ಮೂರನೆಯ ಪರಿಚ್ಛೇದ ಪುರಸ್ಕಾರವಾಗಿ ಕೊಡೆಂದು ಅಪ್ಪಣೆ ಮಾಡಿದಳು, ಕೃಷಿಕ ಯುವಕನು ರಾಜಮಹಿಷಿಗೆ ಅಭಿವಂದಿಸಿ, ನೆಲಕ್ಕೆ ಮಂಡಿಯನ್ನೂ ರಿ ಕೈಮುಗಿದುಕೊಂಡು ಭಕ್ತಿಯಿಂದ ಅಮೃತಮಯವಾದ ಕಿಶೋರಿಯ ಮೂರ್ತಿಗೆದುರಾಗಿ ದೂರ ನಿಂತು ತನ್ನ ಹೃದಯಮಂದಿರದಲ್ಲಿ ಚಿಕ್ಕಂದಿನಿಂದಲೂ ಪ್ರತಿಷ್ಠೆ ಮಾಡಿಕೊಂಡಿದ್ದಾ ದೇವಿಯ ಪ್ರತಿಮೆಯನ್ನು ಕಣ್ಣೆತ್ತಿ ನೋಡಿದನು. ಅಂಬಾಲಿಕೆಯು ಮಿಕ್ಕ ಹೆಂಗಸರಿಗಿಂತ ಸ್ವಲ್ಪ ಮುಂದಾಗಿ ನಿಂತಿದ್ದಳು. ಪುಳಕದಿಂದಲೋ ಅಥವಾ ಸಂಶಯದಿಂದಲೋ, ಆಶೆಯಿಂದಲೋ ಅಥವಾ ಲಜ್ಜೆಯಿಂದಲೋ, ಆನಂದದಿಂ ದಲೋ ಅಥವಾ ಅಭಿಮಾನದಿಂದಲೂ ಅವಳ ಶರೀರವು ರೋಮಾಂಚಿತವಾಗಿ ಹೃದಯವು ಕಂಪಿತವಾಯಿತು. ರಾಜನಹಿತಿಯು ಮಾಲೆಯನ್ನು ಹಾಕೆಂದು ಪುನಃ ಹುಬ್ಬಾಡಿಸಿದಳು, ಅಂಬಾಲಿಕೆಯು ಕೃಷಿಕನ ಹತ್ತಿರ ಹೋಗಿ ನಡುಗು ತಿದ್ದ ಕೈಗಳಿಂದ ಮಾಲೆಯನ್ನೆತ್ತಿ ಹಿಡಿದುಕೊಂಡಳು, ಆ ಸಮಯದಲ್ಲಿ ನೋಟ ಕರಲ್ಲೊಬ್ಬನು ಘಟ್ಟಿಯಾಗಿ, “ ಸ್ವಲ್ಪ, ನಿಲ್ಲು, ರಾಜಕುಮಾರಿ ! ೨೨ ಎಂದು ಈಗಿದನು. ಬಸರ ರಾಜಕುಮಾರ ಕೇಸರಿ ಸಿಂಹನು ಎಲ್ಲರಿಗೆದುರಾಗಿ ಬಂದು ನಿಂತು ಹೆಮ್ಮೆಯಿಂದ ಹೇಳಿದನು :-* ರಾಜಸ್ಥಾನದ ರಾಜವಂಶದಲ್ಲಿ ಹುಟ್ಟಿದ ವೀರರಾ ! ರಾಜವಂಶದ ರಮಣಿಯರಾ ! ನಾವು ಈ ಕಾಲದಲ್ಲಿ ರಾಜ್ಯ ವಿಪ್ಲವ ದಲ್ಲಿ, ಈ ಯವನರ ಹಾವಳಿಯಲ್ಲಿ ನಮ್ಮ ಸ್ವಾಧೀನತೆಯೊಂದಿಗೆ ನಮ್ಮ ಅಮೂ ಲ್ಯವಾದ ಧನವಾಗಿರುವ ಚಾತಿಯ ಗೌರವವನ್ನೂ ಹಾಳುಮಾಡಿಕೊಂಡಿದ್ದ ವೆಯೇ ? ಇಂದು ಕುಲಶೀಲ ಗೋತ್ರ ಗೊತ್ತಿಲ್ಲದ ನೀಚವಂಶದಲ್ಲಿ ಹುಟ್ಟಿದ ಹುಡುಗನೊಬ್ಬನ ಮೇಲೆ ರಾಜರಮಣಿಯರ ರಕ್ಷಣೆಯ ಭಾರವನ್ನೊಪ್ಪಿಸಿ ಹೋಗುವ ಗತಿಯು ನಮಗೆ ಬಂದಿತೆ ? ರಾಜಾಧಿರಾಜ ಜಯಸಿಂಹನ ಮಗಳು ಒಬ್ಬ ದರಿದ್ರ ಕೃಷಿಕ ಯುವಕನ ಕುತ್ತಿಗೆಗೆ ಹೂವುಮಾಲೆಯನ್ನು ಹಾಕುವ ಉತ್ಸವವನ್ನು ನೋಡುವುದಕ್ಕೆ ಸಲುವಾಗಿ ನಾವೆಲ್ಲರೂ ಇಲ್ಲಿ ಬಂದು ಸೇರಿ ದ್ದೇವೆಯೆ ? ೨೨ ವಿಜಯಪಾಲನೂ ಮುಂದರಿದು ಬಂದು ರಾಜಕುಮಾರಿ ಅಂಬಾಳಿಕೆಯ ಮುಖವನ್ನು ನೋಡಿ ನಗುತ್ತ ಹೇಳಿದನು {- ಜಯಪುರದ ರಾಜನಂದಿನಿಯು ಈ ತರುಣ ಹುಡುಗನಿಗೆ ಮಾಲೆಯನ್ನು ಹಾಕುವುದಕ್ಕೊಪ್ಪಿದವಳಾದರೂ,
ಪುಟ:ಕೋಹಿನೂರು.djvu/೬೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.