೮೮ ಕೋಹಿಮರು - • • • • vvvvv 62, ಕ ತಂದು ಮೇಷ್ಟರನ್ನು ವಧೆಮಾಡಲು ಫಕೀರನ' ಸಂಗಡ ಕಳುಹಿಸಿಕೊಟ್ಟನು. ಅವನು ಮನುಷ್ಯನಲ್ಲದೇವಕುಮಾರ ! ಎಂದು ಹೇಳಿದನು. ವಿಲಾಸಕುಮಾರಿಯ ಮುಗ್ಧರಾದ ಹೆಂಗಸರನ್ನೆಲ್ಲಾ ಗ.೦ಪುಕೂಡಿಸಿ ಕೊಂಡು ಕೃಷಿಕ ಯುವಕನ ವೀರತ್ವದ ಕಥೆಯನ್ನೆಲ್ಲಾ ಒಂದೊಂದಾಗಿ ವಿವರಿಸಿ ಹೇಳತೊಡಗಿದಳು :-* ಒಬ್ಬ ವೀರನ ಒಂದೇ ಕತ್ತಿಯ ಪೆಟ್ಟಿನಿಂದ ನೂರಾರು ಮೇಚ್ಚರ ಮುಂಡಗಳು ಧರಣಿಯ ತಲದಲ್ಲಿ ಉರುಡಾಡಿ ಹೋದುವು ಆರಾವಳಿ ಬೆಟ್ಟದ ಸಮತಲ ಭೂಮಿಯಲ್ಲಿ ಶತ್ರುಗಳ ರಕ್ತದ ನದಿಯ ಹರಿದುಹೋಗುತಿದೆ. ಅವನ ಅತುಲ ವೀರತ್ವದಿಂದ ಅಸಾಧ್ಯ ಸಾಹಸದಿಂದಲೂ ಅಂಬರದ ರಾಜ ಕುಮಾರಿ ಅ೦ಬಾಲಿಕೆಯ ಶತ್ರಗಳ ಕೈಯಿಂದ ಬಿಡುಗಡೆಯಾದಳು ! ಅಂತಹ ವೀರವನ್ನು ಯಾರು ಯಾವಾಗ ಎಲ್ಲಿ ಕುಡಿದ್ದಾರೆ ? ಆ ದಿನ ವಾತೃಮಂದಿರ ದಲ್ಲಿ ಜನ್ಮ ಭೂಮಿ ತಾಯಿಯ ಸೇವೆಗೋಸ್ಕರ ರಾಜಸ್ಥಾನದ ರಾಜವಂಶದ ವೀರರೆಲ್ಲರೂ ಸೇರಿದ್ದರಷ್ಟೆ ! ಅವರಲ್ಲಿ ಎಷ್ಟು ಮಂದಿ ವೀರರು ಅಜ್ಞಾತಕ.ಲ ಶೀಲನಾದ ಸೀಡವಂಶದಲ್ಲಿ ಹುಟ್ಟಿದಾ ತರಣ ಸೈನಿಕನಿಗೆ ಸಮನಾಗುವರು ? 99 ಹೀಗೆಂದು ಹೇಳಿ ವಿಲಾಸಕನಾರಿಯ ವಿಷಾದದಿಂದ ರಾಜಮಹಿಷಿಯ ಕಡೆ ಮುಖವನ್ನು ತಿರುಗಿಸಿಕೊಂಡು ಹೇಳತೊಡಗಿದ . :- ಆದರೆ, ವ್ಯಸನಪಡಬೇ ಕಾಗಿರುವುದೇನೆಂದರೆ ; ಇಲ್ಲಿ ಅಂತಹ ಫಿರಯುವಕನಿಗೆ ತಕ್ಕ ಮರ್ಯಾದೆ ಬಿಂದ ಒಂದು ಪುರಸ್ಕಾರವನ್ನು ಕೊಡುವ ಮಾತು ಹಾಗಿರಲಿ-ಒಂದು ಆದರದ ಮಾತು ಕೂಡ ಅವನ ಪಾಲಿಗೆ ಇಲ್ಲದೆ ಹೋಯಿತು ! ನಾವೆಲ್ಲಾ ವೀರರಮಣಿ ಯರಂತೆ ! ನಮ್ಮ ವೀರರ ಹೆಮ್ಮೆಗೆ ತುದಿಮೊದಲಿಲ್ಲ ! ನಮ್ಮ ವೀರರೋ ! ನಮ್ಮ ಸೀರತ್ವ ವೋ ! ಎಷ್ಟು ಹೇಳಿಕೊಂಡರೂ ತೀರದು? ರಾಜಮಹಿಡಿಯು, “ ಈಗ ಆ ಕೃಷಿಕ ಸೈನಿಕನೆಲ್ಲಿ ? ?ಎಂದು ಕೇಳಿದಳು. ಸಿತಾಸಕ ವಾರಿಯು ನಗುತ, ಅಂಬಾಲಿಕೆಯ ಕಡೆ ನೋಡುತ್ತ, “• ಅವನಿ ಗಿನ್ನು ಈ ದುರ್ಗದಲ್ಲಿರುವುದಕ್ಕೆ ಅವಕಾಶವಿಲ್ಲ. ಅದುಕಾರಣ ಅವನು ಅರ್ಧ ಹಾದಿಯಲ್ಲೇ ಕಾಳಗುಡನ ಅಪ್ಪಣೆಯನ್ನು ತೆಗೆದುಕೊಂಡು ಎಲ್ಲಿಗೋ ಹೊರ ಟುಹೋದನು. ಹೋಗುವಾಗ ಅವನಿಗೂ ಕಾಳಗಡ್ಡನಿಗೂ ಏಕಾಂತವಾಗಿ ಒಹಳ ಮಾತು ಕಥೆ ನಡೆದಹಾಗಿದೆ-ಕಾಳಗುಡ್ಡವನ್ನು ವಿಚಾರಿಸಿದರೆ ಎಲ್ಲಾ ಗೊತ್ತಾಗಬಹುದು !ಎಂದಳು.
ಪುಟ:ಕೋಹಿನೂರು.djvu/೯೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.