ಏಳನೆಯ ಪರಿಚ್ಛೇದ ಅಫೀಮಿನ ಮಹಿಮೆಯಿಂದೊಂದಪೂರ್ವವಾದ ಕನಸು ಬಿದ್ದಿತು, ಕನಸಿನಲ್ಲಿ, ದೇವರು ಕೊಟ್ಟಿದ್ದೊಂದು ದಿವ್ಯ ದೃಷ್ಟಿಯಿಂದ, ಯವನ ಸೇನಾಪತಿಯು ಸೈನ್ಯವನ್ನು ತೆಗೆದುಕೊಂಡು ಆ ದಿನವೇ ಬಂದು ದುರ್ಗಕ್ಕೆ ಮುತ್ತಿಗೆ ಹಾಕುವ ನೆಂದೂ ಸಮಾಚಾರವು ಮತ್ತಾರಿಗೂ ತಿಳಿದಿರಲಿಲ್ಲವೆಂದೂ, ಸೈನ್ಯವು ಬರುವ ಹೊತ್ತು ತಮಗೆ ಮಾತ್ರ ತಿಳಿದಿದ್ದ ಹಾಗೂ ಅವರು ಬಂದಾಗ ತನ್ನ ಅಸಾಧಾರಣ ವೀರತ್ವವನ್ನು ತೋರಿಸಿ ಎಲ್ಲರಿಗೂ, ವಿಶೇಷವಾಗಿ, ಹೆಂಗಸರಿಗೂ ತೋರಿಸಿ ಅವರನ್ನು ಆಶ್ಚರ್ಯ ಪಡಿಸಬೇಕೆಂದು ಯೋಚಿಸಿಕೊಂಡು ಹೆಂಗಸರು ಇದ್ದೆಡೆಗೆ ಹೋಗಿ ಅವರೆದುರಿಗೆ ಭುಜದನ್ನು ತಟ್ಟಿ ಕೊಂಡು, “ ಇಂದು ನೀವು ಕಾಳ ಗುಡ್ಡನು ಎಂತಹ ದೊಡ್ಡ ವೀರನೆಂಬುವುದನ್ನು ನೋಡುವಿರಿ ! ಆ ದಿನ ದೈವ ಯೋಗದಿಂದ ಒಬ್ಬ ಹುಡುಗನಿಗೆ ಸೋತುಹೋದನೆಂದು ಹಾಸ್ಯ ಮಾಡಿದಿರಿ; ಈ ದಿನ ತಾನೊಬ್ಬನೇ ಸಾವಿರ ಯವನರು ಬಂದರೂ ಹೊಡೆದುಹಾಕ.ವೆನು ೨೨ ಎಂದು ಹೇಳಿದಹಾಗೂ ಅದಕ್ಕೆ ಹೆಂಗಸರು, * ಒಬ್ಬನೇ ಅಷ್ಟು ಮಂದಿ ಶತ್ರು ಗಳನ್ನು ಹೇಗೆ ಹೊಡೆಯವೆ ? ಅಫೀಮಿನ ಅಮಲು ಹೆಚ್ಚಾಗಿ ಏರಿದೆಯೊ ? ೨ ಎಂದು ಹೇಳಿ ನಕ್ಕ ಹಾಗೂ ಅದಕ್ಕೆ ತಾನು, ದರ್ಪದಿಂದ ಭುಜವನ್ನು ತಟ್ಟಿ ಕೊಂಡು, * ಬೆಟ್ಟದ ಕೆಳಗೆ ನೋಡಿರಿ ; ಎಷ್ಟು ಮಂದಿ ಯವನರು ಬರುತ್ತಿರು ವರು ' ಎಂದು ಹೇಳಿದುದಕ್ಕೆ ವಿಲಾಸಕುಮಾರಿಯು ಕಾಳಗುಡ್ಡನೊಬ್ಬನೇ ಆಷ್ಟು ಮಂದಿಯೊಡನೆ ಯುದ್ಧ ಮಾಡಲಾರನು. ಕೃಷಿಕ ಯುವಕನನ್ನೂ ಸಕಾ ಯಕ್ಕೆ ಕರೆದುಕೊಂಡು ಹೋಗು ೨೨ ಎಂದು ಹೇಳಿದಹಾಗೂ ಅದಕ್ಕೆ ತಾನು ಆಂಬಾಲಿಕೆಯ ಅಭಿಪ್ರಾಯವನ್ನು ತಿಳಿದು ನಕ್ಕು, 46 ಕಾಳಗುಡ್ಡನು ನಾರಿಯರ ಮಾತಿಗೆ ಮರುಳಾಗನು, ಈ ತಡವೆ ಜಯಮಾಲೆಗೆ ಬಾಧ್ಯರಾರಂಬುವುದನ್ನು ನೀವೇ ನೋಡುವಿ ?” ಎಂದು ಹೇಳಿ, ದುರ್ಗಕ್ಕೆ ಹತ್ತುವ ಪಾರ್ಶ್ವದಲ್ಲೊಂದು ಮರದ ಮರೆಯಲ್ಲಿ ಹೋಗಿ ನಿಂತು, ಆ ಇಕ್ಕಟ್ಟಾದ ಸ್ಥಳದಲ್ಲಿ ಒಬ್ಬೊಬ್ಬನಾಗಿ ಬರಬಹುದಾದ ಶತ್ರುಗಳನ್ನೆಲ್ಲಾ ಅವರು ಬಂದಹಾಗೆ ಹೊಡೆದುಹಾಕಬೇಕೆಂದು ಯೋಚಿಸಿದಹಾಗೂ ಕನಸು ಬೀಳುತಿದ್ದಿತು, ಕನಸು ಇನ್ನೂ ಪೂರೈಸಲಿಲ್ಲ, ಆದರೆ ವಿಜಯಪಾಲನು ಕನಸಿನಲ್ಲಿ ಶತ್ರುಗಳನ್ನು ಹೊಡೆದುಹಾಕಬೇಕೆಂದು ಯೋಚಿಸಿದಾಗಲೇ ಅಫೀಮಿನ ಅಮಲೇರಿ ಬಂದಿದ್ದ ಸುಖನಿದ್ರೆಯು ಭಂಗವಾಗಿ ಎದ್ದು ನೋಡಿದ್ದರೆ, ಅವನ ಸ್ವಪ್ನವು ಸುಳಲ್ಲವೆಂದೂ ವಾಸ್ತವಿಕವಾಗಿ ನಾಲ್ಕು 10
ಪುಟ:ಕೋಹಿನೂರು.djvu/೮೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.