ಎಂಟನೆಯ ಪರಿಚ್ಛೇದ ೪೧. - ಅಫಜಲ-ಅವರಮೇಲೆ ತಮ್ಮ ಕೃಪಾಕಟಾಕ್ಷವು ಬಿದ್ದ ಬಳಿಕ, ಅವರು `ಶತ್ರುಗಳಾಗುವರು ಹೇಗೆ ? ಆದರೆ ಅವರಿಬ್ಬರೂ ರಾಜ್ಯ ಶಾಸನದ ನಿಯಮಗಳಿಗೆ ವಿರುದ್ಧವಾಗಿ ಆಚರಿಸುವರು. “ ಉಮ್ರಾಗಳೂ ಉದ್ಯೋಗಸ್ಥರೂ ಹೇಳಿದ ಮಾತಿಗೆ ವಿರೋಧವಾಗಿ ಆಚರಿಸಕೂಡದೆಂದು ಭಾವಿಸಿ, ನಾನೇ ಕಾರಾಗಾರಕ್ಕೆ ಹೋಗಿ ಅವರನ್ನು ಬಿಡು ಗಡೆ ಮಾಡಿದೆನು.೨೨ ಅಫಜುಲಖಾನನು, ಈ ದಿನ ಸಮ್ರಾಜನ ಮುಖವು ಗಂಭೀರಭಾವವನ್ನು ತಾಳಿರುವುದನ್ನು ನೋಡಿ ತಿಳಿಯದೆ, ಸಿಟ್ಟುಸಿರನ್ನು ಬಿಟ್ಟು, “ ಅವರಿಬ್ಬರ ಅದೃ ಇವು ಇಷ್ಟು ಒಳ್ಳೆಯದಾಗಿದ್ದಿ ತೆಂದು ನಾನು ತಿಳಿದಿರಲಿಲ್ಲ' ಎಂದು ಹೇಳಿದನು. ೯ ಆಗಿಹೋದುದಕ್ಕೆ ವ್ಯಸನಪಟ್ಟು ಫಲವೇನು ? ಈ ದಿನ ಆ ವ್ಯಡ್ಡ ಫಕೀರನನ್ನು ನೋಡಿ ನಿನಗೇನು ಅಭಿಪ್ರಾಯವುಂಟಾಯಿತು ? ಹೇಳು. 11 ಅವನು ಹುಚ್ಚ-ಪಾಷಂಡ-ಕಾಫರ-ನರಾಧಮ.೨೨ “ ನಾವು ಈಗ ಹೊಸ ರಾಜನೀತಿಯನ್ನನುಸರಿಸಿ ರಾಜ್ಯವನಾಳುವುದಕ್ಕೆ ಪ್ರವೃತ್ತರಾಗಿರುವುದು ಅನರ್ಥಕವಾದುದೆಂದು ಫಕೀರನು ತಿಳಿದುಕೊಂಡಿದ್ದಾನ ಲ್ಲದೆ ಅಕಬರ ಬಾದಷಹನು ಏರ್ಪಡಿಸಿ ಪ್ರಚಾರಗೊಳಿಸಿದ ರಾಜನೀತಿಗಳೇ ಮೊಗಲಸಾಮ್ರಾಜ್ಯಕ್ಕೆ ಶ್ರೇಯಸ್ಕರವಾದುವೆಂದು ಹೇಳುತ್ತಾನೆ.೨೨
- ಹುಚ್ಚನು ಏನುತಾನೆ ಹೇಳಲಾರ ? ಏನುತಾನೇ ತಿಳಿದುಕೊಳ್ಳಲಾರ? ಕಾಫರನು ಯಾವಾಗತಾನೇ ಮುಸಲಮಾನರ ಪ್ರಶಂಸೆ ಮಾಡುವನು ? ಗೂಭೆಯು. ಯಾವಾಗತಾನೇ ಚಂದ್ರಕಿರಣವನ್ನು ಒಳ್ಳೆಯದೆಂದು ಹೇಳಬಲ್ಲದು ? ೨೨
೧೯ ಹಾಗಾದರೆ ಪೂರ್ವ ಪ್ರಚಾರಗೊಂಡಿದ್ದ ರಾಜನೀತಿಗಳಿಗಿಂತ ನಾವು ಏರ್ಪಡಿಸಿರುವ ರಾಜನೀತಿಗಳು ಸರ್ವಾಂಶದಲ್ಲೂ ಶ್ರೇಷ್ಠವಾದವೆಂಬುದಕ್ಕೆ ನಿನ್ನ ಮನಸ್ಸಿನಲ್ಲಿ ಸಂದೇಹವೇನೂ ಇಲ್ಲವಲ್ಲವೆ ? ೨೨ ಇಚ್ಚಕವಾಡಿ ಮುಖಸ್ತುತಿಯಿಂದ ಉಬ್ಬಿಸುವ ಸ್ವಭಾವವುಳ್ಳ ಅಫಜು ಲನು ಕೈಮುಗಿದುಕೊಂಡು ಹೇಳಿದನು :-* ಜಹಾಪನಾ ! ಆ ವಿಷಯದಲ್ಲಿ ತಾವು ಈ ಪಾದಸೇವಕನನ್ನು ಪುನಃ ಪ್ರಶ್ನೆ ಮಾಡಬೇಕೆ ? ತಮ್ಮ ಹಾಗೆ ವಿಚ ಕ್ಷಣ ರಾಜನೀತಿಜ್ಞರು ಜಗತ್ತಿನಲ್ಲಿ ಮತ್ತಾರು ಹುಟ್ಟಿರುವರು ? ಅಕ್ಷರಷಹನ ಅವ್ಯವಸ್ಥೆಯಿಂದ ಕಾಫರನಿಗೆ ಬಹಳ ಸ್ಪರ್ಧೆಹುಟ್ಟಿತ್ತು. . ಇದುವರೆಗೂ
- * # ag *ಸಿ =
» # !* - 1 # *