ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಗಿಳಿವಿಂಡು ಧರುಮಂಗಳರುಹವು ನಮಗೆ ಹಗೆಯನ್ನಿರಿಸಲೆಮ್ಮೊಳಗೆಭಾರತೇಯರಾವೆಮಗೊಂದೆ ತವರೀಕೆಯೆ ನಮ್ಮಯ ಜನನಿ ಮುನ್ನಾದ ಹಲ ನಾಡಿಂದು ಇತಿಹಾಸದಿ ಕನವರಿಸಂದು, ಕಂದದು ಕುಂದದು ಎಂದೆಂದು ಮೂಾಕೆಯ ಸೌಭಾಗ್ಯದ ತರಣಿ ನಿನ್ನ ನಾಮವನೆ ಪಾಡುವೆವು, ನಾವಿದನೊಂದನೆ ಬೇಡುವೆವು~ ನಮ್ಮನಿಂತೆ ಜನುಮಜನುಮದಿ | ನಿನ್ನುದರದಿ ತಳೆಯೌ ಜನನಿ | ೭ || ವಿದಾಯ (1911ನೆಯ ಎಪ್ರಿಲ್ ತಿಂಗಳ - Modern Review' ಮಾಸಪತ್ರಿಕೆಯಲ್ಲಿ ಪ್ರಕಟವಾದ ಶ್ರೀ ರವೀಂದ್ರನಾಥ ಠಾಕೂರರ " Farewell ' ಎಂಬ ಕವಿತೆಯನ್ನು ಅನುವರ್ತಿಸಿ ಬರೆದುದು) ಫೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು ! ಮಬ್ಬ ಮರೆಯ ಮುಂಜಾನೆಯಲಿ ಬರಿತೂಳ ಳ ನಿಡುಚಾಚುತಲಿ, ಎಲ್ಲಿಹೆ ಮಗುವೇ ? ಬಾರೆಂದು ದಳದಳನೆನ್ನ ನೀ ಕರೆವಂದು, ಅವ್ವಾ ಮುದ್ದಿನ ಮಗುವಿಲ್ಲಿ ಇಲ್ಲವೆನುವೆ ನಿನ್ನ ಕಿವಿಯಲ್ಲಿ ಪೋಗಗೊಡೆನ್ನನು ತಾಯೆ ಬಿಡು, ಮುದ್ದಿನ ತಾಯೇ ಪೋಗಗೊಡು