ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಪ್ರಸ್ಥಾನ ೪೨೫ ಅನಂತವಾದರೂ ನನ್ನದಾಗಿ ಏನೂ ಇರುವುದಿಲ್ಲ. ಮಿಥಿಲಾನಗರ ಸುಟ್ಟು ಹೋದರೆ ನನ್ನದೇನೂ ಸುಟ್ಟುಹೋಗುವುದಿಲ್ಲ' ಎಂದು ಜಂಭದಿಂದ ಹೇಳಿದ ಒಬ್ಬ ಸನ್ಯಾಸಿ ತನ್ನ ಚೀವರ ಕಮಂಡಲುಗಳನ್ನು ಕಳೆದುಕೊಂಡಾಗ ಎರಡು ಕಣ್ಣುಗಳಿಂದಲೂ ಅತ್ತು, ಆಶ್ರಮವಾಸಿಗಳೆಲ್ಲರ ಅಪಹಾಸ್ಯಕ್ಕೆರವಾದನೆಂದು ಆ ಕಥೆ ಮುಗಿಯುತ್ತದೆ. “ಅಸಂಗ್ರಹ ನಿರ್ಮೋಹ ನಿರ್ಮಮತೆಗಳನ್ನು ಪ್ರಯತ್ನಪೂರ್ವಕವಾಗಿ ಅಭ್ಯಾಸ ಮಾಡಿಕೊಳ್ಳಲು ಪ್ರಯತ್ನಿಸಿದ ನಾನು, ಕಲ್ಯಾಣವನ್ನು ಬಿಟ್ಟು ಕೂಡಲಸಂಗಮಕ್ಕೆ ಬಂದಾಗ ಆ ಎಲ್ಲ ಬಂಧನಗಳಿಂದ ವಿಮುಕ್ತನಾದನೆಂದು ಭಾವಿಸಿದ್ದೆ. ಆ ಭ್ರಮೆ ಇಂದು ಹರಿಯಿತು. ಕಲ್ಯಾಣವು ನನ್ನ ಚೀವರ, ಬಿಜ್ಜಳರಾಯರು ನನ್ನ ಕಮಂಡಲು. ಅವೆರಡನ್ನು ಕಳೆದುಕೊಂಡು ಕಣ್ಣೀರಿಡುತ್ತ ಈಗ ನಾನು ನಿಮ್ಮ ಮುಂದೆ ನಿಂತಿದ್ದೇನೆ. ಬಿಜ್ಜಳನಿಲ್ಲದ ಕಲ್ಯಾಣ, ಕಲ್ಯಾಣವನ್ನು ಬಿಟ್ಟ ಶರಣರು, ನನ್ನ ಎಲ್ಲ ಸಾಧನೆ ಸಂಕಲ್ಪಗಳು ವಿಫಲವಾದುದರ ಪ್ರತೀಕ. “ಆರು ವರ್ಷಗಳ ಹಿಂದೆ ಬಿಜ್ಜಳರಾಯರು ಚಾಲುಕ್ಯ ಅರಸೊತ್ತಿಗೆಯನ್ನು ತಮ್ಮ ಅಂಕೆಯಲ್ಲಿಟ್ಟುಕೊಂಡು, ರಾಜ್ಯವನ್ನೇ ಅಪಹರಿಸಲು ಯೋಚಿಸುತ್ತಿರುವರೆಂಬ ಸಂದೇಹ ಹುಟ್ಟಿದ ಕೂಡಲೆ ನಾನು ಸ್ವಯಂ ಪ್ರೇರಣೆಯಿಂದ ಮಂತ್ರಿ ಪದವಿಯನ್ನು ಬಿಟ್ಟುಕೊಟ್ಟು ಅಧಿಕಾರ ನಿವೃತ್ತನಾದೆ. ಅಲ್ಲಿಂದೀಚೆಗೆ ಬಿಜ್ಜಳರಾಯರೊಡನೆ ನನಗೆ ರಾಜಕೀಯವಾಗಿ ಯಾವ ಸಂಬಂಧವೂ ಇರುವುದಿಲ್ಲ. ರಾಜಕೀಯದಿಂದ ದೂರವಾಗಿದ್ದ, ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ದಿನ ದಿನಕ್ಕೆ ಹೆಚ್ಚು ಆಸಕ್ತಿ ವಹಿಸುವುದು ಆಗ ನನ್ನ ಉದ್ದೇಶವಾಗಿತ್ತು. ತ್ರಿಕರಣ ಪೂರ್ವಕವಾಗಿ ನಾನು ಅದರಂತೆ ನಡೆದಿರುವೆನೆಂದು ನಿಮ್ಮ ಮುಂದೆ ನಿಂತು ಧೈರ್ಯವಾಗಿ ಹೇಳುತ್ತೇನೆ. ಈ ಕಾರಣದಿಂದ ಬಿಜ್ಜಳರಾಯರ ರಾಜಕೀಯ ಚಟುವಟಿಕೆಗಳನ್ನು ಕುರಿತು ದೀರ್ಘವಾಗಿ ಪ್ರಸ್ತಾಪಿಸಲು ನಾನು ಅಸಮರ್ಥನೂ, ಅನಧಿಕಾರಿಯೂ ಆಗಿದ್ದೇನೆ. “ಬಿಜ್ಜಳರಾರರು ಚತುರರೂ, ದಕ್ಷರೂ ಆದ ಆಡಳಿತಗಾರರು. ಸಮಯೋಚಿತವಾದ ಅವರ ಜಾಣೆಯಿಂದ ಚಾಲುಕ್ಯ ರಾಜ್ಯಕ್ಕೆ ಒದಗಿದ್ದ ಅಂತರ್ಯುದ್ಧ, ಅನೇಕ ಆರ್ಥಿಕ ಅಪಘಾತಗಳು ಪರಿಹಾರವಾದವು. ಅದಕ್ಷರೂ, ಅನುಭವವಿಲ್ಲದವರೂ, ವಿಲಾಸಕ್ತರೂ ಆದ ರಾಜರು ಅರಸೊತ್ತಿಗೆ ಏರಿದಾಗ ರಾಜ್ಯಕ್ಕೆ ಆಗುವ ಹಾನಿಯನ್ನು ಧರ್ಮಶಾಸ್ತ್ರಗಳು ವಿಫುಲವಾಗಿ ವರ್ಣಿಸಿವೆ. ಚಾಲುಕ್ಯರಾಜ್ಯ ಅಂತಹ ವಿಪತ್ತಿನಲ್ಲಿದ್ದಾಗ ಬಿಜ್ಜಳರಾಯರು ಅಧಿಕಾರ ಸೂತ್ರ ವಹಿಸಿಕೊಂಡರು. ಹನ್ನೆರಡು ವರ್ಷಗಳ ದಕ್ಷ ಆಡಳಿತದಿಂದ ರಾಜ್ಯದ ಸಂಪತ್ತು