ನಾಲ್ಕನೆಯ ಪರಿಚ್ಛೇದ 外传 ಕಡೆಯೂ ಕಡುಹುಕಠೋರ ದೃಷ್ಟಿಯನ್ನು ಬೀರಿ, ಕೈಯಲ್ಲಿದ್ದ ಜಯಮಾಲೆ ಯನ್ನು ತುಂಡುತುಂಡಾಗಿ ಹರಿದು ದೂರೆಸೆದು ಚಂಚಲಚರಣಗಳಿಂದ ಬೇಗ ಬೇಗನೆ ದುರ್ಗದೊಳಗೆ ಹೊರಟುಹೋದಳು. ವಿಜಯಪಾಲನು ಘಟ್ಟಿಯಾಗಿ ನಕ್ಕು, ಜಸಶ್ಮೀರ ರಾಜಕುಮಾರನನ್ನು ಕುರಿತು, “ ರಾಜಕುಮಾರ ! ಈಗ ತಿಳದಹಾಗಾಯಿತೆ ? ಹೆಂಗಸರ ನಿಘಂಟ ನಲ್ಲಿ ಇದಕ್ಕೆ • ಪ್ರೇಮ ” ವೆಂದು ಅರ್ಥ ೨” ಎಂದು ಹೇಳಿದನು. ಆಟ ನಾಲ್ಕನೆಯ ಪರಿಚ್ಛೇದ. ದುರ್ಗರಕ್ಷಣೆಯ ಭಾರವು ವಿಜಯಪಾಲನಲ್ಲಿ ಡಲ್ಪಟ್ಟಿತು, ಕೃಷಿಕ ಯುವಕನೂ ಇತರ ಸೈನಿಕರಹಾಗೆ ಅವನಿಗೆ ಸಹಾಯಕನಾಗಿ ಅವನಧೀನದಲ್ಲಿ ರುವಂತೆ ನಿಯಮಿಸಲ್ಪಟ್ಟನು, ಅದಕ್ಕವನು ಅಸಮ್ಮತನಾಗಲಿಲ್ಲ. ಅವಮಾನ ವಾಯಿತೆಂದೂ ತಿಳಿದುಕೊಳ್ಳಲಿಲ್ಲ, ತಾನು ಸಾಮಾನ್ಯ ಸೈನಿಕರಾದುದರಿಂದ ತನ್ನನ್ನಾ ಗೌರವಪದವಿಯಲ್ಲಿ ಡಲಾರದೆಂದು ಮೊದಲೇ ತಿಳಿದಿದ್ದನು. ದುರುದಿನ, ರಾಜಪೂತ ರಾಜರೂ, ಸೇನಾಪತಿಗಳೂ ಸೇನೆಯವರೂ, ತಮ್ಮ ತಮ್ಮ ವೀರ ಉಡುಪುಗಳಿಂದಲೂ ವೀರ ದರ್ಪದಿಂದಲೂ ಸುಸಜ್ಜಿತರಾ ದರು, ದುರ್ಗದಿಂದ ಹೊರಡುವ ಸಮಯದಲ್ಲಿ ದುರ್ಗಾದಾಸನು ಸೇರಿದ್ದ ಯೋವೃ ಮಂಡಳಿಯನ್ನು ಸುತ್ತಿ ನೋಡಿದನು. ಜಸರ ರಾಜಕುಮಾರ ಕೇಸರಿಸಿಂಹನು ಮಾತ್ರ ಅಲ್ಲಿರಲಿಲ್ಲ ಕೇಸರಿಸಿಂಹನು ಆಗ ನಿರ್ಜನವಾಗಿದ್ದ ತನ್ನ ಕೊಠಡಿಯಲ್ಲಿ ಕುಳಿತು ಗಂಭೀರವಾದ ಚಿಂತೆಯಲ್ಲಿ ಮುಳುಗಿದ್ದನು. ದುರ್ಗಾದಾಸನು ಅವನನ್ನು ಸಂಬೋಧಿಸಿ ಘಟ್ಟಿಯಾಗಿ ಕೂಗುತಿದ್ದುದನ್ನು ಕೇಳಿ ಅವನು ಚಿಂತಿಸುವುದನ್ನು ಬಿಟ್ಟಿದ್ದು ಮಲ್ಲಮೆಲ್ಲನೆ ಅಂತಃಪುರದೊಳಗೆ ಪ್ರವೇಶಮಾಡಿ ಅಂಬಾಲಿಕೆಯ `ಶಯ ನಗೃಹದ ಬಾಗಲಲ್ಲಿ ನಿಂತು ಯೋಚಿಸುತಿದ್ದನು ಪರಿಚಾರಿಕೆಯೊಬ್ಬಳು ಅವ ಪನ್ನು ಕಂಡು ಕೊಠಡಿಯೊಳಗಿನಿಂದ ಬಂದಳು, ಅವಳನ್ನು ನೋಡಿ, “ ಅಂಬರದ ಶಾಜಕುಮಾರಿ ಎಲ್ಲಿ ?” ಎಂದು ಕೇಳಿದನು.
ಪುಟ:ಕೋಹಿನೂರು.djvu/೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.