ಏಳನೆಯ ಪರಿಚ್ಛೇದ ೭೫ ananannanAmamna ಜM ಕೇಳು ಕಾಫರ ! ನಾವು ದಯಮಾಡಿ ನಿನ್ನ ಪ್ರಾಣವನ್ನುಳಿಸಿದ್ದೇವೆ, ಅನರ್ಥ ವಾಗಿ ಅರಚುಬೇಡವೆಂದು ಹೇಳಿದನು. “ ಪಾಪಿಷ್ಠ ಯವನ ! ನಿನ್ನ ದಯೆಯು ನನಗೆ ಬೇಕಿಲ್ಲ. ಕತ್ತಿಯನ್ನು ಕೊಟ್ಟು ಬಳಿಕ ನನ್ನ ಸಂಗಡ ಯುದ್ಧ ಮಾಡಲು ಹೆದರಿಕೆಯಾದರೆ, ನನ್ನ ಕತ್ತಿ ಯನ್ನು ಹಿಂದಿರುಗಿ ತೆಗೆದುಕೊಂಡು ಹೆಂಗಸರು ಅಳುತ್ತಿರುವ ಸ್ಥಳಕ್ಕೆ ಹೋಗಲು ಬಿಡು ೨೨
- ಪುನಃ ಎಚ್ಚರಿಸುತ್ತೇನೆ, ಅರಚುಬೇಡ, ಅರಚುವುದು ನಿಲ್ಲಿಸದಿದ್ದರೆ ಇಲ್ಲೇ ಪ್ರಾಣವನ್ನು ಕಳೆದುಕೊಳ್ಳುವೆ. ೨
ವಿಜಯಪಾಲ-(ಹುಚ್ಚನಹಾಗೆ ಹಲ್ಲು ಕಡಿದುಕೊಂಡು) ಯವನನು ಹುಚ್ಚನಲ್ಲವೆ ? ಇವನು ಹೇಳುವುದೇನು ? ಯುದ್ದ ಮಾಡಬೇಡ ಯವನನ್ನು ಯಮಾಲಯಕ್ಕೆ ಕಳುಹಿಸಬೇಡ. ಕೂಗಲೂ ಬೇಡವೆಂದಲ್ಲವೆ ! ಅಹುದೊ ! ಯವನ ! ನಿನ್ನ ಇಷ್ಟವೇನು ? ಬೇಡಿಯನ್ನಿಟ್ಟುಕೊಂಡು ಇಲ್ಲಿಯೇ ಬಿದ್ದಿರಬೇ ಕೆಂದಲ್ಲವೆ ? ಕೇಳು, ಅಧಮ ! ಬೇಡಿಯನ್ನು ಕಳಚುವವರೆಗೂ ನಾನು ಅರಚುತ್ತ ಬೆಟ್ಟವನ್ನೆಲ್ಲಾ ಕೆಲೆಗೊಳಿಸುತ್ತಿರುವೆನು. ಯವನರು ನಾಲ್ವರೂ ಘಟ್ಟಿಯಾಗಿ ನಗುವುದಕ್ಕೆ ತೊಡಗಿದರು. ವಿಜಯ ಪಾಲನು ತನ್ನ ಸೈನ್ಯವನ್ನು ಕುರಿತು ನೀವು ಬೇಗನೆ ಬಂದು ನನ್ನ ಬೇಡಿಯನ್ನು ಕಳಚಿರಿ, ಯವನರನ್ನು ಯಮನ ಸದನಕ್ಕೆ ಕಳುಹಿ ಈ ಅವಮಾನಕ್ಕೆ ಮುಖ್ಯ ತೀರಿಸಿಕೊಳ್ಳುವೆನೆಂದು ಕೂಗುತಿದ್ದನು. ವಿಜಯಪಾಲನ ಕೂಗು ಎಲ್ಲಿ ಗೂ ಮುಟ್ಟಲಿಲ್ಲ, ಯಾರೂ ಹತ್ತಿರ ಬರಲಿಲ್ಲ. ದೂರದಲ್ಲಿದ್ದ ಅಂಬಾಲಿಕೆಯ ಕಿವಿಗೂ ವಿಲಾಸಕುಮಾರಿಯ ಕಿವಿಗೂ ಅವನ ಗದ್ದಲವು ಕೇಳಿಸುತಲಿದ್ದಿತು. ಗುಡ್ಡವನ್ನು ಭೇದಿಸುವ ಕಾಳಗುಡ್ಡನ ಚೀರಾಟವೂ ಯುದ್ದದ ಕೋಲಾಹಲವೂ ನಾರಿಯರ ಗೋಳಾಟವೂ ನಾಲ್ವರು ಯವನರ ನಗುವಿನಲ್ಲಿ ಅಣಗಿಹೋಗುತಿದ್ದುವು. ಅಂಬಾಲಿಕೆ-ಹೊರಡು, ಸಖಿ | ಇಲ್ಲಿ ಕಾಲಹರಣ ಮಾಡುವುದು ಸರಿಯಲ್ಲ. ಇತ್ತ ಕಡೆ ನೋಡು, ಯವನ ಅಶ್ವಾರೋಹಿಯು ನಮ್ಮ ಕಡೆ ಬರುತ್ತಾನೆ.
- ಯೌವನನಲ್ಲವೆ, ಸಖಿ ! ಯವನ ವೇಷವನ್ನು ತಾಳಿದ ಹಿಂದೂ ೨