ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨೪ ಕ್ರಾಂತಿ ಕಲ್ಯಾಣ ಉಲ್ಲೇಖನಗಳನ್ನು ನೆನಪಿಸಿಕೊಳ್ಳುವುದರಲ್ಲಿ ಹೆಚ್ಚು ಹೊತ್ತು ಹಿಡಿಯಲು ಮೊದಲಾಗಿ ಪ್ರವಚನ ಕುಂಟುತ್ತ ಕೊಂಚ ಕಾಲ ನಡೆದ ಮೇಲೆ, ಗುರುಕುಲದ ಪ್ರಾಧ್ಯಾಪಕನು ಮುಗಿಸಲು ಸಲಹೆಯಿತ್ತನು. “ಕಲ್ಯಾಣದ ಸುದ್ದಿ ಕೇಳಿ ಅಣ್ಣನವರು ವಿಚಲಿತರಾಗಿದ್ದಾರೆ. ಪ್ರವಚನ ಮುಗಿಸುವ ಸೂಚನೆಯನ್ನು ನಾವು ಅನುಮೋದಿಸುತ್ತೇವೆ,” ಎಂದು ಸಮೀಪದ ಅಗ್ರಹಾರಗಳಿಂದ ಬಂದಿದ್ದ ಶಿಷ್ಯರು ಹೇಳಿದರು. ಸಲಹೆ ಬಸವಣ್ಣನವರಿಗೆ ಸೂಕ್ತವಾಗಿ ಕಂಡಿತು. ಪ್ರವಚನದ ವಿಚಾರವನ್ನು ಅಷ್ಟಕ್ಕೆ ನಿಲ್ಲಿಸಿ, ಸಭೆಯಲ್ಲಿದ್ದವರಿಗೆ ಕೈಮುಗಿದು ಅವರು ಹೇಳಿದರು : “ಕಲ್ಯಾಣದಿಂದ ಬಂದ ದುರ್ವಾರ್ತೆ ಬರಸಿಡಿಲಂತೆ ನನ್ನನ್ನು ಸ್ತಂಭಿತಗೊಳಿಸಿದೆ. ಚಾಲುಕ್ಯರಾಜ್ಯದ ಸರ್ವಾಧಿಕಾರಿ ಮಹಾಮಂಡಲೇಶ್ವರ ಬಿಜ್ಜಳರಾಯರು ಅಪರಿಚಿತ ಕೊಲೆಗಡುಕರಿಂದ ಹತರಾದರು. ಶರಣರು ಕಲ್ಯಾಣವನ್ನು ಬಿಟ್ಟು ಸಹ್ಯಾದ್ರಿಯ ಅರಣ್ಯ ಪ್ರದೇಶಕ್ಕೆ ವಲಸೆ ಹೋದರು. ಅಪ್ಪಣ್ಣನಿಂದ ಈ ದುರ್ವಾರ್ತೆಗಳನ್ನು ಕೇಳಿದಾಗ ನನಗಾದ ಅಪಾರ ದುಃಖವನ್ನು ನಿಮ್ಮ ಮುಂದಿಡುವುದು ಈಗ ನನ್ನ ಉದ್ದೇಶವಲ್ಲ. ಈ ವಿಷಾದಕರ ದುಃಖಪೂರ್ಣ ಸಂದರ್ಭದಲ್ಲಿ ಕೊಲೆಗಡುಕರ ಖಡ್ಗಕ್ಕೆ ಬಲಿಯಾದ ಸರ್ವಾಧಿಕಾರಿ ಬಿಜ್ಜಳರಾಯರ ಗುಣಗಾನ ಮಾಡಿ, ಅವರ ಆತ್ಮಕ್ಕೆ ಕೂಡಲಸಂಗಮ ದೇವನು ಶಾಂತಿ ಸಮಾಧಾನಗಳನ್ನು ಕರುಣಿಸಲೆಂದು ಹಾರೈಸುವುದು ನನ್ನ ಕರ್ತವ್ಯವಾಗಿದೆ,” – ಎಂದು ಹೇಳಿ ಬಸವಣ್ಣನವರು ಕೆಲವು ಕ್ಷಣಗಳು ಕಣ್ಣುಗಳನ್ನು ಮುಚ್ಚಿ ಧ್ಯಾನಾಸಕ್ತರಂತೆ ಕುಳಿತರು. ಬಸವಣ್ಣನವರ ದುಃಖದಲ್ಲಿ ತಾವೂ ಭಾಗಿಗಳಾದಂತೆ ಸಭೆಯಲ್ಲಿದ್ದವರೆಲ್ಲ ಮೌನವಾಗಿದ್ದರು. ಅನೇಕರ ಕಣ್ಣುಗಳಲ್ಲಿ ಕಂಬನಿ ಕೂಡಿದವು. - ಬಸವಣ್ಣನವರು ಕರೆದು ಮಾತು ಮುಂದುವರಿಸಲು ಸಿದ್ದರಾದಾಗ ಎಲ್ಲರೂ ವಿಸ್ಮಯಾತುರಗಳಿಂದ ಅವರನ್ನೇ ನೋಡುತ್ತಿದ್ದರು. ಬಸವಣ್ಣನವರು ಹೇಳಿದರು : - “ಈ ವಿಷಾದಕರ ದುರ್ಘಟನೆಗಳ ವಿಚಾರ ಪ್ರಸ್ತಾಪಿಸುವ ಮೊದಲು ಅವುಗಳಿಂದ ವೈಯಕ್ತಿಕವಾಗಿ ನನ್ನ ಮೇಲಾದ ಪರಿಣಾಮವನ್ನು ಕುರಿತು ಬಿಚ್ಚು ಮನದಿಂದ ನಾಲ್ಕು ಮಾತುಗಳನ್ನು ಆಡುವುದು ಅಗತ್ಯವೆಂದು ಭಾವಿಸುತ್ತೇನೆ. “ಅನಂತಂ ಬತ ! ಮೇವಿತಂ ಯಸ್ಯಮೇನಾಸ್ತಿ ಕಿಂಚನ | ಮಿಥಿಲಾಯಾಂ ಪ್ರದೀಪ್ತಾಯಾಂ ನ ಮೇ ಕಿಂಚಿತ್ ಪದಚ್ಯತೇ||” ಎಂದು ಹೇಳಿದ ವಾಗದ್ವಿತಿಯಂತಾಗಿದ್ದೇನೆ ಈಗ ನಾನು. 'ನನ್ನ ಸಂಪತ್ತು