ಈ ಪುಟವನ್ನು ಪರಿಶೀಲಿಸಲಾಗಿದೆ
________________
ಮುನ್ನುಡಿ ಕಡಲ ಕರೆಯಲ್ಲಿ ಹೊತ್ತುಗಳೆಯಲೆಂದೇ ಆಡುತ್ತಿರುವ ಯಾವೊಂದು ಮಗುವಾದರೂ ಅಲ್ಲಲ್ಲಿ ಮೇಲಕ್ಕೆ ಉರುಳಿದ ಚಿಪ್ಪುಗಳನ್ನು ತಾನು ಹೆಕ್ಕಿದಂತೆ ಮರಳಿ ತೆರೆಗಳ ಆಳಕ್ಕೆ ಒಗೆದು ಬಿಡದೆ ಅವನ್ನು ತನ್ನ ಕಣ್ಣ ಮುಂದೆ ಒಟ್ಟು ಹಾಕುವಂತೆ, ಅಲ್ಲಲ್ಲಿ ಚದರಿದ್ದ ನನ್ನಿ ಕೆಲವು ಕವಿತೆಗಳನ್ನು ಅಂದಂದಿನ ಮರೆಯಿಂದೆತ್ತಿಕೊಂಡು ಹೀಗೆ ಸಂಗ್ರಹವಾಗಿ ಕೂಡಹಾಕಿರುವೆನಷ್ಟೆ, ಅಥವಾ ಯಾವಾವೆಡೆಯಲ್ಲಿರುವ ತನ್ನ ಮಕ್ಕಳನ್ನು ಒಟ್ಟಿಗೇ ಒಮ್ಮೆ ನೋಡ ಬೇಕೆಂದು ಕುತೂಹಲಿಸಿ ಅವರೆಲ್ಲರನ್ನು ತನ್ನ ಬಳಿಗೆ ಬರಿಸಿಕೊಂಡು ಸುಖಿಸುವ ತಾಯ ಮಮತೆಯಿಂದ ಇವನ್ನು ಹೀಗೆ ಸಂಗ್ರಹಿಸಿರುವೆನೆಂದರೂ ಸರಿಯೇ, ಆದರೆ ಈ ಬಗೆಯ ಮರುಕಾಣಿಕೆಯ ಅವಕಾಶವನ್ನು ಇವಕ್ಕೆ ಇತ್ತುದರಿಂದ ತಾನೆ ಇವುಗಳ ಜೀವನಾ ವಧಿಯನ್ನು ಹೆಚ್ಚಿಸುವೊಂದು ಹಂಚಿಕೆಯನ್ನೂ ಹೂಡಿದಂತಾಗದೇ ಎಂದು ರವಷ್ಟಾದರೂ ವಂಚಿಸಿಕೊಳ್ಳಲೊಲ್ಲೆ, ಏಕೆಂದರೆ ಅದೊಂದು ನನ್ನಳವೂ ಅಲ್ಲ, ಯಾರಳವೂ ಅಲ್ಲ, ದೈವಾಯತ್ತವಷ್ಟೇ, ತಾಯಿ ಮಕ್ಕಳನ್ನು ಹೆರಬಲ್ಲಳೇ ಹೊರತು ಅವಕ್ಕೆ ಆಯುಸ್ಸನ್ನು ಕೊಡಬಲ್ಲಳೇ ? ಈ ಕವಿತೆಗಳು ಕಳೆದ ಮೂವತ್ತೇನೋ ವರ್ಷಗಳಲ್ಲಿ ಅಷ್ಟಮಿಗೊಂದು ಶಿವರಾತ್ರಿಗೊಂದು ಎಂಬಂತೆ ರಚಿತವಾದುವು. ಅವೆಲ್ಲ ವರ್ಷಗಳಲ್ಲಿ ನನ್ನ ಲೇಖನಿ ಏಕಪ್ರಕಾರವಾಗಿ ಜಾಗೃತವಾಗಿದ್ದಿತೆಂದು ಭಾವಿಸಲಾಗದು. ಆಗ್ಗಾಗ್ಗೆ ಕವಿತಂದ ದುಃಖಗಳಲ್ಲಿ ಕರೆ ಕೇಳಿಸದೆ ನಡುನಡುವೆ ಎಷ್ಟೋ ವರ್ಷಗಳಾಗಿವೆ; ಕೇಳಬಂದ ಕರೆಯನ್ನು ಕೂಡ ಒತ್ತಾಯದ ಕೆಲಸಗಳ