ಒ೦ ಭ ತ ಯ ಸ ರಿ ಚ್ಛ ದ . - ವೀರಭಕ್ಷನು ಕಷ್ಟದಿಂದ ನೀರಿಂದೆದ್ದು ಬಂದು ನೋಡಲಾಗಿ ಅವನ ಪ್ರಾಣಾಧಿಕೆಯೊಡನೆ ಕುದುರೆಯ ಅದೃಶ್ಯವಾಗಿದ್ದಿತು. ನಿರಾಶನಾದ ಪ್ರೇಮಿ ಕಸು ಮೈಯೆಲ್ಲಾ ಕಡುನೋವಾಗಿ ನಿಟ್ಟುಸಿರನ್ನು ಬಿಟ್ಟು, ಅಶ್ವವಾಹಿನಿಯಾ ಗಿದ್ಧಾ ಸೈತಾನಿಯನ್ನು ಕುರಿತು ನಾನಾಮಧುರ ನಾಮಾವಳಿಗಳಿಂದ ಹೊಗಳಿ, ಮೇನೆಯನ್ನು ಬಿಟ್ಟು ಹೋಗಿದ್ದ ಸ್ಥಳಕ್ಕೆ ಬಂದು, ತನ್ನ ಅನುಚರರನ್ನು ಸಂಬೋ ಧಿಸಿ, ಸಾಧ್ಯವಾದಮಟ್ಟಿಗೂ ಜಾಗ್ರತೆಯಾಗಿ ಕಾಫರ ಸುಂದರಿಯನ್ನು ನಬಾಬರ ಶಿಬಿರಕ್ಕೆ ಕೊಂಡೊಯ್ದಿರೆಂದೂ ಸಾವಕಾಶವಾದರೆ ಸೈತಾಸಿಯು ಪುನಃ ಬಂದು ನಮಗೆ ಆಸತ್ತನ್ನು ತರುವಳೆಂದೂ ಹೇಳಿ, ಹಾ ! ಹಾ ! ಅಂತಹ ಸೈತಾನಿ ಯನ್ನು ನಾನಾವಾಗಲೂ ಸ್ವಪ್ನದಲ್ಲಿ ಯ ನೋಡಿರಲಿಲ್ಲವೆಂದಂದುಕೊಂಡನು. ರಜನಿಯು ಪ್ರಭಾತವಾಯಿತು ಮೊನೆಯ ಮುಸಲಮಾನ ಶಿಬಿರಕ್ಕೆ ಮುಟ್ಟಿತು. ಅಂಬಾಲಿಕೆಯು, 66 ಈಗ ಉಪಾಯವೇನು ? ವಿಲಾಸಕುಮಾರಿಯು ಮೇನೆಯಿಂದಿಳಿದು ವೀರಬಕ್ಷನ ಸಂಗಡ ಪು ಣಿಗೆ ಹೋಗುವಾಗ, ಜಾಗ್ರತೆ ಯಾಗಿ ದುರ್ಗಕ್ಕೆ ಹೋಗಿ ಸುದ್ದಿಯನ್ನು ಹೇಳಿ ಮಾರ್ಗಕ್ಕೆ ಬಂದು ನನ್ನನ್ನು ಉದ್ದಾರ ಮಾಡುವುದಾಗಿ ಹೇಳಿದ್ದಳು, ಈಗೆಲ್ಲಿ ? ಯಾರೂ ಬರಲಿಲ್ಲ ! ಇನ್ನು ಪ್ರಾಣವನ್ನು ಬಿಡುವುದು ಹೊರತು ಬೇರೇ ಉಪಾಯವಿಲ್ಲ ೨೨ ವೆಂದು ಹೇಳಿಕೊ ಳ್ಳುತ್ತ ಚೂರಿಯನ್ನು ತೆಗೆದು ಕೈಯಲ್ಲಿ ಹಿಡಿದು ಕೈಮುಗಿದುಕೊಂಡು ಆಕಾಶ ದಲ್ಲಿ ದೃಷ್ಟಿಯಿಟ್ಟವಳಾಗಿ ** ಭಗವಂತ ! ಆತ್ಮಹತ್ಯವ ಪಾಪಕೃತ್ಯವೆಂದು ಕೇಳಿ ದೇನೆ. ಆದರೆ, ನಾಥ ! ಯವನರ ಕೈಯಿಂದುದ್ಧಾರವಾಗುವುದಕ್ಕೆ ಬೇರೇ ಉಪಾಯವೇನೂ ತೋರುವುದಿಲ್ಲ ೨೨ ವೆಂದಂದುಕೊಂಡಳು. ಯಾರೋ ಒಬ್ಬನು ಶಬ್ದದಿಂದ ಮೇನೆಯ ಬಾಗಿಲನ್ನು ತೆರೆದನು. ಅಂಬಾಲಿಕೆಯು ನಡುಗಿ ನೋಡಲಾಗಿ, ಹೊರಗೆ ಕೇಸರಿಸಿಂಹನ ಪಾರ್ಶ್ವದ ಬ್ಲೊಬ್ಬ ವಿಕಟಾಕಾರನಾದ ಯವನನು ನಿಂತು ನಗುತಿದ್ದನು, ಕೇಸರಿಯು ಉಚ್ಚಸ್ವರದಿಂದ, “ ಯವನ ಸೇನಾಪತಿ ! ವಿಧಾತನು ನಿಜವಾಗಿಯೂ ಈ ಕನಕ ಪಾರಿಜಾತವನ್ನು ನರಕದಲ್ಲಿ ಹಾಕಲು ಸೃಷ್ಟಿ ಮಾಡಿದನಲ್ಲವೆ ! ೨ ಎಂದು ಹೇಳಿದನು.
ಪುಟ:ಕೋಹಿನೂರು.djvu/೯೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.