ಹನ್ನೊಂದನೆಯ ಪರಿಚ್ಛೇದ ಆ M ರಾಜಮಹಿಷಿಯು ವಿಜಯಪಾಲನನ್ನು ಕರೆತರುವುದಕ್ಕೆ ಒಬ್ಬ ಪರಿಚಾರಿ ಕೆಗೆ ಅಪ್ಪಣೆ ಮಾಡಿದಳು. ಕಾಳಗುಡ್ಡನು ಬರುತ ದೂರದಿಂದಲೇ ಹೆಂಗಸರ ಗುಂಪು ಸೇರಿರುವುದನ್ನು ನೋಡಿ, ಮನಸ್ಸಿನಲ್ಲಿ, ಈ ದಿನ ಅವರೆಲ್ಲರೂ ತನಗೆ ಬೇಡಿಯಾಗಿದ್ದ ಸಂಗತಿಯನ್ನೆತ್ತಿಕೊಂಡು ಹಾಸ್ಯ ಮಾಡುವುದಕ್ಕೆ ಕರೆಯಿಸಿರಬೇ ಕೆಂದು ತಿಳಿದುಕೊಂಡು, ಬಳಿಕ ಅವರೆದುರಿಗೆ ರಾಜಮಹಿಷಿ ಇದ್ದುದನ್ನು ಕಂಡು ಮನಸ್ಸಿಗೆ ಸ್ವಲ್ಪ ಧೈರ್ಯವುಂಟಾಗಿ, ಬಂದು ರಾಜಮಹಿಷಿಗೆ ವಂದಿಸಿದನು. ರಾಜಮಹಿಷಿ-ಆ ಕೃಷಿಕ ಯುವಕನೆಲ್ಲಿ ? << ಅವನು ಮಧ್ಯಮಾರ್ಗದಿಂದಲೇ ಹೊರಟುಹೋದನು, 99 44 ಅವನಾರು ? ಅವನ ಪರಿಚಯವೇನಾದರೂ ತಿಳಿದಿದೆಯೆ ? 99
- ಅವನನ್ನು ಬಾರಿಬಾರಿಗೂ ಕೇಳಿದುದಕ್ಕೆ ತನಗೆ ಮಿವಾರದಲ್ಲಿ ದುಃಖಿಸಿ ಯಾದ ತಾಯಿಯೊಬ್ಬಳು ಇದ್ದಾಳೆಂದೂ ತಾನು ಒಂದು ವರ್ಷದಲ್ಲಿ ಹಿಂದಿರುಗಿ ಅವಳ ಬಳಿಗೆ ಹೋಗುವುದಾಗಿ ವಾಗ್ದಾನ ಮಾಡಿದ್ದನೆಂದೂ ಆ ವರ್ಷವು ನಿನ್ನಿ ನದಿನ ಪೂರೈಸಿದುದರಿಂದ ಇಲ್ಲಿಗೆ ಬರುವುದಕ್ಕಾಗಲಾರದೆಂದೂ ಹೇಳಿ ಹೊರಟುಹೋದನು.
ರಾಜಮಹಿಷಿ-ನೀನೂ ಬಾಗ್ರತೆಯಾಗಿ ಮಹಾರಾಣಾ ಜಯಸಿಂಹ ರನ್ನು ನೋಡುವುದಕ್ಕೆ ಹೋಗಬೇಕಷ್ಟೆ ? ಅಲ್ಲಿಗೆ ಹೋದಾಗ ಆ ವೀರಬಾಲ ಕನ ವಿಕಾರವನ್ನು ಕೇಳಿ ತಿಳಿದುಕೊಳ್ಳಬೇಕು. - ವಿಜಯಪಾಲನು ಅಂಬಾಲಿಕೆಯನ್ನು ನೋಡಿ ನಗುತ, ನಾನು ಅವನನ್ನು ನಿಜವಾಗಿ ಇಲ್ಲಿಗೆ ಸಂಗಡ ಕರೆತರುವೆನು, ಅಂಬರದ ರಾಜಕುಮಾರಿಯು ಪುನಃ ಅವನಿಗೆಸಲುವಾಗಿ ಒಂದು ಜಯಮಾಲೆಯನ್ನು ಸಿದ್ದಪಡಿಸಿಕೊಂಡಿರಬೇ ಕೆಂದು ಹೇಳಿದನು. ಮೂರು ದಿವಸದ ಬಳಿಕ ವಿಜಯಪಾಲನು ರಾಣಾ ಬಯಸಿಂಹನನ್ನು ನೋಡಿಕೊಂಡು ಬರುವುದಕ್ಕೆ ಉದಯಪುರಕ್ಕೆ ಹೊರಟುಹೋದನು, ಅದೇ ದಿನ ಅಂಬಾಲಿಕೆಯು ಸನ್ಯಾಸಿಯ ವೇಷವನ್ನು ತಾಳಿ, ರಾಜಮಹಿಷಿಯು ಎಷ್ಟು ಹೇಳಿದರೂ ಕೇಳದೆ, ಚಿರಕೌಮಾರ್ಯ ವ್ರತದಲ್ಲಿ ರಬೇಕೆಂದು ಒಬ್ಬ ಪರಿಚಾರಿಕೆ ಯನ್ನು ಮಾತ್ರ ಸಂಗಡ ಕರೆದುಕೊಂಡು ನಾಥದ್ವಾರದಲ್ಲಿರುವ ಸನ್ಯಾಸಾ ಶ್ರಮಕ್ಕೆ ಹೊರಟುಹೋದಳು, ವಿಲಾಸಕುಮಾರಿಯೂ ಅವಳ ಸಂಗಡ ಹೊರಟು ಹೋದಳೆಂದು ಹೇಳಬೇಕಾದ ಆವಶ್ಯಕವಿಲ್ಲ. ಟ 12