ಎರಡನೆಯ ಸಂಚ್ಛೇದ ೫೫ ದುರ್ಗಾದಾಸನ ಮಾತು ಪೂರೈಸುವುದಕ್ಕೆ ಮೊದಲು ನಾಲ್ಕು ಕಡೆ ಯಲ್ಲಿಯೂ ಕೋಲಾಹಲವೆದ್ದು ಕೈ ಚಪ್ಪಳಿಯ ಶಬ್ದವು ಕೇಳಿಸಿತು, ಶಿಬಿರದ ಆಚೆಯ ಪಾರ್ಶ್ವದಿಂದ ಮೀಸೆಯ ಕೂದಲು ಹುಟ್ಟಿದವನಾಗಿಯೂ ನೋಡುವು ದಕ್ಕೆ ಸುಂದರನಾಗಿಯೂ ಇದ್ದ ಹುಡುಗ ಸೈನಿಕನೊಬ್ಬನು ನಗುಮೊಗನಾಗಿ ಕುದುರೆಯನ್ನು ಓಡಿಸಿಕೊಂಡು ಬಂದು ಕುದುರೆಯ ಮೇಲಿದ್ದ ಹಾಗೆ ದುರ್ಗಾ ದಾಸನಿಗೆ ಅಭಿನಂದಿಸಿ ಬಳಿಕ ಹೋಗಿ ವಿಜಯಪಾಲನ ಪಾರ್ಶ್ವದಲ್ಲಿ ನಿಂತು ಕೊಂಡನು. ವಿಜಯಪಾಲನು ಸಹಾಸ್ಯ ಮುಖನಾಗಿ ಸೈನಿಕರನ್ನು ಆಪಾದಮಸ್ತಕ ವಾಗಿ ನೋಡಿ ಅವನ ಕುದುರೆಯನ್ನು ಬಿಡಲು ಹುಬ್ಬಿ ಸೈಗೆ ಮಾಡಿದನು. ಇಬ್ಬರ ಕುದುರೆಗಳೂ ವೇಗದಿಂದ ಹೊರಟವು, ನೆರದಿದ್ದ ನೋಟಕರು ಅಪರಿ ಚಿತ ಆಗಂತುಕನೊಂದಿಗೆ ಹೋಗಿ ವಿಜಯಪಾಲನು ಸೋತುಹೋಗುವದು ಅಸಂಭವವಲ್ಲವೆಂದು ತಿಳಿದುಕೊಂಡರು. ಏಕೆಂದರೆ, ಅವನ ಕುದುರೆಯು ವಿಜ ಯಪಾಲನ ಕುದುರೆಯನ್ನು ಮುಂದು ಬಿಡದೆ, ಸ್ವಲ್ಪವೂ ಕುತ್ತಲ ಹೋಗದೆ, ಕಡಿದು ಬೆಟ್ಟಗಳನ್ನು ಕುಣಿದಾಡುತ್ತ ಹತ್ತಿ, ಕಲ್ಲು ಬಂಡೆಗಳ ಮೇಲೆ ಹಾರಿ ಹಾರಿ, ವೇಗವಾಗಿ ಹೋಗುತಿದ್ದಿತು, ಸ್ವಲ್ಪ ಹೊತ್ತಿನಲ್ಲೇ ಇಬ್ಬರೂ ಬೆಟ್ಟ ವನ್ನು ಹತ್ತಿ ದುರ್ಗದ ಪಾರ್ಶ್ವದಲ್ಲಿದ್ದ ಪತಾಕವನ್ನು ನಿಲ್ಲಿಸಿದ್ದ ತುದಿಯ ಕೋಡುಗಲ್ಲಿನ ಬುಡದಲ್ಲಿ ಹೋಗಿ ನಿಂತರು. ಅಲ್ಲಿ ನವರೆಗೂ ಇಬ್ಬರಲ್ಲಾ ರೂ ಹಿಂದುಬೀಳಲಿಲ್ಲ. ಕೊಡುಗಲ್ಲನ್ನು ಹತ್ತುವುದಕ್ಕೆ ಅಲ್ಲಿ ಬಹಳ ಕಡಿದು. ಆಯಾಸವನ್ನು ಪರಿಹಾರಮಾಡಿಕೊಳ್ಳುವುದಕ್ಕೆ ಅಲ್ಲಿ ಇಬ್ಬರೂ ನಿಂತು, ನಿರಾಶನಯನರಾಗಿ ಗಗನತಲದಲ್ಲಿ ಹಾರುತಿದ್ದ ಧ್ವಜಪಟವನ್ನು ಹತ್ತುವುದಕ್ಕೆ ಅತಿ ಕಷ್ಟವಾದ ಎತ್ತರವಾದ ಕೋಡುಗಲ್ಲನ್ನು ನೋಡಿದರು. ಇಬ್ಬರೂ ಪರ ಸ್ಪರ ನೋಡಿ ಕುದುರೆಗಳನ್ನು ಮುಂದೆ ಬಿಟ್ಟರು. 'ಸ್ವಲ್ಪ ದೂರ ಹೋಗಿ ನೋಡಲಾಗಿ ಮೇಲೆ ಹತ್ತಿ ಹೋಗುವುದು ಒಂದು ಪ್ರಕಾರ ಅಸಂಭವವವಾಗಿ ಕಂಡಿತು, ಕುದುರೆಯು ಮುಂದೆ ಹೋದಷ್ಟು ದೂರ ಹಿಂದಕ್ಕೆ ಜಾರಿಬಂದು ಬಿಡುವುದು, ಮಾತೃಮಂದಿರದ ಮೇಲಿನ ಅಂತಸ್ತಿನಲ್ಲಿ ನಿಂತು ನೋಡುತಿದ್ದ ರಮಣಿಯರು ವೀರರಿಬ್ಬರ ದುರವಸ್ಥೆಯನ್ನು ಕಂಡು ನಗುತ್ತಿದ್ದರು. ಕೆಳಗೆ ದೂರದಲ್ಲಿ ದುರ್ಗಾದಾಸನು ಹೇಳುತಿದ್ದುದು ಅವರಿಬ್ಬರಿಗೂ ಕೇಳಿಸದು.
ಪುಟ:ಕೋಹಿನೂರು.djvu/೬೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.