ಹ ವೈ ರ ಡ ನೆ ಯ ಪರಿಚ್ಛೇದ. ನಾಥದ್ವಾರದಲ್ಲಿ ರಾಧಾಮಾಧವನ ಮಂದಿರಕ್ಕೆ ಹತ್ತಿರ ಹರಿಯುವ ಜೂನಾ ನದಿಯ ತೀರದಲ್ಲಿ ಸನ್ಯಾಸಿನಿಯರಿಬ್ಬರು ನಿಂತಿದ್ದಾರೆ. ಇಬ್ಬರೂ ಸುಂದರಿಯರು, ಇಬ್ಬರೂ ಯುವತಿಯರು, ಇಬ್ಬರಿಗೂ ಸಮಪ್ರಾಯ-ಆದರೆ ಅವರುಟ್ಟಿದ್ದ ಉಡುಗೆಗಳು ಬೇರೆಬೇರೆ, ಇಬ್ಬರ ಮುಖವನ್ನು ನೋಡಿದರೆ ಅವರವರ ಮನೋಭಾವಗಳು ಬೇರೆಬೇರೆಯಾಗಿ ಕಾಣುವುವು. ಒಬ್ಬಳು ಬಾಡಿದ ಮುಖವುಳ್ಳವಳಾಗಿ ನದಿಯ ತರಂಗಗಳ ಮೇಲೆ ಹೊಳೆಯುತ್ತಿದ್ದ ಅಸ್ತಮಿತ ಸೂರ್ಯನ ರಕ್ತ ಬಣ್ಣದ ಮೂರ್ತಿಯನ್ನು ಸ್ಥಿರದೃಷ್ಟಿಯಿಂದ ನೋಡುತಿದ್ದಳು. ಮತ್ತೊಬ್ಬಳು ಉಜ್ವಲವಾದ ಕಣ್ಣುಗಳಿಂದ ತನ್ನ ಜತೆಗಾತಿಯ ಮುಖವನ್ನು ನೋಡುತ ಮೃದುಮೃದುವಾಗಿ ಸಂಗೀತವನ್ನು ಹಾಡುತಿದ್ದಳು. ಆ ರಮಣಿ ಯನ್ನು ಸನ್ಯಾಸಾಶ್ರಮದಲ್ಲಲ್ಲದೆ ಬೇರೇ ಸ್ಥಳದಲ್ಲಿ ನೋಡಿದ್ದರೆ, ಸನ್ಯಾಸಿ ಯೆಂದು ತಿಳಿಯಲಾರೆವು, ಅವಳು ಉಟ್ಟಿದ್ದ ಕೆಂಪು ಬಣ್ಣದ ಸೂಕ್ಷ್ಮವಾದ ಬಟ್ಟಿ ಯೊಳಗಣ ಹಸುರು ಬಣ್ಣದ ರವಿಕೆಯು ಕಾಣುತ್ತಿದ್ದಿತು. ಅವಳ ಮನೋ ಹರವಾದ ಚಿಕ್ಕಣಕೇಶರಾಶಿಯು ಚಿಕಿಳಿಯಾಗಿ ವೇಣಿಒದ್ಧವಾಗಿ ಹರಿದಾಡು ತಿದ್ದಿತು, ಗುಲಾಬಿರಂಗಿನ ಅವಳ ಅದರಲ್ಲಿ ತಾಂಬೂಲದ ರಂಗು ಕಾಣುತಿ ದ್ವಿತು. ಅವಳ ಅಂಗಗಳು ದಂಡೆಯಾಗಿದ್ದ ಹೂವಿನ ಅಲಂಕಾರಗಳಿಂದ ಸಿಂಗರಿ ಸಲ್ಪಟ್ಟಿದ್ದು ವು. ಅವಳಾ ವಿಶಾಲವಾದ ಉಬ್ಬಿದ ಉರಸ್ಸಿನಲ್ಲಿ ಮಾಲತಿಯ ಹಾರ-ದುರ್ವಹವಾದ ಶೂಣಿಯ ಮೇಲುಭಾಗದಲ್ಲಿ ಅಶೋಕದ ಒಡ್ಯಾಣಕರ್ಣಗಳಲ್ಲಿ ಶಿಷಕುಸುಮಗಳು ಹಸ್ತದಲ್ಲಿ ಲೀಲಾಕಮಲ ಸನ್ಯಾಸಾಶ್ರಮ ದಲ್ಲಿ ಒಡವೆಗಳನ್ನು ತೊಡಕೂಡದು, ಅದಕಾರಣ ಸುಂದರಿಯು ಹೂವಿನ ದಂಡೆಗಳಿಂದಲಂಕರಿಸಿಕೊಂಡಿರಬೇಕೆಂದ, ತೋರುತ್ತದೆ. ಯಾರೋ ಅವಳನ್ನು ಬಲವಂತವಾಗಿ ಸನ್ಯಾಸಾಶ್ರಮಕ್ಕೆ ಕರೆತಂದಿರಬೇಕೆಂದು ತೋರುತ್ತಿದ್ದಿತು. ಅವಳ ಜತೆಗಾತಿಯು ವಾಸ್ತವಿಕವಾಗಿ ಸನ್ಯಾಸಿನಿಯೇ ಅಹುದು, ಅವಳ ಕುಸುಮಸದೃಶವಾದ ಕೋಮಲವಾದ ಅಂಗವು ಕಾವಿಯ ಬಟ್ಟೆ ಯಿಂದ ಮುಚ್ಚ ಲ್ಪಟ್ಟಿದ್ದಿತು. ಅವಳ ಕೇಶರಾಶಿಯು ಬಾಚಿಕೊಳ್ಳದೆ, ಬೇಕೆಂದು ಧೂಳಿಯಲ್ಲಿ ಹೊಸಕಿದಹಾಗೆ, ಧೂಳು ಕೂತು ಗಾಳಿಗೆ ಹಾರಾಡುತ್ತಿದ್ದಿತು, ಅವಳಾ ಚಂದ್ರ
ಪುಟ:ಕೋಹಿನೂರು.djvu/೯೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.