ಈ ಪುಟವನ್ನು ಪರಿಶೀಲಿಸಲಾಗಿದೆ

________________

ಸಡಗರದಲ್ಲಿ ಈಗ ನಾನೊಲ್ಲೆನೆಂದು ಕಿವಿಗೆ ಹಾಕಿಕೊಳ್ಳದೆ ಇನ್ನೆಷ್ಟೋ ವರ್ಷ ಹೋಗಿವೆ. ಏವಂ ಚ ಕವಿಧರ್ಮದಿಂದ ಆಕೆಯನ್ನು ಓಲಯ್ಯುವಲ್ಲಿ, ಆಕೆಯ ಸಂದೇಶಗಳನ್ನು ನಂಬುಗೆಯಿಂದ ನೆರವೇರಿಸುವಲ್ಲಿ ನಾನು ಬೇಕಾದಷ್ಟು ಅಸಡ್ಡೆ ಮಾಡಿರುತ್ತೇನೆಂದುದನ್ನು ಪಶ್ಚಾತ್ತಾಪದಿಂದ ಒಪ್ಪಿಕೊಳ್ಳುತ್ತೇನೆ. ಆಕೆಯಾದರೂ ನನ್ನಲ್ಲಿ ಇವತ್ತಾದರೂ ಪ್ರತಿಕಾರವನ್ನು ಬಗೆದಿಲ್ಲವಾದರೆ, ಶಾನೆ ಸಿಟ್ಟುಗೊಂಡಿಲ್ಲವಾದರೆ,

 'ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾನ ಭವತಿ' ಎಂಬ ಮಾತು ನಮ್ಮಲ್ಲಿ ಈಡೇರಿತೆಂದೇ ನಿಜ.

ಈ ಕವಿತೆಗಳನ್ನು ಹೆಚ್ಚು ಕಡಿಮೆ ಇವುಗಳ ರಚನೆಯ ಕಾಲಕ್ರಮಕ್ಕೆ ಅನುಸಾರವಾಗಿ ಇಲ್ಲಿ ಕೊಟ್ಟಿರುತ್ತದೆ ಇವುಗ ಳಲ್ಲಿ ಎಲ್ಲವೆಂಬಂತೆ ಅಂದಂದಿನ ಸ್ವದೇಶಾಭಿಮಾನಿ ~ ಕಂರೀರವಸತ್ಯಾಗ್ರಹಿ- ರಾಷ್ಟ್ರ ಬಂಧು-ಬೋಧಿನಿ- ಕನ್ನಡ ಕೋಗಿಲೆ ಕನ್ನಡ ಸಹಕಾರಿ ಸುವಾಸಿನಿ - ಕರ್ಣಾಟಕ ಕೇಸರಿ - ಉದಯ ಭಾರತ- ಶಕ್ತಿ- ಕರ್ಣಾಟಕ ಸಾಹಿತ್ಯ ಪರಿಷತ್ಪತ್ರಿಕೆ - ಸರ ಸ್ವತಿ - ಜಯಕರ್ಣಾಟಕ-ಕಥಾಂಜಲಿ ಎಂಬೀ ಪತ್ರಿಕೆಗಳಲ್ಲಿ ಪ್ರಕಟವಾದುವು. ಇವುಗಳ ಅರ್ಹತೆಗೆ ಎಷ್ಟೋ ಮಿಕ್ಕಿದ ಉದಾರಾತಿಧ್ಯವನ್ನು ತಂತಮ್ಮ ಪತ್ರಿಕೆಗಳಲ್ಲಿ ಇವಕ್ಕೆ ಇತ್ತ ಬಗ್ಗೆ ಅವೆಲ್ಲ ಪತ್ರಿಕೆಗಳ ಸಂಪಾದಕ ಮಹಾಶಯರುಗಳಿಗೆ ಅತ್ಯಂತ ಕೃತಜ್ಞನಾಗಿರುತ್ತೇನೆ. ಇತಿ ಶಮ್.

ಮಂಜೇಶ್ವರ ಪ್ರಮೋದ ಸಂ! ಆಶೀಜ ಶುಕ್ಲ ೪ ಗೋವಿಂದ ಪೈ ೩೬ ಸಪ್ಟೆಂಬರ್ ೧೯೩೦