ಒಂಭತ್ತನೆಯ ಪರಿಚ್ಛೇದ ಆಟ wwwm mmmmmmmmm ಯವನ ಸೇನಾಪತಿ ಅಫಜುಲನು, ಕೇಸರಿಸಿಂಹನ ಮಾತುಗಳನ್ನ ರಿಯಲಾ ರದೆ, “ ನಿಜವಾಗಿಯೂ ನನ್ನ ಪ್ರಾಣವಿರುವವರೆಗೂ ನಿನಗೆ ಬಾಧ್ಯ ಪಟ್ಟಿರು ವೆನು ನಾನು ಬಾದಷಹನಲ್ಲಿ ಹೇಳಿ ನಿನಗೆ ಪುರಸ್ಕಾರ-೨ ಈ ಮಾತು ಪೂರೈಸುವುದರೊಳಗೆ ಕೇಸರಿಯು ವಿಕಟವಾಗಿ ನಕ್ಕು, “ ಪುರ ಸ್ವಾರವೆ? ಯವನಸೇನಾಪತಿ ! ಹಾಗಾದರೆ ನನಗೆ ಇಲ್ಲೇ ಈ ಸುಂದರಿಯದು ರಿಗೆ ಪುರಸ್ಕಾರವನ್ನು ಕೊಡು ! ನಿನ್ನ ಶಿಬಿರದಲ್ಲೀಗ ಇಲ್ಲಿ ಎಷ್ಟು ಸೈನ್ಯವಿರು ವುದು ? ೨೨ ಎಂದನು. (* ಇನ್ನೂ ರುಮಂದಿ ಮಾತ್ರ ! ಉಳಿದವರನ್ನು ನಿನ್ನ ಸಂಗಡ ದುರ್ಗವನ್ನು ಆಕ್ರಮಣ ಮಾಡುವುದಕ್ಕೆ ಕಳುಹಿಸಿದ್ದೆನಷ್ಟೆ. ಅವರು ಇನ್ನೂ ಹಿಂದಿರುಗಿ ಬರಲಿಲ್ಲ, ನೀನು ಈ ಮಾತನ್ನು ಕೇಳಲೇಕೆ ? ೨೨ << ಅಫಬುಲಖಾನ್ ! ಇನ್ನೂ ರು ಶೃಗಾಲಗಳೊಂದಿಗೆ (ನರಿಗಳೊಂದಿಗೆ) ಒಂದು ಕೇಸರಿಯು (ಸಿಂಹವು) ಯುದ್ದ ಮಾಡುವುದನ್ನು ನೀನಾವಾಗಲಾ ದರೂ ನೋಡಿರುವುದುಂಟೆ ? 99 - “ ಇಲ್ಲ ! ನಿನ್ನ ಮಾತಿನ ಅರ್ಧವು ನನಗೆ ಗೊತ್ತಾಗಲಿಲ್ಲ ೨೨ ಕೇಸರಿಸಿಂಹನು ಕತ್ತಿಯೊರೆಯನ್ನು ಕಳಚಿ ವಜ್ರಮುಷ್ಟಿಯಿಂದ ಹಿಡಿದು ಮತ್ತೊಂದು ಕೈಯಿಂದ ಅಫಜುಲನ ಕುತ್ತಿಗೆಯನ್ನು ಬಗ್ಗಿಸಿ ಹಿಡಿದುಕೊಂಡು ಹಸಿದ ಸಿಂಹನಹಾಗೆ ಗರ್ಜಿಸಿ, ಎಲೈ ತೃಗಾಲಗಳಿರಾ ! ನೀವೆಲ್ಲಾ ಒಟ್ಟು ಕೂಡಿ ಕೇಸರಿಯ ಬಲವನ್ನು ಕೆಣಕಿ ನೋಡಿರಿ ! ಇಲ್ಲದಿದ್ದರೆ, ಇದೋ, ನೋಡಿರಿ ! ಕೇಸರಿಯ ನಿಮ್ಮ ಸೇನಾಪತಿಯ ಎದೆಯನ್ನು ಸೀಳಿ ರಕ್ತವನ್ನು ಹೀರುವನು 99 ಎಂದು ಹೇಳಿದನು. - ಕೇಸರಿಸಿಂಹನನ್ನು ಹಿಡಿಯುವುದಕ್ಕೆ ನಾಲ್ಕು ಕಡೆಗಳಿಂದಲೂ ಸೈನಿಕರು ಓಡಿಬಂದರು. ಕೇಸರಿಸಿಂಹನು ಅಫಜುಲನ ಕುತ್ತಿಗೆಯನ್ನು ಕೈಬಿಟ್ಟು, “ ಸುರ ಸುಂದರಿ ಅಂಬಾಲಿಕೆ ! ನೋಡು, ಈ ಎದೆಯನ್ನು ಸುಡುವ ಭಯಂಕರವಾದ ಅನುತಾಪದ ಬೆಂಕಿಯನ್ನು ಶಾಂತಿಮಾಡಲು ಹೊರಟು ಈ ಶೃಗಾಲಗಳ ನಖಾ ಘಾತದಿಂದ ಕೇಸರಿಯು ಪ್ರಾಣವನ್ನು ಬಿಟ್ಟು ಅವನ ಪೈಶಾಚದ ವ್ರತಕ್ಕೆ ತಕ್ಕ ಪ್ರಾಯಶ್ಚಿತ್ರವನ್ನು ಮಾಡಿಕೊಳ್ಳುವನು ೨” ಎಂದು ಕೂಗಿ ಹೇಳಿದನು. ಇನ್ನೂ ರು ಮುಸಲಮಾನ ಸೇನೆಯವರ ಇನ್ನೂ ರು ಕತ್ತಿಗಳ ಮಧ್ಯದಲ್ಲಿ ಒಬ್ಬೊಂಟಿಗ ರಾಜಪೂತ ವೀರನ ಒಂದೇ ಕತ್ತಿಯು ಭೀಮಬಲದಿಂದ ಭೀಷಣ
ಪುಟ:ಕೋಹಿನೂರು.djvu/೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.