ಎಂಟನೆಯ ಪರಿಚ್ಛೇದ ಆn ಎಂ ಅಮೃತಮಯವಾದಾ ಕಂಠಸ್ವರದಿಂದ ಚೇತನವನ್ನು ಹೊಂದಿತೋ ಎಂಬಹಾಗೆ ಅಚೇತನವಾಗಿದ್ದಾ ದೇಹವು ಮಲಗಿದ್ದು ಎದ್ದಹಾಗೆ ಎದ್ದು ನಿಂತಿತು. ಆಶ್ಚರ್ಯದಮೇಲೆ ಆಶ್ಚರ್ಯ ! ಕೃಷಿಕ ಸೈನಿಕನಾಗಿದ್ದನು || ಕೃಷಿಕ-ದೇವ ! ಈ ದೀನನ ಪರಮಾಯುವು ಯವನ ಯುದ್ಧದಲ್ಲಿ ಕೊನೆಗಂಡಿದೆಯೆಂದು ತಿಳಿದು ತಾವು ಒಂದು ಪ್ರಾಣದಾನಮಾಡಿರುವಹಾಗೆ ತೋರುತ್ತದೆ. ಫಕೀರ-ವತ್ಸ ! ಮನುಷ್ಯನ ಮೃತದೇಹಕ್ಕೆ ಪ್ರಾಣವನ್ನು ತುಂಬುವುದು ಮನುಷ್ಯನಿಗೆ ಸಾಧ್ಯವೆ ? ಗಾಢನಿದ್ರೆಯಲ್ಲಿ ಮಲಗಿದ್ದವನನ್ನು ಎಚ್ಚರಗೊಳಿಸಿ ದೆನು. ದುರ್ಗಕ್ಕೆ ಮುತ್ತಿಗೆ ಹಾಕಿದ್ದಾರೆಂದು ಕೇಳಿ, ನಾನು ಬೇಡವೆಂದರೂ, ನೀನೊಬ್ಬನೇ ಹೊರಟುಬಂದುದನ್ನು ಕಂಡು ನನ್ನ ಮನಸ್ಸಿಗೆ ಸಂಶಯ ಹುಟ್ಟಿ ನಿನ್ನ ಬೆನ್ನು ಹತ್ತಿ ಬಂದು ನೋಡಲಾಗಿ ಮೃತದೇಹಗಳ ರಾಶಿಯಲ್ಲಿ ನೀತೂ ಮೂರ್ಛಿತನಾಗಿ ಬಿದ್ದಿದ್ದೆ. ಕೃಷಿಕ-ತಾವು ದಯವಿಟ್ಟು ಜೀವವನ್ನು ಕೊಟ್ಟು ಬದುಕಿಸಿದ ಈ ಶರೀರದಿಂದೇನಾದರೂ ಒಂದುಪಕಾರವಾಗಲಿ ! ಕಳ್ಳರು ಮೇನೆಯನ್ನು ಎಲ್ಲಿಗೆ ತೆಗೆದುಕೊಂಡು ಹೋದರು ? ಬೇಗನೇ ಅಪ್ಪಣೆಯಾಗಲಿ “ ನಾನು ಮೇನೆಯನ್ನು ನೋಡಲಿಲ್ಲ. 9ಳೆ | ಕೃಷಿಕನು ಕಳವಳದಿಂದಲೂ ಕ್ರೋಧದಿಂದಲೂ ಹಲ್ಲುಗಳಿಂದ ತುಟಿ ಯನ್ನು ಕಡಿದುಕೊಂಡು, “ ಹಾಗಾದರೆ ಆ ರಾಕ್ಷಸರು ಸುರಸುಂದರಿಯಾದ ಅಂಬಾಲಿಕೆಯನ್ನು ಎಲ್ಲಿಗೆ ಯಾವ ಮಾರ್ಗವಾಗಿ ಹೊತ್ತು ಕೊಂಡು ಹೋದರೋ ಅದನ್ನು ನನಗೆ ಹೇಳುವವರಾರು ?೩ ಎಂದು ಕೇಳಿದನು. ವಿಲಾಸಕ ಮಾರಿಯು ಮುಂದಾಗಿ ಬಂದು, * ನಾನು ಹೇಳಬಲ್ಲೆ ನು. ಈ ನಮ್ಮ ತಂದೆಯ ಗುರುಗಳ ಆಶೀರ್ವಾದದಿಂದ ವಿದ್ಯಮಾನಗಳನ್ನೆಲ್ಲಾ ತಿಳಿದು ಕೊಂಡು, ಕೌಶಲದಿಂದ ರಾಕ್ಷಸರ ಸೆರೆಯಿಂದ ತಪ್ಪಿಸಿಕೊಂಡು ದುರ್ಗದಲ್ಲಿ ಸುದ್ದಿಯನ್ನು ಕೊಡಲು ಓಡಿಬರುತಿದ್ದೆನು 99 ಎಂದಳು, ಕೃಷಿಕನು ಉಲ್ಲಾಸ ದಿಂದಲೂ ಆಶ್ಚರ್ಯದಿಂದಲೂ ವಿಲಾಸಕುಮಾರಿಯ ಮುಖಮಂಡಲವನ್ನು ನೋಡಿ, “: ಹಾಗಾದರೆ, ದೇವಿ! ಹೊರಡೋಣಾಗಲಿ, ನನಗೆ ಮತ್ತೊಂದು ತಡವೆ ಯವನರ ಯುದ್ದ ಕ್ಷೇತ್ರಕ್ಕೆ ಮಾರ್ಗವನ್ನು ತೋರಿಸೋಣಾಗಲಿ 99 ಎಂದನು. $$.
ಪುಟ:ಕೋಹಿನೂರು.djvu/೮೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.