ಕೊಹಿನುರು ಮಂದಿ ಯವನರು ನಿಶ್ಯಬ್ದವಾಗಿ ಅವನು ಮಲಗಿದ್ದ ಮಂಚದ ಬಳಿಗೆ ಒಂದು ಅವನ ವಿಪುಳವಾದ ದೇಹವನ್ನು ನೋಡಿ ಪರಸ್ಪರ ಸಂಜ್ಞೆ ಮಾಡಿ ಒಬ್ಬನು ಅವನ ಕತ್ತಿಯನ್ನು ತೆಗೆದು ಮಂಚದ ಕೆಳಗೆ ಇದ್ದು ಮತ್ತೊಬ್ಬನು ಅವನ ಕಾಲುಗಳಿಗೆ ಬೇಡಿಗಳನ್ನು ಹಾಕಿ ಮಂಚಕ್ಕೆ ಕಟ್ಟಿ ಬೇರೊಬ್ಬನು ಕೈಗಳಿಗೂ ಕೋಳಗಳನ್ನು ಸರಪಣಿಯಿಂದ ಕಟ್ಟಿ ಮಲಗಿದ್ದ ಹಾಗೆ ವಂಚಕ್ಕೆ ಬಿಗಿದಿದ್ದರೆಂದು ತಿಳಿಯುತಿ ದೃನು, ಆದರೆ ವಿಜಯಪಾಲನ ಕನಸು ಮುಗಿಯದೆ ಮೊದಲಿನಹಾಗೆ ತಾನೆ ಕೆಲಸಗಳನ್ನೆಲ್ಲಾ ಕನಸಿನಲ್ಲಿ ಮೂಡುತ್ತಿದ್ದ ಹಾಗೂ ಒಬ್ಬ ಯವನನು ತಾನು ನಿಂತಿದ್ದ ಮರದ ಬಳಿ ಬೆಟ್ಟವನ್ನು ಹತ್ತಿ ಬಂದಾಗೂ ಆಗವನ ತಲೆಯನ್ನು ಹೊಡೆಯಲು ಕತ್ತಿಯನ್ನೆತ್ತುವುದಕ್ಕೆ ಕೈಯೆತ್ತಲಾಗಿ ಕೈಯಲ್ಲಿ ಕತ್ತಿಯಿಲ್ಲದೆ ಕೈಬಾರದೆ ಇದ್ದ ಹಾಗೂ ಕ್ರಮವಾಗಿ ಒಬ್ಬರು, ಇಬ್ಬರು, ನಾಲ್ವರು, ಹತ್ತು ಮಂದಿ ಹೀಗೆ ಯವನರು ದುರ್ಗದ ಕಡೆಗೆ ಓಡಿದಹಾಗೂ ತಾನೂ ಓಡಿ ಹೋಗಿ ಅವರನ್ನು ಅಡ್ಡಗಿಸಬೇಕೆಂದು ಪ್ರಯತ್ನ ಪಟ್ಟಾಗ ಕಾಲೇ ಬರದೆ ಕಾಲಿಗೆ ಬೇಡಿ ಗಳನ್ನು ತೊಡಿಸಿದ್ದ ಹಾಗೂ ಎದೆಯಮೇಲೆ ಹೆಚ್ಚು ಭಾರವಿದ್ದಹಾಗೂ ಕನಸು ಕಂಡನು. ಅಷ್ಟರೊಳಗೆ ನಿದ್ರೆಯು ಭಂಗವಾಗಿ ಎಚ್ಚರವಾಯಿತು. ನಾರಿಯರ ಅಳುಂಗೋಳೂ ಸೈನಿಕರ ಕೋಲಾಹಲದ ಶಬ್ದವೂ ಅವನ ಕಿವಿಗೆ ಬಿದ್ದುವು. ಕೆಂಪೇರಿದ್ದ ಕಣ್ಣು ಬಿಟ್ಟು ನೋಡಲಾಗಿ ದುರ್ಗದ ನಾಲ್ಕು ಕಡೆಯಲ್ಲಿಯೂ ಯವನರ ಸೈನ್ಯದವರು ತುಂಬಿದ್ದರಲ್ಲದೆ ಅವನ ತಲೆಯ ಕಡೆ ನಾಲ್ಕು ಮಂದಿ ಯವನರು ನಿಂತು ನಗುತಿದ್ದರು. ** ನನ್ನ ಕತ್ತಿಯೆಲ್ಲಿ ? ೨೨ ಎಂದು ಏಳುವು ದಕ್ಕೆ ಹೋದನು. ನಿಂತಿದ್ದ ಯವನರಲ್ಲೊಬ್ಬನು 41 ಕಾಫರ ! ಸುಮ್ಮನೆ ಮಲಗಿರು, ನಿನ್ನ ಕೈಕಾಲುಗಳಲ್ಲಿ ಬೇಡಿಗಳಿವೆ ” ಎಂದನು. ವಿಜಯಪಾಲನು ಕೋಧದಿಂದಲೂ ಆಶ್ಚರ್ಯದಿಂದಲೂ ಚೀರಿಡುತ್ತ, (• ಹಾ, ಕವನ ! ನನ್ನೆಲ್ಲ ಮೋಸವಿದ್ಯವೇ ? ಕೈಯ್ಯಲ್ಲಿ ಕತ್ತಿಯನ್ನು ಕೊಟ್ಟು ಯುದ್ಧವನ್ನು ಮಾಡು ೨” ಎಂದು ಕೂಗಿಕೊಂಡನು.
- ನಿನ್ನ ಮುದ್ದದ ಹವಣು ಈಗಲೇ ಅರೆಯಾಗುವುದು ಎಂದು ಹೇಳುತ್ತ ಅವರಲ್ಲೊಬ್ಬನು ಕತ್ತಿಯನ್ನೆತ್ತಿ ಹಿಡಿದನು, ಮತ್ತೊಬ್ಬನು ಅವನ ಕೈಯನ್ನು ಹಿಡಿದು, ನಿರಸ್ತ್ರನಾದ ವೀರನನ್ನು ಹೊಡೆಯಬಾರದೆಂದು ಹೇಳಿ,