುಳ್ಳ ತಂದೆಯಾದ ಷಹಜಹಾನನು ಬಂಗಾರದ ಸಂಕೋಲೆಗಳಿಂದ ಬದ್ಧನಾಗಿದ್ದಾನೆ ! ಹತ್ತಿರ ದೊಡ್ಡ ಅಣ್ಣನಾದ ದಾರಾನ ವೀರಮೂರ್ತಿಯು ಶೂಲದ ಮರದಮೇಲಿಡಲ್ಪಟ್ಟಿದೆ ! ಪ್ರೇಮಾಸ್ಪದ ನಾಗಿದ್ದ ಸೂಜನ ಛಿನ್ನ ಮುಂಡವು ಶೂನ್ಯವೇಶದಲ್ಲಿ ನೇತಾಡುತ್ತಿದೆ ! ಪ್ರಿಯ ದರ್ಶನನಾಗಿದ್ದ ತಮ್ಮ ಮೊರಾದನ ರಕ್ತಮಯವಾದ ಶರೀರವು ಧರಾತಲದಲ್ಲಿ ಬಿದ್ದು ಉರುಡಾಡುತ್ತಿದೆ ! ಸಮಾಜನು ಕೂಗಿಕೊಂಡು ಕಂಪಿತಕಳೇಬರವುಳ್ಳವನಾಗಿ ಸಿ೦ಹಾಸನ ದಿಂದೆದ್ದು ನಿಂತುಕೊಂಡನು. ಉಮ್ರಾಗಳು ನೋಡಿ, ಅವನ ಹತ್ತಿರ ಓಡಿಒಂ ದರು. : ಬಾದಷಹನಿಗೆ ಆಲಸ್ಯವಾಗಿದೆ ?” ಎಂದು ಹಕೀಮರನ್ನು ಕರೆತರಲು ನಾಲ್ಕು ದಿಕ್ಕುಗಳಿಂದಲೂ ಜನರು ಓಡಿದರು, ಕೆಲವರು ಅವನ ಕೈಯನ್ನು ಹಿಡಿದು ವಿಶಾನಭವನಕ್ಕೆ ಕರೆದುಕೊಂಡು ಹೋದರು, ದರಬಾರು ಮುಗಿಯಿತು. wam ಎ೦ ಟ ನೆ ಯ ಪ ರಿ ೬ ದ. ಸಾಯಂಕಾಲವಾದ ಬಳಿಕ ಸಬನು ಏಕಾಂತ ವಿಶ್ರಾಮಭವನದಲ್ಲಿ ತಿರುಗಾಡುತ್ತಿದ್ದನು, ಹತ್ತಿರ ಅಫಜುಲಖಾನನು ಕೈಮುಗಿದುಕೊಂಡು ನಿಂತಿ ದೈನು, ಸಾಜನು ಅಫಜುಲನನ್ನು ಕುರಿತು, “ ಏನು ಸೇನಾಪತಿ ! ಶತ್ರುಗಳಿ ಬೃರಿಗೂ ದಂಡವಿಧಾನವಾಗದೆ ಹೋದುದು ನಿನ್ನ ಮನಸ್ಸಿಗೆ ವ್ಯಸನವೆಂದ್ ತೋರುತ್ತದೆಯಲ್ಲವೆ ? ” ಎಂದನು.
ಪುಟ:ಕೋಹಿನೂರು.djvu/೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.