೫ಳ ಕೊಹಿನುರು ವರಾಗಿದ್ದರೆ ಮುಂದರಿದು ಬರಬಹುದು, ಕುದುರೆಯಮೇಲೆ ಸವಾರರಾಗಿ ವಿಜಯಪಾಲನ ಸಂಗಡ ಹೋಗಿ ಎದುರಿಗೆ ಕಾಣುವ ಪರ್ವತ ಶೃಂಗಗಳನ್ನು ದಾಟಿ ಅಡ್ಡವಾಗಿ ಹರಿಯುವ ನದಿಯನ್ನು ಈಜಿಕೊಂಡು ಹಾಯ್ದು ಎಲ್ಲ ಕ್ಕಿಂತಲೂ ಎತ್ತರವಾಗಿರುವ ಶೈಲಶೃಂಗವನ್ನು ಹತ್ತಿ ರಕ್ತಪಾಕವನ್ನು ಹಿಡಿದು ತೋರಿಸಬೇಕು, ೪೨ - ಅತಿ ಕಷ್ಟವಾದ ಪ್ರಾಣಕ್ಕೆ ಅಪಾಯಕರವಾದಂತಹ ಶ್ರಮವನ್ನು ಸಹಿಸಿ ಕೇವಲ ವೀರತ್ವವನ್ನು ತೋರಿಸುವುದಕ್ಕೆ ಮಾತ್ರ ಮುಂದರಿದು ಬರುವವರಾರು ? ಯಾವ ಕೆಲಸಕ್ಕೂ ಹೆದರದ ಅಸಮಸಾಹಸಿಕನಾದ ವಿಜಯಪಾಲನನ್ನು ಈ ದುಸ್ಸಾಹಸಿಕ ಕಾರ್ಯದಲ್ಲಿ ಸೋಲಿಸುವುದು ಅಸಂಭವವಾದದು. ಪ್ರಯ ತವು ಸಾಗದೆ ವಿಫಲವಾದರೆ ಉಪಹಾಸಕ್ಕೆ ಕಾರಣವಾಗಿ ಹೆಂಗಸರಲ್ಲಿ ನಗು ಪಾಟಲಿಗೆ ಗುರಿಯಾಗಬೇಕಾಗುವುದು. ಆದುದರಿಂದ ರಾಜವಂಶದವರಾರೂ ಮುಂಡರಿದು ಬರಲಿಲ್ಲ. - ದುರ್ಗಾದಾಸನು, ಸೇನಾಪತಿಗಳೂ, ರಾಜಕಾರ್ಯದಲ್ಲಿದ್ದ ಉದ್ಯೋ ಗಸ್ಟರ ನಿಂತಿದ್ದ ಕಡೆಗೆ ತಿರುಗಿ ಬಹಳ ಹೊತ್ತು ನೋಡಿದನು, ಎಲ್ಲರೂ ಮೊದಲಿನಹಾಗೆ ಮೌನವಾಗಿ ನಿಶ್ವಲರಾಗಿದ್ದರು. ಆಗ ರಾಠೋರ ಸೇನಾಪತಿಯು ತಾಳ್ಮೆಯನ್ನು ತಾಳಿರಲಾರದೆ ದುಃಖದಿಂದಲೂ ಅಭಿಮಾನದಿಂದಲೂ ಗರ್ಜನೆ ಮಾಡಿ, ಕಂಪಿತ ಕಂಠದಿಂದ ಹೇಳಿದರು :-* ರಾಜಪೂತನು ವೀರತ್ವವನ್ನು ತೋರಿಸುವುದರಲ್ಲಿ ಭಯಪಡುವನೆಂದು ಮೊದಲು ನಾನು ತಿಳಿದಿರಲಿಲ್ಲ ! ಆದರೂ ನನಗಿನ್ನೂ ಆಶೆಯು ತಪ್ಪಲಿಲ್ಲ, ಕೇಳಿರಿ-ಎಲ್ಲಾ ಸೇನೆಯವರುಗಳಿರಾ ! ಸೇರಿರುವ ದರ್ಶಕರುಗಳಿರಾ ! ಮುದುಕರಾಗಲೀ, ಯುವಕರಾಗಲೀ, ಬಾಲಕರಾಗಲೀ ಉಚ್ಚವಂಶದವರಾಗಲೀ, ನೀಚವಂಶದವರಾಗಲೀ ಎಲ್ಲರೂ ಕೇಳಿರಿ ! ನಿನ್ನಲ್ಲಿ ಯಾರ ನರಗಳಲ್ಲಾದರೂ ರಾಜಪೂತನ ರಕ್ತವಿದ್ದರೆ ಮುಂದಾಗಿರಿ ! ಇಲ್ಲವಾದರೆ ಇಂದಿನ ರಾಜಪೂತ ವೀರಪ್ರದರ್ಶನಿಯು ಇಲ್ಲಿಗೆ ಕಡೆಯಾಗುವುದು, ಕೂಟ ವೀರರಿಗೆ ತಾಯಿಯಾದ ರಾಜಪುತಾನೆಯ ಪುತ್ರ ಗೌರವವು ಒಬ್ಬ ವೀರನಲ್ಲಿ ಮಾತ್ರ ಪರ್ಯವಸಿತವಾಗುವುದು, ನೋಡಿರಿ-ದೂರದಲ್ಲಿ ಮಾತೃಮಂದಿರದ ಉಚ್ಚ ಶಿಖರದ ಮೇಲುಭಾಗದಲ್ಲಿ ರಕ್ತಸತಾಕಕ್ಕೆ ಪಾರ್ಶ್ವದಲ್ಲಿ ಆರ್ಯ ರಮಣಿ ಯರು ಜಯಮಾಲೆಯನ್ನು ಕೈಯಲ್ಲಿ ಹಿಡಿದು ನಿಂತಿದ್ದಾರೆ. ೨೨
ಪುಟ:ಕೋಹಿನೂರು.djvu/೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.